ಬೆಂಗಳೂರು: ಕಳೆದ ಮೂರು ತಿಂಗಳಿನಿಂದ ಬೇಸಿಗೆಯ ಬಿಸಿಲಿನಿಂದ ಕಂಗೆಟ್ಟ ಕರ್ನಾಟಕದ (karnataka) ಜನತೆ ಇಂದು ಮಳೆಯಾಗಬಹುದೋ (rain), ನಾಳೆ ಮಳೆ ಸುರಿಯಬಹುದೋ (Rain in karnataka) ಎನ್ನುವ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ಆದರೆ ರಾಜ್ಯದ ಅಲ್ಲಿ ಇಲ್ಲಿ ಸಣ್ಣ ಮಳೆ ಸುರಿದು ಕೊಂಚ ನಿರೀಕ್ಷೆ ಮೂಡಿಸಿದರೂ ಬಳಿಕ ತೀವ್ರ ಬಿಸಿಲು ಮತ್ತಷ್ಟು ಧಗೆಯನ್ನು ಹೆಚ್ಚು ಮಾಡಿದೆ.
ಭಾರತದ (india) ಸಿಲಿಕಾನ್ ಸಿಟಿ (Silicon City) ಬೆಂಗಳೂರಿನಲ್ಲಿ (bengaluru) ಕಳೆದ ಮೂರು ತಿಂಗಳಿನಿಂದ ತೀವ್ರ ಬಿಸಿಲು ಜನರನ್ನು ಕಂಗೆಡಿಸಿದೆ. ಏಪ್ರಿಲ್ ನಲ್ಲಿ (april) ಮಳೆಯಾಗುವ ನಿರೀಕ್ಷೆ ಇತ್ತು. ಆದರೆ ಇದೀಗ ಭಾರತೀಯ ಹವಾಮಾನ ಇಲಾಖೆಯು (IMD) ಏಪ್ರಿಲ್‌ನಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ಏಪ್ರಿಲ್ ತಿಂಗಳಲ್ಲಿ ಯಾವುದೇ ಮಳೆಯಾಗುವುದಿಲ್ಲ (Weather Report ಎಂದು ಹೇಳಿದೆ.
ಬೆಂಗಳೂರಿನಲ್ಲಿ ಶುಷ್ಕ ಸ್ಪೆಲ್‌ಗಳು ಸುಮಾರು 100- 120 ದಿನಗಳವರೆಗೆ ಇರುತ್ತದೆ. ಆದರೆ ಇದು ಸಾಮಾನ್ಯಕ್ಕಿಂತ ಹೆಚ್ಚು ದೀರ್ಘವಾಗಿದೆ. ಆರಂಭದಲ್ಲಿ ಭಾರತೀಯ ಹವಾಮಾನ ಇಲಾಖೆಯು ವಾರದೊಳಗೆ ಬೆಂಗಳೂರಿಗೆ ಮಳೆಯಾಗುವ ಮುನ್ಸೂಚನೆ ನೀಡಿತು. ಆದರೆ ಇತ್ತೀಚಿನ ವರದಿ ವರದಿ ಪ್ರಕಾರ ತೀವ್ರವಾದ ಶಾಖದ ಕಾರಣದಿಂದ ಶೀಘ್ರದಲ್ಲಿ ಮಳೆಯಾಗುವುದು ಸಾಧ್ಯವಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: Dubai Rain: ಭಾರತೀಯ ಕುಸ್ತಿಪಟುಗಳ ಪ್ಯಾರಿಸ್ ಒಲಿಂಪಿಕ್ಸ್ ಕನಸಿಗೆ ತಣ್ಣೀರೆರಚಿದ ದುಬೈ ಮಳೆ
ಮುಂದಿನ 10 ದಿನ ಮಳೆಯಿಲ್ಲ
ಘಟ್ಟ ಪ್ರದೇಶಗಳನ್ನು ಹೊರತುಪಡಿಸಿ ಮುಂದಿನ 10 ದಿನ ಬೆಂಗಳೂರು ಸೇರಿ ಕರ್ನಾಟಕದ ಯಾವುದೇ ಪ್ರದೇಶಗಳಲ್ಲಿ ಮಳೆಯಾಗುವುದಿಲ್ಲ ಎಂದು ECMWF ಮತ್ತು GFS ಸೂಚಿಸುತ್ತದೆ.
ಏಪ್ರಿಲ್‌ನಲ್ಲಿ ನಿರೀಕ್ಷಿತ ತುಂತುರು ಮಳೆಯಾಗುವ ಸಂಭವ ಇದೆ. ಕೆಲವು ಪ್ರದೇಶಗಳಲ್ಲಿ ಮಳೆ ಕಾಣಿಸಿಕೊಳ್ಳಬಹುದು, ಇನ್ನು ಕೆಲವು ಪ್ರದೇಶಗಳಲ್ಲಿ ಇಲ್ಲದೇ ಇರಬಹುದು.
ಮೇಯಲ್ಲಿ ಮಳೆ ಸಾಧ್ಯತೆ
ಮೇ ತಿಂಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಇದು ಬಿಸಿಲಿನ ತೀವ್ರತೆಯಿಂದ ಉರಿಯುತ್ತಿರುವ ಧರೆಯನ್ನು ಕೊಂಚ ತಂಪಾಗಿಸುತ್ತದೆ.
ಚಂಡಮಾರುತ ಎಚ್ಚರಿಕೆ
ಮೇ ತಿಂಗಳಲ್ಲಿ ಚಂಡಮಾರುತ ಕಾಣಿಸಿಕೊಳ್ಳುವ ಎಚ್ಚರಿಕೆ ನೀಡಲಾಗಿದೆ. ಮುಂದಿನ ವಾರದಲ್ಲಿ ಭಾಗಶಃ ಮೋಡ ಮತ್ತು ಬಹುತೇಕ ಸ್ಪಷ್ಟವಾದ ಆಕಾಶ ಕಾಣಿಸಲಿದೆ. ಏಪ್ರಿಲ್‌ನಲ್ಲಿ 21ರಿಂದ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ.
ಟೈಮಂಡ್‌ಡೇಟ್ ಮುನ್ಸೂಚನೆ ಪ್ರಕಾರ ಏಪ್ರಿಲ್ 30ರಂದು ಶೇ. 55ರಷ್ಟು ಮಳೆಯಾಗುವ ಸಾಧ್ಯತೆಯಿದ್ದು, 6.5 ಮಿಮೀಗಿಂತ ಹೆಚ್ಚಿನ ಮಳೆ ಬೀಳುವ ನಿರೀಕ್ಷೆಯಿದೆ.
ದುಬೈಯಲ್ಲಿ ಭಾರೀ ಮಳೆ
ಸಾಮಾನ್ಯವಾಗಿ ಒಣ ಹವಾಮಾನ ಮತ್ತು ಸುಡುವ ತಾಪಮಾನವನ್ನು ಹೊಂದಿರುವ ಒಮಾನ್ , ದುಬೈ ಬಹ್ರೇನ್ ರಾಷ್ಟ್ರಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಹಠಾತ್ ಪ್ರವಾಹ ಉಂಟಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಅನಿರೀಕ್ಷಿತವಾದ ಜಲಧಾರೆ ಮರುಭೂಮಿ ನಗರವನ್ನು ಸ್ತಬ್ಧಗೊಳಿಸಿದೆ. ಮಾತ್ರವಲ್ಲದೆ, ಹವಾಮಾನ ವೈಪರೀತ್ಯದ ಹೆಚ್ಚು ಸ್ಪಷ್ಟವಾದ ಪ್ರಭಾವವನ್ನು ತೋರಿಸಿ ಕಳವಳವನ್ನು ಹುಟ್ಟುಹಾಕಿದೆ.
ಆಕಸ್ಮಿಕ ಚಂಡಮಾರುತದ ಪ್ರಭಾವ ದುಬೈನ ಆಚೆಗೂ ವಿಸ್ತರಿಸಿದೆ. ಸಂಪೂರ್ಣ ಯುಎಇ ಮತ್ತು ನೆರೆಯ ಬಹ್ರೇನ್ ಪ್ರವಾಹ ಮತ್ತು ಅವ್ಯವಸ್ಥೆಯನ್ನು ಅನುಭವಿಸುತ್ತಿದೆ. ಎಮಿರೇಟ್ಸ್‌ನಾದ್ಯಂತ ಶಾಲೆಗಳನ್ನು ಮುಚ್ಚಲಾಗಿದೆ. ಆಲಿಕಲ್ಲು ಮಳೆ ಸುರಿದಿದೆ. ಸರ್ಕಾರಿ ನೌಕರರಿಗೆ ವರ್ಕ್ ಫ್ರಂ ಹೋಮ್ ಮಾಡಲು ಕೇಳಿಕೊಳ್ಳಲಾಗಿದೆ. ಚಂಡಮಾರುತದಿಂದಾಗಿ ಬಹ್ರೇನ್ ಕೂಡ ಪ್ರವಾಹವನ್ನು ಅನುಭವಿಸಿದೆ.