Site icon Vistara News

Weather report : ರಾಜ್ಯದ 6 ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ!

Mon and dad with child walking in road

ಬೆಂಗಳೂರು: ಮುಂದಿನ 24 ಗಂಟೆಯಲ್ಲಿ (Weather report) ಕರಾವಳಿಯ ಬಹುತೇಕ ಕಡೆಗಳಲ್ಲಿ, ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ (Rain News) ಸಾಧ್ಯತೆ ಇದೆ.

ಭಾರೀ ಮಳೆಗೆ ಬಿರುಗಾಳಿ ಸಾಥ್‌

ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ 48 ಗಂಟೆಯಲ್ಲಿ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನ ಸಾಧ್ಯತೆ ಇದ್ದು, ಬಿರುಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ಇರುವ ಸಾಧ್ಯತೆ ಇದೆ.

ಮೀನುಗಾರರಿಗೆ ಎಚ್ಚರಿಕೆ

ಮುಂದಿನ 24 ಗಂಟೆಗಳಲ್ಲಿ ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40-45 ಕಿ.ಮೀ ಇಂದ 55 ಕಿ.ಮೀ ವೇಗದಲ್ಲಿ ಬೀಸುವ ವಾತಾವರಣವಿರುತ್ತದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಬೆಂಗಳೂರಲ್ಲಿ ಸಂಜೆಗೆ ಮಳೆ ಕಾಟ

ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಸಂಜೆ ಅಥವಾ ರಾತ್ರಿಯ ವೇಳೆಗೆ ಒಂದೆರಡು ಬಾರಿ ಗುಡುಗು ಸಹಿತ ಮಳೆಯಾಗಲಿದೆ. ಕೆಲವೊಮ್ಮೆ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 28 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇದನ್ನೂ ಓದಿ: Electric shock : ಡಿಶ್‌ ರಿಪೇರಿ ಮಾಡುವಾಗ ವ್ಯಕ್ತಿಗೆ ವಿದ್ಯುತ್‌ ಶಾಕ್‌! ಕೈ-ಕಾಲು ಸುಟ್ಟು ಕರಕಲು

ಕರಾವಳಿಯಲ್ಲಿ ಭರ್ಜರಿ ಮಳೆ

ನೈರುತ್ಯ ಮುಂಗಾರು ಶುಕ್ರವಾರ ಕರಾವಳಿಯಲ್ಲಿ ಚುರುಕಾಗಿದ್ದು, ಉತ್ತರ ಒಳನಾಡಿನಲ್ಲಿ ದುರ್ಬಲವಾಗಿತ್ತು ಹಾಗೂ ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು. ಕರಾವಳಿಯಲ್ಲಿ ವ್ಯಾಪಕವಾಗಿ ಹಾಗೂ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಕೊಟ್ಟಿಗೆಹಾರ, ಧರ್ಮಸ್ಥಳದಲ್ಲಿ 14 ಸೆಂ.ಮೀ ಭಾರಿ ಮಳೆಯಾಗಿದೆ. ಮಂಗಳೂರು ವಿಮಾನ ನಿಲ್ದಾಣ, ಕೊಲ್ಲೂರು ತಲಾ 9 ಹಾಗೂ ಬೆಳ್ತಂಗಡಿ 8, ಪಣಂಬೂರು, ಭಾಗಮಂಡಲ ತಲಾ 7 ಸೆಂ.ಮೀ ಮಳೆಯಾಗಿದೆ.

ಉಪ್ಪಿನಂಗಡಿ, ಮಂಗಳೂರು, ಪುತ್ತೂರು, ಗೇರ್ಸೊಪ್ಪ, ಸಿದ್ದಾಪುರ, ಶೃಂಗೇರಿಯಲ್ಲಿ ತಲಾ 5 ಸೆಂ.ಮೀ ಹಾಗೂ ಕಮ್ಮರಡಿ, ವಿರಾಜಪೇಟೆ ತಲಾ 4 ಮಳೆಯಾಗಿದೆ. ಮಾಣಿ, ಸುಳ್ಯ, ಹೊನಾವರ, ಕಾರವಾರ, ಅಂಕೋಲಾ, ಬೇಲಿಕೇರಿ, ಕುಂದಾಪುರ, ಲಿಂಗನಮಕ್ಕಿ, ಸಕಲೇಶಪುರ, ಕಂಪ್ಲಿ, ಜಯಪುರ, ಕಳಸದಲ್ಲಿ ತಲಾ 3ಸೆಂ.ಮೀ ಮಳೆಯಾಗಿದೆ.

ಉಡುಪಿ, ಕಾರ್ಕಳ, ಕದ್ರಾ, ಮಂಕಿ, ಹುಬ್ಬಳ್ಳಿ, ಹುಂಚದಕಟ್ಟೆ, ತಾಳಗುಪ್ಪ, ನಾಪೋಕ್ಲು, ಪೊನ್ನಂಪೇಟೆ, ಹಾಸನದಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಮಾಣಿ, ಸುಳ್ಯ, ಹೊನಾವರ, ಮೂಲ್ಕಿ, ಶಿರಾಲಿ, ಕ್ಯಾಸಲ್ ರಾಕ್, ಬನವಾಸಿ, ಸಿದ್ದಾಪುರ, ಯಲ್ಲಾಪುರ, ಗೋಕರ್ಣ, ಮಂಚಿಕೆರೆ , ಗಂಗಾವತಿ ಎಆರ್‌ಜಿ, ಗಂಗಾವತಿ, ರಾಯಲ್ಪಾಡು , ಮಂಡಗದ್ದೆ, ಕೊಪ್ಪ, ಬಾಳೆಹೊನ್ನೂರು, ಚಿಕ್ಕಬಳ್ಳಾಪುರ, ಆನವಟ್ಟಿ, ಹಿರಿಯೂರಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version