Edited By: Pragati Bhandari

ಬಿಗ್‌ಬಾಸ್‌ ಸೀಸನ್‌ 10ರ (BBK SEASON 10: ) ಎಂಟನೇ ವಾರ ನಮ್ರತಾ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ.

ಇಷ್ಟು ದಿನ ವಿನಯ್‌ ಅವರ ಚಮಚ ಎಂದು ಕರೆಸಿಕೊಳ್ಳುತ್ತಿದ್ದ ನಮ್ರತಾ ಈ ಬಾರಿ ತಾವೊಬ್ಬರೇ ನಿಂತು ಆಡಿದ್ದಾರೆ.

ಈ ವಾರ ನಮ್ರತಾ ವೋಟ್‌ ವಿಚಾರವಾಗಿಯೂ ಕುಗ್ಗಿ ಹೋಗಿದ್ದರು. ಆದರೀಗ ತಮ್ನನ್ನು ತಾವು ಪ್ರೂವ್‌ ಮಾಡಿಕೊಂಡಿದ್ದಾರೆ.

 ಈ ವಾರ ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಪ್ರತಾಪ್‌ ಅವರಿಗೆ ಕಿಚ್ಚನ ಮುಂದೆ ಧನ್ಯವಾದ ಕೂಡ ಸೂಚಿಸಿದರು

 ನಮ್ರತಾ ಗೌಡ ಅವರು ಡ್ರೋನ್ ಪ್ರತಾಪ್‌ಗೆ “ನಿಮ್ಮಿಂದಲೇ ನನಗೆ ಉತ್ತಮ, ಕಿಚ್ಚನ ಚಪ್ಪಾಳೆ ಸಿಕ್ಕಿದೆ. ನಿಮ್ಮ ತಂಡಕ್ಕೆ ಬಂದಿದ್ದಕ್ಕೆ ಇದೆಲ್ಲ ಸಿಕ್ಕಿದೆ” ಎಂದು ಹೇಳಿದ್ದರು.

ಡ್ರೋನ್ ಪ್ರತಾಪ್ ಅವರು “ನಿಮಗೆ ಉತ್ತಮ ಕೊಡಿಸ್ತೀನಿ, ಕಿಚ್ಚನ ಚಪ್ಪಾಳೆ ಕೊಡಿಸ್ತೀನಿ” ಅಂತಲೇ ನಮ್ರತಾ ಗೌಡಗೆ ಸಾಕಷ್ಟು ಬಾರಿ ಮಾತು ಕೊಟ್ಟಿದ್ದರು.

ಆದರೆ ತನಿಷಾ ಪರ ನಮ್ರತಾ ಆಟ ಆಡಿ ಮನೆಯವರಿಂದ ಉತ್ತಮ ಪಡೆದುಕೊಂಡು, ಕಿಚ್ಚ ಅವರಿಂದ ಚಪ್ಪಾಳೆಯನ್ನು ಪಡೆದುಕೊಂಡರು.