ಭಾಗ್ಯಳಿಗೆ ಸದಾ ತೊಂದರೆ ಕೊಡುವ ಕಿತಾಪತಿ ʻಶ್ರೇಷ್ಠʼ ಬಗ್ಗೆ ನಿಮಗೆಷ್ಟು ಗೊತ್ತು?

ಐದು ವರ್ಷಗಳ ಕಾಲ  ಕಾವ್ಯ ಗೌಡ ತೆಲುಗು ಧಾರಾವಾಹಿಯಲ್ಲಿ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. ಈಗ ಮತ್ತೆ ಕನ್ನಡಕ್ಕೆ ಬಂದಿದ್ದಾರೆ.

 ಜೀ ಕನ್ನಡ ವಾಹಿನಿಯ 'ಮಿಸ್ಟರ್ & ಮಿಸ್ಸೆಸ್‌ ರಂಗೇಗೌಡ' ಧಾರಾವಾಹಿಗೆ ಕಾವ್ಯ ಗೌಡ ಅವರು ಮೊದಲು ಬಣ್ಣ ಹಚ್ಚಿದ್ದರು. ಇದರಲ್ಲಿ ಲೀಡ್ ರೋಲ್‌ನಲ್ಲಿ 100 ಎಪಿಸೋಡ್‌ಗಳಲ್ಲಿ ನಟಿಸಿದ್ದರು.

2 ವರ್ಷಗಳ ಹಿಂದೆ  ಉದಯ ಟಿವಿಯಲ್ಲಿ ಮೂಡಿ ಬಂದ 'ದೇವಯಾನಿ' ಧಾರಾವಾಹಿಯಲ್ಲಿ ನಟಿಸಿದ್ದರು.

 ವಿಜಯ್ ರಾಘವೇಂದ್ರ ನಟನೆಯ 'ರಿಂಗ ರಿಂಗ ರೋಸ್',  'ಶೋಧ' ಎಂಬ ಚಿತ್ರದಲ್ಲೂ ನಟಿಸಿದ್ದಾರೆ. 

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯಳ ಪತಿ ತಾಂಡವ್‌ನನ್ನು ಪ್ರೀತಿಸುತ್ತಿರುವ ಶ್ರೇಷ್ಠ ಅವರು ಈಗ ಮದುವೆಯನ್ನೂ ಆಗಿದ್ದಾರೆ. ಪ್ರೇಕ್ಷಕರೆಲ್ಲಾ ಶ್ರೇಷ್ಠ, ಭಾಗ್ಯಳಿಗೆ ತೊಂದರೆ ಕೊಡುತ್ತಿರುವದಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. 

 ಬೆಂಗಳೂರಿನವರಾದ ಕಾವ್ಯ ಅವರು ಬಿಕಾಂ ಓದಿದ್ದಾರೆ. 

ಭಾಗ್ಯಲಕ್ಷ್ಮೀ ಧಾರಾವಾಹಿ ಕಲರ್ಸ್‌ ಕನ್ನಡದಲ್ಲಿ ಸೋಮ-ಶನಿ ಸಂಜೆ 7ಗಂಟೆಗೆ ಪ್ರಸಾರ ಕಾಣುತ್ತಿದೆ.