Lakshmi Baramma Serial: 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಿಂದ ಹೊರಬಂದ್ರಾ ಕೀರ್ತಿ ಪಾತ್ರಧಾರಿ? ಸೀರಿಯಲ್‌ ನೋಡಲ್ಲ ಅಂದ್ರು ಫ್ಯಾನ್ಸ್‌!

ಕಲರ್ಸ್ ಕನ್ನಡ ವಾಹಿನಿಯ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಕೀರ್ತಿ ಪಾತ್ರ ಪ್ರೇಕ್ಷಕರಿಗೆ ಅಚ್ಚುಮೆಚ್ಚು

ಗುಲಾಬ್‌ ಗ್ಯಾಂಗ್‌, ರಂಗ್‌ ಬಿ ರಂಗ್‌ ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಿದ್ದರು. 

ಆಕೃತಿ, ರಾಧೇ ಶ್ಯಾಮ್‌ ಹಿಂದಿ ಧಾರಾವಾಹಿ, ಜುಮೆಲ ತಮಿಳು ಸೀರಿಯಲ್‌ನಲ್ಲಿ ನಟಿಸಿದ್ದರು. 

ತನ್ವಿ ರಾವ್‌ ಭರತನಾಟ್ಯ ಕಲಾವಿದೆಯಾಗಿದ್ದು, ಕಥಕ್‌ ಕೂಡ ಅಭ್ಯಾಸ ಮಾಡಿದ್ದಾರೆ

ಕೀರ್ತಿ ಪಾತ್ರಧಾರಿ ಬದಲಾಗಿರುವದಕ್ಕೆ ಫ್ಯಾನ್ಸ್‌ ಬೇಸರಗೊಂಡಿದ್ದಾರೆ. ಈ ಪಾತ್ರಕ್ಕೆ ತನ್ವಿ ಬಿಟ್ಟರೆ ಬೇರೆ ಯಾರೂ ಸೂಟ್‌ ಆಗಲ್ಲ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಪಾತ್ರದಲ್ಲಿ ಶಮಂತ್ ಬ್ರೊ ಗೌಡ, ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್, ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ, ಸುಪ್ರೀತಾ ಪಾತ್ರದಲ್ಲಿ ರಜನಿ ಪ್ರವೀಣ್ ಮುಂತಾದವರು ನಟಿಸುತ್ತಿದ್ದಾರೆ.

ಈ ಧಾರಾವಾಹಿಗೆ ಆರಂಭದಲ್ಲಿ ಒಳ್ಳೆಯ ಟಿಆರ್‌ಪಿ ಸಿಕ್ಕಿ ಟಾಪ್ 5 ಸ್ಥಾನ ಪಡೆದಿತ್ತು. ಇತ್ತೀಚಿನ ದಿನಗಳಲ್ಲಿ ಈ ಸೀರಿಯಲ್ ಟಾಪ್ 5 ಸ್ಥಾನದಿಂದ ಹೊರನಡೆದಿದೆ.