Bhagyalakshmi Serial: ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ರು ನಟಿ ಭೂಮಿಕಾ ರಮೇಶ್, ಭಾಗ್ಯಳ ಮುದ್ದಿನ ಲಡ್ಡು!

 ʻಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ನಟಿ ಭೂಮಿಕಾ ಲಕ್ಷ್ಮೀ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

ಭೂಮಿಕಾ ರಮೇಶ್ ಅವರು ಈ ಹಿಂದೆ ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು.

ಪ್ರಸ್ತುತ ತಮ್ಮ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ (ಬಿಸಿಎ) ಮಾಡುತ್ತಿದ್ದಾರೆ. 

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋನಲ್ಲಿ ಭೂಮಿಕಾ ಭಾಗಿಯಾಗಿದ್ದಾಗ ಅವರು 8ನೇ ತರಗತಿ ಓದುತ್ತಿದ್ದರು.

ಭೂಮಿಕಾ ಈಗ ತನ್ನ ಅಧ್ಯಯನದೊಂದಿಗೆ  ನಟನಾ ವೃತ್ತಿಜೀವನವನ್ನು ಏಕಕಾಲದಲ್ಲಿ ತೂಗಿಸಿಕೊಂಡು ಹೋಗುತ್ತಿದ್ದಾರೆ. 

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ದೊರೆಸಾನಿ' ಧಾರಾವಾಹಿಗೆ ಕರೆದಿದ್ದ ಆಡಿಷನ್‌ನಲ್ಲಿ ಭೂಮಿಕಾ ಚಿಕ್ಕವರು ಎನ್ನುವ ಕಾರಣಕ್ಕೆ ರಿಜೆಕ್ಟ್ ಆಗಿದ್ದರು.

 ಇದೀಗ ಭಾಗ್ಯಲಕ್ಷ್ಮೀ ಧಾರಾವಾಹಿ ಆಡಿಷನ್‌ನಲ್ಲಿ ಪಾಸ್ ಆದ ಭೂಮಿಕಾ ಈಗ ವೀಕ್ಷಕರ ನೆಚ್ಚಿನ ಲಡ್ಡು ಆಗಿದ್ದಾರೆ.

ಕಲರ್ಸ್ ಕನ್ನಡ  ವಾಹಿನಿಯಲ್ಲಿ ಭಾಗ್ಯಲಕ್ಷ್ಮೀ ಎನ್ನುವ ಧಾರಾವಾಹಿ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಸಂಜೆ 7.30ಕ್ಕೆ ಲಕ್ಷ್ಮೀ ಬಾರಮ್ಮ ಧಾರಾವಾಹಿ  ಪ್ರಸಾರವಾಗುತ್ತಿದೆ. ಒಂದೇ ಧಾರಾವಾಹಿ 2 ಭಾಗವಾಗಿದೆ.