Edited By: Pragati Bhandari

ಶುಂಠಿ ಇದನ್ನು ಚಹಾ, ಕಷಾಯದ ರೂಪದಲ್ಲಿ ಸೇವಿಸಬಹುದು ಅಥವಾ ಸಣ್ಣ ಚೂರನ್ನು ಹಾಗೆಯೇ ಬಾಯಲ್ಲಿ ಒತ್ತರಿಸಿಕೊಳ್ಳಬಹುದು

ಪೆಪ್ಪರ್ಮಿಂಟ್: ಇದರ ಚಹಾ ಸೇವಿಸಬಹುದು ಅಥವಾ ತೈಲವನ್ನು ಆಗಾಗ ಆಘ್ರಾಣಿಸಬಹುದು

ನಿಂಬೆಹಣ್ಣು ಬೆಚ್ಚಗಿನ ನೀರಿಗೆ ಕೆಲವು ಹನಿ ನಿಂಬೆರಸ ಸೇರಿಸಿ ಕುಡಿಯಬಹುದು ಅಥವಾ ಹಣ್ಣಿನ ಘಾಟನ್ನೇ ನೇರವಾಗಿ ಆಘ್ರಾಣಿಸಬಹುದು

ಸೋಂಪು ಇದರ ಕಷಾಯ ಸೇವಿಸಬಹುದು ಅಥವಾ ಸೋಂಪನ್ನೇ ಚೆನ್ನಾಗಿ ಜಗಿದು ತಿನ್ನಬಹುದು

ಒತ್ತಡ ನಿವಾರಣೆ ಅತಿಯಾದ ಒತ್ತಡವೂ ಹೊಟ್ಟೆಯನ್ನು ಬುಡಮೇಲು ಮಾಡುತ್ತದೆ. ಹಾಗಾಗಿ ಒತ್ತಡ ನಿವಾರಣೆಯ ತಂತ್ರಗಳನ್ನು ಪ್ರಯತ್ನಿಸಿ

ಅಕ್ಯುಪ್ರಶರ್ ಪಿ6 ಬಿಂದುವಿನ ಮೇಲೆ ಮಸಾಜ್‌ ಮಾಡಿ. ಅಂಗೈ ಹಿಡಿದರೆ, ಮಣಿಕಟ್ಟಿನಿಂದ ಸರಿಯಾಗಿ ಮೂರು ಬೆರಳು ಕೆಳಗಿದೆ ಈ ಬಿಂದು

ಎಣ್ಣೆ ಮತ್ತು ಮಸಾಲೆ ರಹಿತವಾದ, ಸುಲಭವಾಗಿ ಜೀರ್ಣವಾಗಬಲ್ಲ ಮೃದು ಆಹಾರಗಳನ್ನೇ ಸೇವಿಸಿ