ಒಂದು ಚಾರ್ಜ್​​ಗೆ  ಗರಿಷ್ಠ ಕಿಲೋಮೀಟರ್ ಓಡುವ ಎಲೆಕ್ಟ್ರಿಕ್​ ಸ್ಕೂಟರ್ ಗಳಿವು

ಸಿಂಪಲ್  ಒನ್-212 ಕಿ.ಮೀ  ಸಿಂಪಲ್ ಒನ್ ಭಾರತದ ಮಾರುಕಟ್ಟೆಯಲ್ಲಿರುವ ಅತಿ ಹೆಚ್ಚು ರೇಂಜ್ ನ ಇವಿ ಸ್ಕೂಟರ್ . ಇದು ಎಆರ್ ಎಐ ಪ್ರಮಾಣಿಕೃತ 212 ಕಿಲೋ ಮೀಟರ್ ಓಡುತ್ತದೆ. ಇದರಲ್ಲಿ 4.9 ಕೆಡಬ್ಲ್ಯುಎಚ್  ಬ್ಯಾಟರಿಯಿದೆ. ಸ್ಕೂಟರ್ ನ ಗರಿಷ್ಠ ವೇಗ 105 ಕಿಲೋ ಮೀಟರ್.

ಓಲಾ ಎಸ್​1 ಪ್ರೊ- 181 ಕಿ.ಮೀ ಓಲಾ ಕಂಪನಿಯ ಎಸ್​1 ಪ್ರೊ ಸ್ಕೂಟರ್​ ಎಆರ್​ಎಐ ಮಾನದಂಡದ ಪ್ರಕಾರ ಒಂದು ಚಾರ್ಜ್​ಗೆ 181 ಕಿ.ಲೋ ಮೀಟರ್ ಓಡುತ್ತದೆ. ಇದರಲ್ಲಿ 3.97 ಕೆಡಬ್ಲ್ಯುಎಚ್​​ ಸಾಮರ್ಥ್ಯದ ಬ್ಯಾಟರಿಯಿದೆ. ಇದರ ಗರಿಷ್ಠ ವೇಗ ಗಂಟೆಗೆ 116  ಕಿ.ಲೋ ಮೀಟರ್​

ವಿಡಾ ವಿ1 ಪ್ರೊ- 165 ಕಿ.ಮೀ ಹೀರೋ ಮೋಟೋಕಾರ್ಪ್​ನ ಆರಂಭಿಕ ಇವಿ ಸ್ಕೂಟರ್ ವಿಡಾ ವಿ1 ಪ್ರೊ ಒಂದು ಚಾರ್ಜ್​ಗೆ 165 ಕಿಲೋ ಮೀಟರ್ ಓಡುತ್ತದೆ. ಇದರಲ್ಲಿ 3.94 ಕೆಡಬ್ಲ್ಯುಎಚ್​ ಬ್ಯಾಟರಿಯಿದ್ದು, ಗರಿಷ್ಠ 80 ಕಿಲೋ ಮೀಟರ್ ವೇಗದಲ್ಲಿ ಓಡುತ್ತದೆ.

ಒಕಿನೊವಾ ಒಖಿ90- 160 ಕಿ. ಮೀ ಒಕಿನೊವಾ ಒಖಿ90 ಎಆರ್​ಎ​ಐ ಪ್ರಮಾಣಿಕೃತ 160 ಕಿ. ಮೀ ರೇಂಜ್​ ಹೊಂದಿದೆ. ಇದರದಲ್ಲಿ 3.08 ಕೆಡಬ್ಲ್ಯುಎಚ್​ ಬ್ಯಾಟರಿಯಿದೆ. ಇದರ ಗರಿಷ್ಠ ವೇಗ ಗಂಟೆಗೆ 90 ಕಿಲೋ ಮೀಟರ್​.

ಒಕಾಯ ಫಾಸ್ಟ್​ ಎಫ್​4 160 ಕಿ.ಮೀ ಒಕಾಯ ಫಾಸ್ಟ್​ ಎಫ್​4 ಒಂದು ಬಾರಿ ಪೂರ್ತಿ ಚಾರ್ಜ್​ ಮಾಡಿದರೆ 160 ಕಿ.ಮೀ ಕಿಲೋ ಮೀಟರ್​ ಸಾಗುತ್ತದೆ. ಇದರಲ್ಲಿ 4.4 ಕೆಡಬ್ಲ್ಯುಎಚ್​​ ಬ್ಯಾಟರಿಯಿದೆ. ಇದರ ಗರಿಷ್ಠ ವೇಗ ಗಂಟೆಗೆ 70 ಕಿಲೋ ಮೀಟರ್​.

ಒಕಿನೊವಾ ರಿಜ್​ 100- 149 ಕಿ.ಮೀ ಒಕಿನೊವಾ ರಿಜ್​ 100 ಎಆರ್​ಎಐ ಪ್ರಮಾಣಿಕೃತ  149 ಕಿ.ಮೀ ರೇಂಜ್​ ಹೊಂದಿದೆ. ಇದರಲ್ಲಿ 2.8 ಕೆಡಬ್ಲ್ಯುಎಚ್​ ಬ್ಯಾಟರಿಯಿದೆ. ಇದರ ಗರಿಷ್ಠ ವೇಗ ಗಂಟೆಗೆ 85 ಕಿ.ಮೀ.

ಏಥರ್​ 450 ಎಕ್ಸ್​​- 146 ಕಿ.ಮೀ ಭಾರತದ ಜನಪ್ರಿಯ ಇವಿ ಸ್ಕೂಟರ್ ಏಥರ್​​ 450 ಎಕ್ಸ್ ಒಂದು ಚಾರ್ಜ್​ಗೆ 146 ಕಿ.ಮೀ ಸಾಗುತ್ತದೆ. ಇದರಲ್ಲಿ 3.7 ಕೆಡಬ್ಲ್ಯುಎಚ್​ ಬ್ಯಾಟರಿಯಿದೆ. ಇದರ ಗರಿಷ್ಠ ವೇಗ 90 ಕಿಲೋ ಮೀಟರ್​.