Milage Scooters in India : ಪೆಟ್ರೋಲ್ ಉಳಿತಾಯ ಮಾಡುವ ಕೆಲವು ಸ್ಕೂಟರ್​​ಗಳು ಳು

ಏನಿದು ತಾಂತ್ರಿಕತೆ  ಸ್ಕೂಟರ್ ಗಳನ್ನು ಟ್ರಾಫಿಕ್ ಸಿಗ್ನಲ್  ನಲ್ಲಿ ಅಥವಾ ಇನ್ಯಾವುದೋ ಕಾರಣಕ್ಕೆ ನಿಲ್ಲಿಸಿದಾಗ ತನ್ನಿಂತಾನೆ ಎಂಜಿನ್ ಆಫ್ ಆಗಿ, ಮತ್ತೆ ಬ್ರೇಕ್ ಹಿಡಿದಾಗ ಸ್ಟಾರ್ಟ್ ಆಗುವ ತಾಂತ್ರಿಕತೆಯಿಂದ ಪೆಟ್ರೋಲ್ ಉಳಿಸಲಾಗುತ್ತದೆ.

ಯಾಕೆ ಅಗತ್ಯ? ಇಂಧನ ಬೆಲೆ ಗಗನಕ್ಕೆ ಏರುತ್ತಿರುವ ಜತೆಗೆ ಮಾಲಿನ್ಯ ನಿಯಂತ್ರಣ ಅನಿವಾರ್ಯವಾಗಿರುವ ಕಾರಣ ಈ ತಾಂತ್ರಿಕತೆಯನ್ನು ಸ್ಕೂಟರ್​​ಗಳಲ್ಲಿ ಅಳವಡಿಸಲಾಗಿದೆ. ಇದಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ.

ಹೋಂಡಾ ಆಕ್ಟಿವಾ 125 ಎಚ್​ ಸ್ಮಾರ್ಟ್​  ಹೋಂಡಾ ಆಕ್ವಿವಾ ಸ್ಕೂಟರ್​ನಲ್ಲಿ ಈ ಟೆಕ್ನಾಲಜಿಯನ್ನು ಇತ್ತೀಚೆಗೆ ನೀಡಲಾಗಿದೆ. ಇದು ಪೆಟ್ರೋಲ್​ ಉಳಿಸುವ ಜತೆಗೆ ಹೊಗೆಯುಗುಳಿವಿಕೆಯನ್ನೂ ಕಡಿಮೆ ಮಾಡುತ್ತದೆ.

ಹೋಂಡಾ ಗ್ರಾಸಿಯಾ 125  ಹೋಂಡಾ ಕಂಪನಿಯು ಆಟೊ ಸ್ಟಾರ್ಟ್​/ಸ್ಟಾಪ್​ ಆಯ್ಕೆಯನ್ನು ನೀಡಿರುವ ಮತ್ತೊಂದು ಸ್ಕೂಟರ್​. ಈ ಸ್ಕೂಟರ್​ನಲ್ಲಿ ಟ್ವಿನ್ ಡಿಜಿಟಲ್​ ಕ್ಲಸ್ಟರ್​ ಹಾಗೂ ಅಲಾಯ್​ ವೀಲ್​ ಇರುತ್ತದೆ.

ಹೀರೋ ಡೆಸ್ಟಿನಿ 125  ಹೀರೋ ಮೋಟೊಕಾರ್ಪನ್​ ಡೆಸ್ಟಿನಿ ಸ್ಕೂಟರ್​ ಕೂಡ ಅತ್ಯಾಧುನಿಕ ಸ್ಟಾರ್ಟ್​/ಸ್ಟಾಪ್​ ತಾಂತ್ರಿಕತೆ ಹೊಂದಿದೆ. ಇದು ಎಲ್​ಇಡಿ ಹೆಡ್​ಲೈಟ್​, ರಿಯಲ್​ಟೈಮ್​ ಮೈಲೇಜ್​ ತೋರಿಸುವ ವ್ಯವಸ್ಥೆಯನ್ನು ಹೊಂದಿದೆ.

ಯಮಹಾ ಫ್ಯಾಸಿನೊ 125 ಎಫ್​ಐ ಇದು ಫ್ಯೂಯಲ್ ಇಂಜೆಕ್ಟರ್ ಹೊಂದಿರುವ ಸ್ಕೂಟರ್​. ಇದು 125 ಸಿಸಿ ಬ್ಲೂ ಕೋರ್ ಟೆಕ್ನಾಲಜಿ ಹೊಂದಿದೆ. ಇದರಲ್ಲಿ ಸ್ಟಾರ್ಟ್​ ಸ್ಟಾಪ್​ ಬಟನ್ ಜತೆಗೆ ಸ್ಮಾರ್ಟ್​ ಮೋಟಾರ್​ ಜನರೇಟರ್​ ಕೂಡ ಇದೆ.

ಹೀರೋ ಮಾಸ್ಟ್ರೋ ಎಡ್ಜ್​ 125 ಮಾಸ್ಟ್ರೋ ಸ್ಕೂಟರ್​ನ ಸ್ಪೋರ್ಟಿ ವರ್ಷನ್​ ಮಾಸ್ಟ್ರೋ ಎಡ್ಜ್​ 125. ಇದರಲ್ಲಿ ಸ್ಟಾರ್ಟ್​/ ಸ್ಟಾಪ್​ ಆಯ್ಕೆ ಮತ್ತು ಕನೆಕ್ಟೆಡ್ ಫೀಚರ್​ಗಳೂ ಇವೆ. ಇದು ಕೂಡ ಪೆಟ್ರೋಲ್​ ಉಳಿಸಲು ನೆರವಾಗಬಹುದು.

ಬಿಎಸ್​6 ಫೇಸ್​ 2 ಪರಿಣಾಮ ಭಾರತ ಸರಕಾರ ಬಿಎಸ್​6 ಎರಡನೇ ಹಂತದ ನಿಯಮ ಕಡ್ಡಾಯಗೊಳಿಸಿದೆ. ಹೀಗಾಗಿ ಸ್ಕೂಟರ್​ಗಳು ಅಪ್​ಡೇಟ್​ ಆಗಿವೆ. ಈ ವೇಳೆ ಈ ತಾಂತ್ರಿಕತೆ ಗ್ರಾಹಕರಿಗೆ ದೊರೆಯುತ್ತಿದೆ..