Edited By: Pragati Bhandari

ಒಂದೇ ಬೆಚ್ಚನೆಯ ವಸ್ತ್ರದ ಬದಲು ಹಲವು ಪದರಗಳಲ್ಲಿ ವಸ್ತಗಳನ್ನು ಧರಿಸಿ ದೇಹವನ್ನು ಬೆಚ್ಚಗಿರಿಸಿ

ದಿನಕ್ಕೆ 45 ನಿಮಿಷಗಳ ವ್ಯಾಯಾಮವನ್ನು ಚಳಿಗಾಲದಲ್ಲೂ ಜಾರಿ ಇಟ್ಟರೆ, ಕೀಲುಗಳ ಆರೋಗ್ಯ ಹದಗೆಡುವುದಿಲ್ಲ

ಯಾವುದೇ ವ್ಯಾಯಾಮದ ಮೊದಲು ಮತ್ತು ನಂತರ ಮರೆಯದೆ ದೇಹವನ್ನು ಸಡಿಲ ಮಾಡಿ. ಇದರಿಂದ ಗಾಯಗಳನ್ನು ತಪ್ಪಿಸಬಹುದು

ವ್ಯಾಯಾಮವನ್ನಾದರೂ ಅತಿಯಾಗಿ ಮಾಡಬೇಡಿ. ವೈದ್ಯರು ಅನುಮತಿ ನೀಡಿದಷ್ಟೇ ಸಾಕು

ಆಹಾರದಲ್ಲಿ ಕೆಫೇನ್‌ ಮತ್ತು ಆಲ್ಕೋಹಾಲ್‌ ದೂರ ಮಾಡಿ. ಇದರಿಂದ ಉರಿಯೂತ ಹೆಚ್ಚುವುದನ್ನು ತಪ್ಪಿಸಬಹುದು

ಆಹಾರ ಸಮತೋಲನದಲ್ಲಿ ಇರಲಿ. ಇದರಿಂದ ತೂಕ ಹೆಚ್ಚುವುದನ್ನು ತಪ್ಪಿಸಬಹುದು

ಉರಿಯೂತ ತಗ್ಗಿಸುವಂಥ ಆಹಾರಗಳಿಗೆ ಆದ್ಯತೆ ಕೊಡಿ. ಬೆರ್ರಿಗಳು, ಕೊಬ್ಬಿನ ಮೀನುಗಳು, ಬೀಜಗಳು ಬೇಕು

ಕರಿದ, ಸಕ್ಕರೆಭರಿತ ತಿನಿಸುಗಳು ಉರಿಯೂತ ಹೆಚ್ಚಿಸಿ, ಕೀಲುಗಳನ್ನು ಇನ್ನಷ್ಟು ಜಖಂ ಮಾಡುತ್ತವೆ