ಅದ್ಭುತ  ಫೀಚರ್​​ಗಳಿರುವ   ಸಿಎನ್​ಜಿ ಕಾರುಗಳು ಪಟ್ಟಿ ಇಲ್ಲಿದೆ

ಹ್ಯುಂಡೈ ಔರಾ ಸಿಎನ್ ಜಿಜಿ  ಔರಾ ಎಸ್ ಮತ್ತು ಎಸ್ ಎಕ್ಸ್ ವೇರಿಯೆಂಟ್ ನಲ್ಲಿ ಫ್ಯಾಕ್ಟರಿ ಫಿಟೆಡ್ ಸಿಎನ್ ಜಿ ಆಯ್ಕೆಯಿದೆ. ಇದರ ಎಕ್ಸ್ ಶೋರೂಮ್ ಬೆಲೆ ಕ್ರಮವಾಗಿ 8.13 ಲಕ್ಷ ಹಾಗೂ 8.90 ಲಕ್ಷ ರೂಪಾಯಿಗಳು.

ಹ್ಯುಂಡೈ ಎಕ್ಸ್​ಟೆರ್​​ ಸಿಎನ್​ಜಿಜಿ  ಹ್ಯುಂಡೈ ಪೋರ್ಟ್​ಪೋಲಿಯೊಗೆ ಇತ್ತೀಚೆಗೆ ಸೇರ್ಪಡೆಗೊಂಡ ಎಕ್ಸ್​ಟೆರ್​ನಲ್ಲಿ ಫ್ಯಾಕ್ಟರಿ ಫಿಟೆಡ್​ ಸಿಎನ್​ಜಿ ಆಯ್ಕೆಗಳು ಸಿಗುತ್ತವೆ. ಇದರ ಆರಂಭಿಕ ಬೆಲೆ 8.24 ಲಕ್ಷ ರೂಪಾಯಿಗಳು.

ಮಾರುತಿ ಸುಜುಕಿ ಡಿಸೈರ್​ ಸಿಎನ್​ಜಿ  ಸುಜುಕಿ ಡಿಸೈರ್​ನ ವಿಎಕ್ಸ್ಐ ಹಾಗೂ ಜಡ್​ಎಕ್ಸ್​ಐ ವೇರಿಯೆಂಟ್​ನಲ್ಲಿ ಫ್ಯಾಕ್ಟರಿ ಫಿಟೆಡ್​ ಸಿಎನ್​ಜಿ ಆಯ್ಕೆಯಿದೆ. ಈ ಕಾರಿನ ಆರಂಭಿಕ ಎಕ್ಸ್​ ಶೋರೂಮ್​ ಬೆಲೆ 8.39 ಲಕ್ಷ ರೂಪಾಯಿ.

ಮಾರುತಿ ಸುಜುಕಿ ಬಲೆನೊ ಸಿಎನ್​ಜಿ ಬಲೆಜೊ ಎಸ್​ಸಿಎನ್​ಜಿ ಕಾರಿನ ಆರಂಭಿಕ ಬೆಲೆ 8.35 ಲಕ್ಷ ರೂಪಾಯಿ. ಈ ಕಾರಿನಲ್ಲಿ ಹಲವಾರು ಆಕರ್ಷಕ ಫೀಚರ್​ಗಳಿವೆ.

ಮಾರುತಿ ಸುಜುಕಿ ಫ್ರಾಂಕ್ಸ್​  ಎಸ್​ ಸಿಎನ್​ಜಿ ಮಾರುತಿ ಸುಜುಕಿ ಕಂಪನಿ ಫ್ರಾಂಕ್ಸ್​ ಕಾರು ಮಿನಿ ಎಸ್​ಯುವಿ. ಇದರ ಆರಂಭಿಕ ಬೆಲೆ 4,41 ಲಕ್ಷ ರೂಪಾಯಿ. ಇದು ಕೂಡ ಫೀಚರ್​ ರಿಚ್ ಕಾರು.

ಟಾಟಾ ಆಲ್ಟ್ರೋಜ್ ಐಸಿಎನ್ ಜಿ ಎಕ್ಸ್ಇ ಹಾಗೂ ಎಕ್ಸ್​ಝಡ್​ ಪ್ಲಸ್​ ವೇರಿಯೆಂಟ್​ನಲ್ಲಿ ಫ್ಯಾಕ್ಟರಿ ಫಿಟೆಡ್​ ಐಸಿಎನ್​ಜಿ ಆಯ್ಕೆಯಿದೆ. ಸನ್​ರೂಫ್​ ಸೇರಿದಂತೆ ಹಲವಾರು ಫೀಚರ್​ಗಳು ಇದರಲ್ಲಿದೆ. ಇದರ ಆರಂಭಿಕ ಬೆಲೆ 7.55 ಲಕ್ಷ ರೂಪಾಯಿ.

ಮಾರುತಿ ಸುಜುಕಿ ಎರ್ಟಿಗಾ  ಎಸ್​ಸಿಎನ್​ಜಿ ಎರ್ಟಿಗಾದ ವಿಎಕ್ಸ್​ಐ(ಒ) ಹಾಗೂ ಝಡ್​ಎಕ್ಸ್​ಐ (ಒ) ವೇರಿಯೆಂಟ್​ನಲ್ಲಿ ಸಿಎನ್​ಜಿ ಆಯ್ಕೆಯಿದೆ. ಈ ಕಾರಿನ ಬೆಲೆ ಆರಂಭಿಕ ಬೆಲೆ 11 .83 ಲಕ್ಷ ರೂಪಾಯಿ

ಮಾರುತಿ ಸುಜುಕಿ ಬ್ರೇಜಾ ಸಿಎನ್​ಜಿ ಎಲ್​ಎಕ್ಸ್ಐ, ವಿಎಕ್ಸ್​ಐ ಹಾಗೂ ಜಡ್​​ಎಕ್ಸ್​​ಐ ವೇರಿಯೆಂಟ್​ನ ಬ್ರೆಜಾದಲ್ಲಿ ಸಿಎನ್​ಜಿ ವೇರಿಯೆಂಟ್​ಗಳಿವೆ. ಇದರ ಆರಂಭಿಕ ಬೆಲೆ 9.24 ಲಕ್ಷ ರೂಪಾಯಿ.

ಟೊಯೋಟಾ ಹೈರೈಡರ್​  ಸಿಎನ್​ಜಿ ಎಸ್​ ಮತ್ತು ಜಿ ಟ್ರಿಮ್​ನ ಟೊಯೋಟಾ ಹೈರೈಡರ್​ ಕಾರಿನಲ್ಲಿ ಫ್ಯಾಕ್ಟರಿ ಫಿಟೆಡ್​ ಸಿಎನ್​ಜಿ ಆಯ್ಕೆಗಳಿರುತ್ತವೆ. ಈ ಕಾರಿನ ಮೂಲ ಬೆಲೆ 13.55 ಲಕ್ಷ ರೂಪಾಯಿ.