5 low budget cars With Sunroof: ಸನ್ ರೂಫ್ ಹೊಂದಿರುವ 11 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ದೊರೆಯುವ 5 ಕಾರುಗಳಿವು

ಸನ್ ರೂಫ್  ಪ್ರಸ್ತುತ ಮಾರುಕಟ್ಟೆಗೆ  ಬಿಡುಗಡೆಯಾಗುವ ಕಾರುಗಳ ಅತ್ಯಾಕರ್ಷಕ ಫೀಚರ್ ಎನಿಸಿದೆ. ಪ್ರಯಾಣಿಕರಿಗೆ ವಿಶೇಷ ಅನುಭವ ನೀಡಬಲ್ಲ ಫೀಚರ್ ಇದಾಗಿದೆ.

ಜನಪ್ರಿಯತೆ ಹೆಚ್ಚಾಗಿರುವ ಕಾರಣ ಆರಂಭದಲ್ಲಿ ಐಷಾರಾಮಿ ಕಾರುಗಳಲ್ಲಿ ಮಾತ್ರ ಲಭ್ಯವಿದ್ದ ಸನ್ ರೂಫ್ ಈಗ ಹ್ಯಾಚ್ ಬ್ಯಾಕ್ ಕಾರುಗಳಲ್ಲಿಯೂ ಲಭ್ಯವಾಗುತ್ತಿದೆ. 

ಟಾಟಾ ಆಲ್ಟ್ರೋಜ್ ನ  ಟಾಪ್ ಎಂಡ್ ವೇರಿಯಂಟ್ ನಲ್ಲಿ ಸನ್ ರೂಫ್ ಆಯ್ಕೆಯಿರುತ್ತದೆ. ಈ ಕಾರಿನ ಬೆಲೆ ಪ್ರಸ್ತುತ 8.55 ಲಕ್ಷ ರೂಪಾಯಿ.

ಹ್ಯುಂಡೈ ಕಂಪನಿಯ ಐ20 ಕಾರಿನ ಆಸ್ತಾ ವೇರಿಯೆಂಟ್ ನಲ್ಲಿ ಸನ್ ರೂಫ್ ಇದೆ. ಈ ಕಾರಿನ ಬೆಲೆ 9.04 ಲಕ್ಷ ರೂಪಾಯಿ.

ಟಾಟಾ ನೆಕ್ಸಾನ್ ಎಕ್ಸ್ ಎಮ್ ಎಸ್ ವೇರಿಯೆಂಟ್​​ನಲ್ಲಿ ಸನ್ ರೂಫ್ ಆಯ್ಕೆಯಿದೆ. ಈ ಕಾರಿನ ಆರಂಭಿಕ ಬೆಲೆ 9.50 ಲಕ್ಷ ರೂಪಾಯಿ.

ಮಹಿಂದ್ರಾ ಎಕ್ಸ್ ಯುವಿ 300 ಕಾರಿನ  ಎನ್ ಟಿ ಪೆಟ್ರೋಲ್ ವೇರಿಯೆಂಟ್ ನಲ್ಲಿ ಸನ್ ರೂಫ್ ಆಯ್ಕೆಯಿದೆ. ಈ ಕಾರಿನ ಆರಂಭಿಕ ಬೆಲೆ 10 ಲಕ್ಷ ರೂಪಾಯಿ.

ಕಿಯಾ ಸೋನೆಟ್ . ಇದರ ಎಚ್  ಟಿಕೆ ಪ್ಲಸ್ ಟರ್ಬೊ ಆವೃತ್ತಿಯಲ್ಲಿ ಸನ್ ರೂಫ್ ಇದೆ. ಇದರ ಬೆಲೆ 10.49 ಲಕ್ಷ ರೂಪಾಯಿ ಇದೆ.

ಸನ್ ರೂಫ್ ಪ್ರಯಾಣದ ಖುಷಿಯನ್ನು ಹೆಚ್ಚಿಸುವ ಫೀಚರ್ . ಆದರೆ, ವೇಗವಾಗಿ ಹೋಗುವ ವೇಳೆ ಮಕ್ಕಳು ತಲೆ ಹೊರಗೆ ಹಾಕುವುದು ಅಪಾಯಕಾರಿ. 

ಸನ್ ರೂಫ್ ಹೊಂದಿರುವ ಕೆಲವು ಕಾರುಗಳು ಮಳೆಗಾಲದಲ್ಲಿ ಸೋರುತ್ತವೆ ಎನ್ನುವ ಆರೋಪಗಳಿವೆ. ಇದಕ್ಕೆ ನಿರ್ವಹಣೆ ವೈಫಲ್ಯವೇ ಕಾರಣ.