ಕಾರುಗಳಿಗೆ ಹಾನಿ ಮಾಡುವ ಇಲಿಗಳನ್ನು ನಿಯಂತ್ರಣ ಮಾಡುವುದು ಹೇಗೆ?
ಪ್ರಯಾಣ ಮಾಡುವ ವೇಳೆ ಆಹಾರ ಪದಾರ್ಥಗಳನ್ನು ತಿಂದಿದ್ದರೆ ಕೆಲವು ತುಣುಕುಗಳು ಬಿದ್ದಿರುತ್ತವೆ. ಅವುಗಳನ್ನು ತಿನ್ನಲು ಇಲಿಗಳು ಕಾರಿನೊಳಗೆ ನುಗ್ಗುತ್ತವೆ.
ಕಾರಿನೊಳಗೆ ಕೆಟ್ಟ ವಾಸನೆ ಬರುತ್ತಿದ್ದರೆ ಇಲಿಗಳು ಬಂದಿವೆ ಎಂದರ್ಥ. ಎಲ್ಲಿದೆ ಎಂದು ಹುಡುಕಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು.
ಬಾನೆಟ್ ಎತ್ತಿ ಎಂಜಿನ್ ಭಾಗದಲ್ಲಿ ನೋಡುವಾಗ ಯಾವುದಾದರೂ ವೈರ್ಗಳ ತುಂಡಾಗಿದ್ದರೆ ಆಗಲೂ ಇಲಿಗಳ ಇರುವಿಕೆಯನ್ನು ಅಂದಾಜಿಸಬಹುದು.
ಕಾರಿನ ಎಸಿ ಸೇರಿದಂತೆ ಕೆಲವೊಂದು ವಿಭಾಗಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅನಿಸಿದರೆ ಇಲಿಗಳು ವೈರ್ಗಳನ್ನು ಕತ್ತರಿಸಿರುವ ಸಾಧ್ಯತೆಗಳಿವೆ.
ಕಾರಿನೊಳಗೆ ಪೆಪ್ಪರ್ಮಿಂಟ್ (ಪುದಿನಾ) ಆಯಿಲ್ ಇಟ್ಟರೆ ಇಲಿಗಳು ಬರುವುದಿಲ್ಲ. ಅದರ ವಾಸನೆಗೆ ಇಲಿಗಳು ಬರುವುದಿಲ್ಲ.
ಕಾರಿನೊಗಳಿಗೆ ಇಲಿ ನಿರೋಧಕ ಸ್ಪ್ರೇಯನ್ನು ಆಗಾಗ ಸಿಂಪಡಣೆ ಮಾಡಬೇಕು. ಅದಕ್ಕೆದರಿ ಇಲಿಗಳು ದೂರ ಓಡಿ ಹೋಗುತ್ತವೆ.
ಇಲಿ ಪಾಷಾಣವನ್ನೂ ಇಟ್ಟು ಇಲಿಗಳ ಸಂತತಿಯನ್ನು ಸಂಹಾರ ಮಾಡಬಹುದು. ಆದರೆ, ಇತರ ಪ್ರಾಣಿಗಳಿಗೆ ತಿನ್ನಲು ಸಿಗದಂತೆ ಎಚ್ಚರಿಕೆ ವಹಿಸಬೇಕು.
ಕಾರಿನ ಪಕ್ಕದಲ್ಲಿ ರ್ಯಾಟ್ ಟ್ರ್ಯಾಪ್ಗಳನ್ನು ಇಡಬೇಕು. ಇಲಿಗಳು ಕಾರಿನ ಸುತ್ತಮುತ್ತ ಓಡಾಡದಂತೆ ಇದರಿಂದ ತಡೆಯಬಹುದು.
read more web stories
how to get rid of rats in home