ಅಲರಾಂ ಸಾಧನವನ್ನು ಹಾಸಿಗೆಯಿಂದ ಎದ್ದು ಹೋಗುವಷ್ಟು ದೂರದಲ್ಲಿ ಇರಿಸಿಕೊಳ್ಳಿ

ಕೈಯಳತೆಯಲ್ಲಿದ್ದರೆ ಅಲರಾಂಅನ್ನು ಬಡಿದು ಬಾಯ್ಮುಚ್ಚಿಸಿ ನಿದ್ದೆ ಮುಂದುವರಿಸುತ್ತೀರಿ! 

ಕಿಟಕಿಯ ಪರದೆಗಳನ್ನು ತೆಗೆದು ಸೂರ್ಯನ ಬೆಳಕನ್ನು ಒಳಗೆ ಬರಮಾಡಿಕೊಳ್ಳಿ

ಮುಂಜಾವಿನ ಆಲಸಿತನಕ್ಕೆ ಉತ್ತಮ ಸಂಗೀತ ಮದ್ದಾಗಬಹುದು, ಪ್ರಯತ್ನಿಸಿ.

ಬೆಳಗಿನ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿಗೆ ಕೊಂಚ ಜೇನುತುಪ್ಪ, ನಾಲ್ಕು ಹನಿ ನಿಂಬೆ ರಸ ಹಾಕಿ ಸೇವಿಸಿ

ಆದರೂ ಮೈಮುದುರುತ್ತಿದ್ದೀರೇ? ಬಿಸಿಯಾಗಿ ಸ್ನಾನ ಮಾಡಿ

ಇಡೀದಿನದ ಕೆಲಸ ಸರಿಯಾಗಬೇಕಿದ್ದರೆ ಬೆಳಗಿನ ತಿಂಡಿಯೂ ಸರಿಯಾಗಬೇಕು

ಕಾಲೇಜು, ಕಚೇರಿಗೆ ನಡೆದು ಅಥವಾ ಸೈಕಲ್‌ನಲ್ಲಿ ಹೋಗಲು ಪ್ರಯತ್ನಿಸಿ