1967ರ ಮೇ 15ರಂದು ಜನಿಸಿದ ಮಾಧುರಿ ದೀಕ್ಷಿತ್ 56ನೇ ಜನುಮದಿನದ ಸಂತಸದಲ್ಲಿದ್ದಾರೆ.

1984ರ Abodh ಚಿತ್ರದೊಂದಿಗೆ ಸಿನಿರಂಗ ಪ್ರವೇಶಿಸಿದ ಮಾಧುರಿ ದೀಕ್ಷಿತ್ 70 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ 7 ಬ್ಲಾಕ್‌ಬಾಸ್ಟರ್‌ ಚಲನಚಿತ್ರಗಳನ್ನು ಸಿನಿರಂಗಕ್ಕೆ ನೀಡಿದ್ದಾರೆ.

Tezaab 1988ರ ಚಲನಚಿತ್ರವಾಗಿದ್ದು ಎನ್. ಚಂದ್ರು ನಿರ್ದೇಶಿಸಿದ್ದಾರೆ ಮತ್ತು ಮಾಧುರಿ ದೀಕ್ಷಿತ್ ಜತೆ ಅನಿಲ್ ಕಪೂರ್ ಅವರು ತೆರೆ ಹಂಚಿಕೊಂಡಿದ್ದರು.

Ram Lakhan 1989ರ ಚಲನಚಿತ್ರವಾಗಿದ್ದು ಸುಭಾಷ್ ಘಾಯ್ ನಿರ್ದೇಶಿಸಿದ್ದಾರೆ ಮತ್ತು ಅನಿಲ್ ಕಪೂರ್ ಮತ್ತು ಜಾಕಿ ಶ್ರಾಫ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Dil ಇಂದ್ರ ಕುಮಾರ್ ನಿರ್ದೇಶನದ 1990ರ ಚಲನಚಿತ್ರವಾಗಿದೆ ಮತ್ತು ಅಮೀರ್ ಖಾನ್ ಮತ್ತು ಮಾಧುರಿ ದೀಕ್ಷಿತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

Prahaar 1991ರಲ್ಲಿ ನಾನಾ ಪಾಟೇಕರ್ ನಿರ್ದೇಶಿಸಿದ ಮತ್ತು ಮಾಧುರಿ ದೀಕ್ಷಿತ್ ಜತೆ ಪ್ರಮುಖ ಪಾತ್ರದಲ್ಲಿ ನಟಿಸಿದ ಬಾಲಿವುಡ್ ಚಲನಚಿತ್ರವಾಗಿದೆ.

Beta ಇಂದ್ರ ಕುಮಾರ್ ನಿರ್ದೇಶನದ 1992ರ ಚಲನಚಿತ್ರವಾಗಿದೆ. ಅನಿಲ್ ಕಪೂರ್ ಮತ್ತು ಮಾಧುರಿ ದೀಕ್ಷಿತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Hum Aapke Hain Koun 1994ರ ಚಲನಚಿತ್ರ. ಸೂರಜ್ ಬರ್ಜಾತ್ಯಾ ನಿರ್ದೇಶಿಸಿದ್ದು ಸಲ್ಮಾನ್ ಖಾನ್ ಮತ್ತು ಮಾಧುರಿ ದೀಕ್ಷಿತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Raja ಇಂದ್ರ ಕುಮಾರ್ ನಿರ್ದೇಶನದ 1995ರ ಚಲನಚಿತ್ರ. ಸಂಜಯ್ ಕಪೂರ್ ಮತ್ತು ಮಾಧುರಿ ದೀಕ್ಷಿತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.