Mahesh Babu: ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ ಬಿಲ್‌ ಬೋರ್ಡ್‌ನಲ್ಲಿ ಮಿಂಚಿದ ಮಹೇಶ್‌ ಬಾಬು ಪುತ್ರಿ ಸಿತಾರಾ!

ಟಾಲಿವುಡ್‌ ನಟ ಮಹೇಶ್‌ ಬಾಬು ಇದೀಗ ಸಖತ್‌ ಖುಷ್‌ ಆಗಿದ್ದಾರೆ.

ಸಿತಾರಾ ಘಟ್ಟಮನೇನಿ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಜಾಹೀರಾತಿಗೆ ಸಹಿ ಮಾಡಿದ ಮೊದಲ ಭಾರತೀಯ ಸ್ಟಾರ್ ಕಿಡ್ ಆಗಿದ್ದಾರೆ. 

 ಈ ಜಾಹೀರಾತನ್ನು ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಪ್ರದರ್ಶಿಸಲಾಗಿದೆ. 

ಸಿತಾರಾ ಘಟ್ಟಮನೇನಿ ಈಗ ಪ್ರೀಮಿಯಂ ಆಭರಣ ಬ್ರ್ಯಾಂಡ್‌ನ ರಾಯಭಾರಿಯಾಗಿದ್ದಾರೆ. 

ಸಿತಾರಾ  ಫೋಟೊವನ್ನು ಕಂಡು ನೆಟ್ಟಿಗರು ಟಾಲಿವುಡ್‌ ಭವಿಷ್ಯದ ನಾಯಕಿ ಎಂದು  ಹೇಳುತ್ತಿದ್ದಾರೆ.

ಮಹೇಶ್ ಬಾಬು ಪುತ್ರಿ ಸಿತಾರಾಗೆ ಈಗಿನ್ನೂ 11 ವರ್ಷ ವಯಸ್ಸು, ಇಷ್ಟು ಚಿಕ್ಕ ವಯಸ್ಸಿನಲ್ಲಿ ಅತಿ ದೊಡ್ಡ ಜಾಹೀರಾತು ಒಪ್ಪಂದಕ್ಕೆ ಸಹಿ ಮಾಡಿದ ಮೊದಲ ಭಾರತೀಯ ಸ್ಟಾರ್ ಕಿಡ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ

ಇದರ ಶೂಟಿಂಗ್ ಇತ್ತೀಚೆಗೆ ಮುಂಬೈನಲ್ಲಿ ಮೂರು ದಿನಗಳ ಕಾಲ ನಡೆಯಿತು.

ಮಹೇಶ್ ಬಾಬು ಮಗಳ ಸಾಧನೆಯ ಬಗ್ಗೆ ಹೆಮ್ಮೆಯಿಂದ ಪೋಸ್ಟ್ ಮಾಡಿದ್ದಾರೆ.