Namma Lachi Kannada Serial: ಸ್ವಿಮ್ ಸೂಟ್‌ನಲ್ಲಿ ಹಾಟ್‌ ಆಗಿ ಕಂಡ ʻನಮ್ಮ ಲಚ್ಚಿʼ  ಧಾರಾವಾಹಿಯ ಖ್ಯಾತಿಯ  ಐಶ್ವರ್ಯಾ ಶಿಂಧೋಗಿ

ಐಶ್ವರ್ಯಾ ಶಿಂಧೋಗಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ `ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ.

 ನಮ್ಮ ಲಚ್ಚಿ ಧಾರಾವಾಹಿಯಲ್ಲಿ ರಿಯಾಳ ತಾಯಿ ದೀಪಿಕಾರ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. 

ಐಶ್ವರ್ಯಾ ಸ್ವಿಮ್ ಸೂಟ್‌ನಲ್ಲಿ ಹಾಟ್‌ ಆಗಿ ಕಂಡಿದ್ದು, ಸದ್ಯ ಬಾಲಿ ಪ್ರವಾಸದಲ್ಲಿದ್ದು ಮಸ್ತ್ ಮಜಾ ಮಾಡುತ್ತಿದ್ದಾರೆ. 

ಐಶ್ವರ್ಯಾ ಫ್ರೆಂಡ್ಸ್ ಜತೆ ಬಾಲಿಯಲ್ಲಿ ಸಖತ್ ಮಜಾ ಮಾಡುತ್ತಿದ್ದಾರೆ. ಐಶ್ವರ್ಯಾ ಒಂದಿಷ್ಟು ಹಾಟ್ ಫೋಟೊಗಳನ್ನು ಶೇರ್ ಮಾಡಿದ್ದಾರೆ. 

 ಸಮುದ್ರ ತೀರದಲ್ಲಿ ಸ್ವಿಮ್ ಸೂಟ್ ಧರಿಸಿ ಸನ್ ಗ್ಲಾಸ್ ಹಾಕಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಫೋಟೊಗಳನ್ನು ಶೇರ್ ಮಾಡಿ ಕಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ. 

 ಐಶ್ವರ್ಯಾ ಶಿಂಧೋಗಿ  'ನಾಗಿಣಿ 2' ಹಾಗೂ 'ಮಂಗಳಗೌರಿ ಮದುವೆ' ಧಾರಾವಾಹಿಯಿಂದ ಜನಪ್ರಿಯತೆ ಗಳಿಸಿದ್ದರು. 

 ಐಶ್ವರ್ಯಾ ಅವರು ನಟನಾ ಪಯಣ ಪ್ರಾರಂಭವಾದದ್ದು 'ಸಿಂಹಾದ್ರಿ' ಸಿನಿಮಾದ ಮೂಲಕ. ತಮ್ಮ ಒಂಬತ್ತನೇ ವಯಸ್ಸಿನಲ್ಲಿ ಐಶ್ವರ್ಯಾ ಈ ಚಿತ್ರದ ಮೂಲಕ ಬಾಲ ಕಲಾವಿದೆಯಾಗಿ ಕಾಣಿಸಿಕೊಂಡಿದ್ದರು.

 'ಸಪ್ನೋ ಕಿ ರಾಣಿ', 2016ರಲ್ಲಿ 'ರಣತಂತ್ರ', 'ಮಮ್ಮಿ: ಸೇವ್ ಮಿ', 'ಚಿನ್ನಾರಿ' ಮತ್ತು 2017ರಲ್ಲಿ 'ಸಂಯುಕ್ತ 2' ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.