Paaru TV Serial: ಬೋಲ್ಡ್ ಅವತಾರದಲ್ಲಿ ಪಾರು ಧಾರಾವಾಹಿಯ ದಾಮಿನಿ!

ಪ್ರೀತಿ ಆಧಾರಿತ ಕಥೆ ಹೊಂದಿರುವ ʼಪಾರು ಧಾರಾವಾಹಿʼ ಪ್ರೇಕ್ಷಕರಿಗೆ ಅಚ್ಚು ಮೆಚ್ಚು. 

ಜೀ ಕನ್ನಡದಲ್ಲಿ ಪ್ರಸಾರವಾಗುವ ಪಾರು ಧಾರಾವಾಹಿಯಲ್ಲಿ ದಾಮಿನಿ ಪಾತ್ರಧಾರಿಯಾಗಿ ನಟಿಸುತ್ತಿದ್ದಾರೆ ನಟಿ ಸಿತಾರಾ ತಾರಾ.

ಈ ಧಾರಾವಾಹಿಯಲ್ಲಿ ಕಾಮಿಡಿಯನ್‌ ಪಾತ್ರ ಮಾಡಿದ್ದರೂ ಇವರೂ ಸಹ ತಮ್ಮದೇ ಅಭಿಮಾನಿ ಬಳಗ ಹೊಂದಿದ್ದಾರೆ. 

ಧಾರಾವಾಹಿಯಲ್ಲಿ ಸೀರೆ, ಅದಕ್ಕೊಪ್ಪುವ ಆಭರಣ, ಮೇಕಪ್‌, ಹೇರ್‌ಸ್ಟೈಲ್‌ನಲ್ಲಿ ಕಾಣುವ ದಾಮಿನಿ ಇದೀಗ ಬೋಲ್ಡ್‌ ಅವತಾರದಲ್ಲಿ ಕಂಡಿದ್ದಾರೆ.

ಫೋಟೊಗಳನ್ನು ಹಂಚಿಕೊಂಡು ʻʻನಿಮ್ಮೆಡೆಗೆ ಯಾರಾದರೂ ಕಲ್ಲೆಸೆದರೆ ಅವುಗಳನ್ನು ಮರಳಿ ಅವರಿಗೆ ಎಸೆಯಬೇಡಿ, ಬದಲಿಗೆ ಅವುಗಳನ್ನು ಸಂಗ್ರಹಿಸಿ ಅವುಗಳಿಂದಲೇ ಭವ್ಯ ಅರಮನೆಯನ್ನೇ ನಿರ್ಮಿಸಿಕೊಳ್ಳಿʼʼ ಎಂದು ಕ್ಯಾಪ್ಶನ್‌ ನೀಡಿದ್ದಾರೆ. 

ಫೋಟೊ ಪೋಸ್ಟ್‌ ಮಾಡಿ, ಕಮೆಂಟ್‌ ಸೆಕ್ಷನ್‌ ಆಫ್‌ ಕೂಡ ಮಾಡಿದ್ದಾರೆ. 

ನೀನಾಸಂನಲ್ಲಿ ನಟನೆ ಕಲಿತು, ಇದೀಗ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ ಸಿತಾರಾ. ದಾಮಿನಿ ಪಾತ್ರ ಮಾಡುತಿದ್ದ ಸಿತಾರ ಮಾತ್ರ ಸಖತ್ತಾಗಿ ಸದ್ದು ಮಾಡುತ್ತ ಪ್ರೇಕ್ಷಕರ ಮನದಲ್ಲಿ ಉಳಿದುಬಿಟ್ಟಿದ್ದಾರೆ.