Edited By: Pragati Bhandari

ಚೀನೀ ಕಾಯಿ, ಗೋವೆ ಕಾಯಿ ಮುಂತಾದ ಪ್ರಾಂತೀಯ ಹೆಸರುಗಳೂ ಸಿಹಿ ಕುಂಬಳಕಾಯಿಗಿವೆ.

 ಇದರಲ್ಲಿರುವ ಲೂಟಿನ್‌ನಂಥ ಉತ್ಕರ್ಷಣ ನಿರೋಧಕಗಳು ಸೂರ್ಯನ ಕಿರಣಗಳಿಂದ ಚರ್ಮಕ್ಕಾಗುವ ಹಾನಿಯಿಂದ ರಕ್ಷಿಸುತ್ತವೆ

ಇದರಲ್ಲಿರುವ ಉತ್ಕೃಷ್ಟ ಕೆರೊಟಿನಾಯ್ಡ್‌ ಅಂಶಗಳು ಕೆಲವು ಬಗೆಯ ಕ್ಯಾನ್ಸರ್‌ ಭೀತಿಯನ್ನು ದೂರ ಮಾಡುತ್ತವೆ

ಕುಂಬಳಕಾಯಿ ಬೀಜವು ಸೂಕ್ಷ್ಮಪೋಷಕಾಂಶಗಳಿಂದ ಸಾಂದ್ರವಾಗಿದೆ. ಇದರಲ್ಲಿರುವ ಮೆಗ್ನೀಶಿಯಂ ಸತ್ವವು ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿ

ಇದರಲ್ಲಿರುವ ಜೀವಸತ್ವಗಳು ದೃಷ್ಟಿ ಮತ್ತು ಪ್ರತಿರೋಧಕ ಶಕ್ತಿಯ ರಕ್ಷಣೆಗೆ ಪೂರಕವಾಗಿವೆ

ಕುಂಬಳಕಾಯಿಯಲ್ಲಿ ಕ್ಯಾಲರಿ ಕಡಿಮೆ, ನಾರು ಹೆಚ್ಚು. ಹಾಗಾಗಿ ಮಧುಮೇಹಿಗಳು ಮಿತವಾಗಿ ತಿನ್ನಬಹುದು ಇದನ್ನು.

 ಜೀರ್ಣಾಂಗಗಳನ್ನು ಸುಸ್ಥಿತಿಯಲ್ಲಿ ಇರಿಸಿ, ತೂಕ ಇಳಿಕೆಗೆ ಸಹಾಯ ಮಾಡುತ್ತದೆ

ಕುಂಬಳಕಾಯಿ ಮತ್ತು ಬೀಜಗಳಲ್ಲಿ ಇರುವ ಕ್ಯಾಲ್ಶಿಯಂ ಅಂಶವು ಮೂಳೆಗಳನ್ನು ಬಲಪಡಿಸುತ್ತದೆ