Rahul Gandhi: ನನ್ನ ಮುಖದಲ್ಲಿ ಮತ್ತೆ ನಗು ಮೂಡಿಸಿದ ವ್ಯಕ್ತಿ ನೀವು ಎಂದು ರಾಹುಲ್‌ ಗಾಂಧಿಗೆ ರಮ್ಯಾ ಸ್ಪೆಷಲ್‌ ವಿಶ್‌!

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಜೂನ್‌ 20ರಂದು 54ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ನಟಿ ರಮ್ಯಾ ಅವರು ರಾಹುಲ್​ ಗಾಂಧಿ ಜತೆಗೆ ಇರುವ ಫೋಟೊ ಹಂಚಿಕೊಂಡಿದ್ದಾರೆ. 

ರಾಹುಲ್‌ ಗಾಂಧಿ ಬಗ್ಗೆ ವಿಶೇಷವಾದ ಮಾತುಗಳನ್ನು ರಮ್ಯಾ ಬರೆದುಕೊಂಡಿದ್ದಾರೆ. 

‘ನನ್ನ ಮುಖದಲ್ಲಿ ಮತ್ತೆ ನಗು ಮೂಡಿಸಿದ ವ್ಯಕ್ತಿ’ ಎಂದು ರಾಹುಲ್​ ಗಾಂಧಿ ಅವರನ್ನು ಹೊಗಳಿದ್ದಾರೆ ಮೋಹಕ ತಾರೆ ರಮ್ಯಾ

‘ಕರುಣೆಯ ಕಣ್ಣುಗಳಿಂದ ಜಗತ್ತನ್ನು ನೋಡಲು ಕಲಿಸಿದವರು’ ಎಂದು ಕೂಡ ರಮ್ಯಾ ಹೇಳಿದ್ದಾರೆ. 

ಈ ಸ್ಪೆಷಲ್‌ ವಿಶ್‌ ಸೋಷಿಯಲ್‌ ಮೀಡಿಯಾಗಳಲ್ಲಿ ಗಮನ ಸೆಳೆಯುತ್ತಿದೆ.

ಸಿನಿಮಾ ಮತ್ತು ರಾಜಕೀಯ ಎರಡೂ ಕ್ಷೇತ್ರದಲ್ಲಿ ರಮ್ಯಾ  ಗುರುತಿಸಿಕೊಂಡಿದ್ದಾರೆ. 

ರಮ್ಯಾ ಅವರ ಈ ವಿಶ್‌ ಪೋಸ್ಟ್‌ ಸೋಷಿಯಲ್‌ ಮೀಡಿಯಾಗಳಲ್ಲಿ ಚರ್ಚೆಯಾಗುತ್ತಿದೆ.