Edited By: Pragati Bhandari

‘ಬಿಗ್‌ಬಾಸ್‌ ಮನೆಗೆ ‘ಚಾರ್ಲಿ’ ಬರ್ತಾನೆ ಎನ್ನುವುದು ಸಾಕಷ್ಟು ಸುದ್ದಿಯಾಗಿತ್ತು. ಆದರೆ ಇದುವರೆಗೆ ಚಾರ್ಲಿ ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿಲ್ಲ. 

‘ಚಾರ್ಲಿ’ಗೆ ಸಿನಿಮಾದಲ್ಲಿ ಚಿಕಿತ್ಸೆ ನೀಡಿದ್ದ ಡಾಕ್ಟರ್, ಸಂಗೀತಾ ಶೃಂಗೇರಿ ನಾಯಿ ಥರ ಆಡ್ತಿದ್ದಾರೆ! 

ಸಂಗೀತಾ ಅವರು ನಾಯಿಯ ಹಾಗೆ ಕೈಗಳನ್ನೂ ಕಾಲಾಗಿಸಿಕೊಂಡು, ಮನೆಯೊಳಗೆ ನಾಯಿಯ ಹಾಗೆ ನಡೆದಾಡುತ್ತ, ಅಳುವ ನಾಯಿಯ ಹಾಗೆ ಕೂಗುತ್ತ ಓಡಾಡುತ್ತಿದ್ದಾರೆ! 

ಇದು ಬಿಗ್‌ಬಾಸ್ ಅವರೇ ಮನೆಯ ಸ್ಪರ್ಧಿಗಳಿಗೆ ನೀಡಿದ ಹೊಸ ಟಾಸ್ಕ್‌!

ಇದರ ಭಾಗವಾಗಿಯೇ ಸಂಗೀತಾ  ಅಳುತ್ತಿರುವ ನಾಯಿಯ ಹಾಗೆ ಆಡುತ್ತಿದ್ದಾರೆ. 

ತುಕಾಲಿ ಸಂತೋಷ್ ಕೂಡ ನಾಯಿಯ ಹಾಗೆ ಆಡುತ್ತ ಅವರನ್ನು ಅಟ್ಟಿಸಿಕೊಂಡು ಹೋಗುತ್ತಿದ್ದಾರೆ. 

ವಾರದ ಆರಂಭ ಭರಪೂರ ನಗೆಯೊಂದಿಗೆ ಆರಂಭಗೊಂಡಿದೆ. ಈ ನಗೆಯು ಕೋಪದ ಹೊಗೆಯಾಗಿ ಬದಲಾಗಲು ಜಾಸ್ತಿ ಹೊತ್ತೇನೂ ಬೇಕಾಗಿಲ್ಲ