Shreerastu Shubhamastu Serial: ಒಳಗೊಳಗೆ ಪಿತೂರಿ ಮಾಡುವ 'ಶ್ರೀರಸ್ತು ಶುಭಮಸ್ತು' ಶಾರ್ವರಿ ಬಗ್ಗೆ  ನಿಮಗೆಷ್ಟು ಗೊತ್ತು?

ಈ ಧಾರಾವಾಹಿಯಲ್ಲಿ ಎರಡು ಪ್ರಮುಖ ಕುಟುಂಬಗಳಿವೆ. ಒಂದು ಮಧ್ಯಮ ವರ್ಗ ಕುಟುಂಬ ಮತ್ತೊಂದು ಶ್ರೀಮಂತ  ಕುಟುಂಬ.

 ಈ ಧಾರಾವಾಹಿಯಲ್ಲಿ ಶಾರ್ವರಿ ವಿಲನ್‌. ಅವರ ನಿಜವಾದ ಹೆಸರು ನೇತ್ರಾ ಜಾಧವ್

ಈಗಾಗಲೇ ಸಾಕಷ್ಟು ಧಾರಾವಾಹಿಗಳಲ್ಲಿ ನೇತ್ರಾ ಜಾಧವ್ ಅವರು ನಟಿಸಿದ್ದಾರೆ.

'ರಥ ಸಪ್ತಮಿ', ʻಸುಂದರಿ', 'ಸಾಗುತ ದೂರ ದೂರ' ಧಾರಾವಾಹಿಗಳಲ್ಲೂ ಬಣ್ಣ ಹಚ್ಚಿದ್ದರು. 'ಆಕೃತಿ' ಎಂಬ ಹಾರರ್ ಧಾರಾವಾಹಿಯಲ್ಲೂ ನೇತ್ರಾ ಜಾಧವ್ ಸೌಮ್ಯ ಸ್ವಭಾವದ ಪಾತ್ರವನ್ನು ಮಾಡಿದ್ದರು.

ತೆಲುಗು ಧಾರಾವಾಹಿಗಳಲ್ಲೂ ನೇತ್ರಾ ಅವರು ನಟಿಸಿದ್ದಾರೆ. 'ರಾವೋಯಿ ಚಂದಮಾಮ'ದಲ್ಲಿ ಇಂದ್ರಸೇನಾ ಪಾತ್ರದಲ್ಲಿ ನೇತ್ರಾ ಅವರು ಕಾಣಿಸಿಕೊಂಡಿದ್ದಾರೆ.

ಇದೀಗ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಮುಂದೆ ಒಳ್ಳೆಯವರಂತೆ ನಟಿಸುತ್ತ, ಒಳಗೊಳಗೆ ಪಿತೂರಿ ಮಾಡುವ ಪಾತ್ರ ಇವರದ್ದಾಗಿದೆ.

ನೇತ್ರಾ ಜಾಧವ್ ಅವರ ಕಾಸ್ಟ್ಯೂಮ್, ನಟನೆಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.