ವಾಸ್ತು ಶಾಸ್ತ್ರದಲ್ಲಿ ಮನೆಯ ಪ್ರತಿ ಕೋಣೆಯ ವಾಸ್ತುವು ಅತ್ಯಂತ ಮುಖ್ಯವಾಗುತ್ತದೆ. ಮನೆಯಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗ ಬೇಕೆಂದರೆ,  ಮನೆಯು ವಾಸ್ತು ಪ್ರಕಾರ ಇದ್ದಾಗ ಮಾತ್ರವೇ ಸಾಧ್ಯವಾಗುತ್ತದೆ.

ಸರಿಯಾದ ದಿಕ್ಕು ಯಾವುದು? ವಾಸ್ತು ಪ್ರಕಾರ ಅಡುಗೆ ಮನೆಯು ಆಗ್ನೇಯ ದಿಕ್ಕಿನಲ್ಲಿರುವುದು ಸೂಕ್ತ. ಅಡುಗೆ ಮನೆಯು ಯಾವುದೇ ಅನಿವಾರ್ಯ ಪರಿಸ್ಥಿತಿಯಲ್ಲೂ ನೈಋತ್ಯ ದಿಕ್ಕಿಗಿರಬಾರದು.

ಬೆಳಕು ಚೆನ್ನಾಗಿರಲಿ! ಮನೆಗೆ ಶುದ್ಧವಾದ ಗಾಳಿ ಮತ್ತು ಉತ್ತಮ ಬೆಳಕು ಅತ್ಯಂತ ಮುಖ್ಯವಾಗುತ್ತದೆ. ಹಾಗೆಯೇ ಡೈನಿಂಗ್ ಹಾಲ್‌ಗೂ ಉತ್ತಮ ಬೆಳಕಿನ ಅವಶ್ಯಕತೆ ಇರುತ್ತದೆ.

ಯಾವ ಬಣ್ಣ ಸೂಕ್ತ? ಡೈನಿಂಗ್ ಹಾಲ್‌ನ ಬಣ್ಣ ಗಾಢವಾಗಿದ್ದು, ಕಣ್ಣಿಗೆ ತಂಪೆರೆಯುವಂತಿರಬೇಕು.  ಹಿಂಸೆ ಮತ್ತು ಕೆಟ್ಟದ್ದನ್ನುವನ್ನು ಬಿಂಬಿಸುವ ಬಣ್ಣಗಳನ್ನು ಬಳಸದಿರುವುದು ಉತ್ತಮ. 

ಡೈನಿಂಗ್ ಟೇಬಲ್ ಆಕಾರ ಹೀಗಿರಲಿ! ವೃತ್ತಾಕಾರ ಮತ್ತು ಸರಿಯಾದ ಆಕಾರವಿಲ್ಲದ ಟೇಬಲ್‌ಗಳನ್ನು ಬಳಸಬಾರದು. ಡೈನಿಂಗ್ ಟೇಬಲ್‌ಗಾಗಿ ಬಳಸುವ ಟೇಬಲ್‌ನ ಆಕಾರ ಚೌಕ ಅಥವಾ ಆಯತಾಕಾರದ್ದಾಗಿದ್ದರೆ ಉತ್ತಮ.

ಕುಳಿತು ಕೊಳ್ಳುವ ಬಗೆ ಹೇಗೆ? ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಹಿರಿಯರು ಅಥವಾ ಯಜಮಾನರು ಪೂರ್ವ ದಿಕ್ಕಿಗೆ ಕುಳಿತುಕೊಳ್ಳಬೇಕು. ಉಳಿದವರು ಪೂರ್ವ,  ಉತ್ತರ ಮತ್ತು ಪಶ್ಚಿಮ ದಿಕ್ಕಿಗೆ ಕುಳಿತುಕೊಳ್ಳಬಹುದಾಗಿದೆ.