ಇಂದಿನ ಪಂಚಾಂಗ (20-08-2022)
ಶ್ರೀ ಶಕೇ 1944, ಶುಭಕೃತ ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ
ತಿಥಿ: ನವಮಿ 25:08 ವಾರ: ಶನಿವಾರ
ನಕ್ಷತ್ರ: ರೋಹಿಣಿ 28:38 ಯೋಗ: ವ್ಯಾಘಾತ 21:39
ಕರಣ: ತೈತುಲ 12:00 ದಿನ ವಿಶೇಷ: ಅಮೃತಸಿದ್ಧಿಯೋಗ, ಅಕ್ಷಯ ಊರ್ಜ ದಿನ
ಸೂರ್ಯೋದಯ: 06: ೧2 ಸೂರ್ಯಾಸ್ತ: 06: 54
ರಾಹು ಕಾಲ : ಪ್ರಾತಃ ಕಾಲ 9.00 ರಿಂದ 10.30
ಗುಳಿಕಕಾಲ: ಪ್ರಾತಃ ಕಾಲ 6.00 ರಿಂದ 7.30
ಯಮಗಂಡಕಾಲ: ಮಧ್ಯಾಹ್ನ 1.30 ರಿಂದ 3.00
ದ್ವಾದಶ ರಾಶಿ ಭವಿಷ್ಯ (Horoscope Today)
ಮೇಷ: ನಿಮ್ಮ ಹಾಸ್ಯದ ಮನೋಭಾವನೆ ಇತರರನ್ನು ಆಕರ್ಷಿಸುವುದು. ಹಣಕಾಸು ಪ್ರಗತಿ ಉತ್ತಮ. ಧಾರ್ಮಿಕ ಸ್ಥಳಗಳಿಗೆ ಭೇಟಿ. ಅಧ್ಯಾತ್ಮ ವ್ಯಕ್ತಿಗಳ ಮಾರ್ಗದರ್ಶನ ದೊರೆಯಲಿದೆ. ಆರೋಗ್ಯ ಉತ್ತಮ. ಉದ್ಯೋಗದಲ್ಲಿ ಮತ್ತು ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8
ವೃಷಭ: ವ್ಯವಹಾರದಲ್ಲಿ ಸಂಗಾತಿಯ ಹಸ್ತಕ್ಷೇಪ ನಿಮಗೆ ಕೋಪ ತರಿಸಬಹುದು, ತಾಳ್ಮೆಯಿಂದ ವರ್ತಿಸಿ. ಈ ಹಿಂದೆ ಕಾಡಿದ ವ್ಯಾಧಿ ಮರುಕಳಿಸುವ ಸಾಧ್ಯತೆ. ದಿನದ ಮಟ್ಟಿಗೆ ಖರ್ಚು. ಏತನ್ಮಧ್ಯೆ ಅತಿಥಿಗಳ ಆಗಮನ ಹರ್ಷ ತರುವುದು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7
ಮಿಥುನ: ಘಟಿಸಿದ ಘಟನೆಗಳನ್ನು ಮೆಲುಕು ಹಾಕುತ್ತಾ ಕಾಲಹರಣ ಮಾಡುವ ಬದಲು, ಮುಂದೆ ಆಗುವ ಕೆಲಸಗಳ ಬಗೆಗೆ ಕಾರ್ಯ ಪ್ರವೃತ್ತರಾಗಿ. ದಿನದ ಮಟ್ಟಿಗೆ ಅನಿವಾರ್ಯ ಕಾರಣಗಳಿಂದ ಖರ್ಚು. ಅನೇಕ ವಿಚಾರಗಳಿಂದ ಒತ್ತಡಕ್ಕೆ ಒಳಾಗಾಗುವ ಸಾಧ್ಯತೆ. ಕೋಪದಿಂದ ಏನನ್ನು ಸಾಧಿಸಲಾಗದು. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5
ಕಟಕ: ಹಣದ ಹರಿವು ಹೆಚ್ಚಾಗಲಿದೆ. ಮಾನಸಿಕ ನೆಮ್ಮದಿ ಸಿಗುವುದು. ಹೊಸ ಭರವಸೆಯ ಅವಕಾಶಗಳು ಹುಡುಕಿಕೊಂಡು ಬರುವವು. ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಫಲ ಸಿಗಲಿದೆ. ಆರೋಗ್ಯ ಉತ್ತಮ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9
ಸಿಂಹ: ಕುಟುಂಬದ ಆಪ್ತರ ಹಾಗೂ ಸ್ನೇಹಿತರ ಸೂಕ್ತ ಸಲಹೆ ಸಹಕಾರ ಸಿಗುವುದು. ಒತ್ತಡದ ಜೀವನಕ್ಕೆ ಕೊಂಚ ಮಟ್ಟಿಗೆ ವಿಶ್ರಾಂತಿ ಸಿಗಲಿದೆ. ಹಣಕಾಸು ಪ್ರಗತಿ ಉತ್ತಮ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ, ಅಗತ್ಯವಿದ್ದಷ್ಟೆ ಮಾತನಾಡಿ, ಸಮಾಧಾನದಿಂದ ವರ್ತಿಸಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7
ಕನ್ಯಾ: ಅನೇಕ ವಿಷಯಗಳು ನಿಮಗೆ ಒತ್ತಡ ಉಂಟುಮಾಡುವ ಸಾಧ್ಯತೆ. ಖರ್ಚು ಹೆಚ್ಚಾಗುವ ಸಾಧ್ಯತೆ. ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ. ಜಂಟಿ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಕುಟುಂಬದ ಅಸಹಕಾರದಿಂದ ಕಿರಿಕಿರಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5
ತುಲಾ: ಆಪ್ತ ಸಂಬಂಧಿಕರಿಂದ ಸಹಾಯ, ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ. ಹಣಕಾಸು ಪ್ರಗತಿ. ಹಳೆಯ ವಿಚಾರಗಳು ನಿಮ್ಮ ಮನಸ್ಸಿಗೆ ಘಾಸಿ ಮಾಡುವ ಸಾಧ್ಯತೆ, ಎಚ್ಚರಿಕೆ ಇರಲಿ. ಉತ್ತಮ ಆರೋಗ್ಯ, ಉದ್ಯೋಗದಲ್ಲಿ ಸಾಧಾರಣ. ಕುಟುಂಬದ ಸಹಕಾರ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8
ವೃಶ್ಚಿಕ: ಒತ್ತಡದ ಮಧ್ಯೆಯೂ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ರಹಸ್ಯ ಕಾರ್ಯಗಳು ಸಹ ಯಶಸ್ಸನ್ನು ನೀಡಲಿವೆ. ಮಾತಿನಿಂದಲೇ ಕಲಹ. ಸಂಬಂಧಿಗಳ ಮಧ್ಯೆ ಬಿರುಕು ಮೂಡುವ ಸಾಧ್ಯತೆ. ಕೌಶಲ್ಯಕ್ಕ ತಕ್ಕ ಪ್ರತಿಫಲ ಸಿಗಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 1
ಧನಸ್ಸು: ಅನಿರೀಕ್ಷಿತ ಪ್ರಯಾಣ. ಆತುರದಲ್ಲಿ ಆಡುವ ಅತಿರೇಕದ ಮಾತುಗಳು ಜಗಳ ತರಬಹುದು, ಸಮಾಧಾನದಿಂದ ವರ್ತಿಸಿ. ಅಮೂಲ್ಯ ವಸ್ತುಗಳು ಕೈತಪ್ಪುವ ಸಾಧ್ಯತೆ, ಎಚ್ಚರಿಕೆ ಇರಲಿ. ಕುಟುಂಬ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ಮೂಡದಂತೆ ವರ್ತಿಸಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 7
ಮಕರ: ಆರೋಗ್ಯ ಉತ್ತಮ. ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು. ಉದ್ಯೋಗಿಗಳಿಗೆ ಬಡ್ತಿ, ವೇತನ ಹೆಚ್ಚಳವಾಗುವ ಭರವಸೆ. ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯಲು ಪ್ರಯತ್ನಿಸುವಿರಿ. ಸಮಾರಂಭದ ಆಮಂತ್ರಣ ಬರುವ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7
ಕುಂಭ: ಆಹಾರದ ಕ್ರಮ ಆರೋಗ್ಯದಲ್ಲಿ ವ್ಯತ್ಯಾಸ ಮೂಡಿಸಬಹುದು. ಅಮೂಲ್ಯ ವಸ್ತುಗಳ ಬಗೆಗೆ ಕಾಳಜಿ ವಹಿಸಿ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ಉದ್ಯೋಗದಲ್ಲಿ ಪ್ರಗತಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4
ಮೀನ: ಹಾಸ್ಯ ಪ್ರಜ್ಞೆಯಿಂದ ಕಾರ್ಯವನ್ನು ಸಾಧಿಸುವುದರಲ್ಲಿ ಯಶಸ್ಸು ಪಡೆಯುವಿರಿ. ಸಂಗಾತಿಯ ಹಸ್ತಕ್ಷೇಪ ನಿಮಗೆ ಮುಜುಗರ ಉಂಟು ಮಾಡುವ ಸಾಧ್ಯತೆ. ಉದ್ಯೋಗದಲ್ಲಿ ಭರವಸೆ ಮೂಡಲಿದೆ. ಆರೋಗ್ಯ ಉತ್ತಮ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2
ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com
ಇದನ್ನೂ ಓದಿ | ಬಹುತೇಕ ಶುಭಫಲಗಳನ್ನೇ ನೀಡುವ ಬುಧನ ಭಾವಫಲಗಳು ಹೀಗಿವೆ