Site icon Vistara News

Karnataka Live News : ರಾಜ್ಯದಲ್ಲಿನ ಪ್ರಮುಖ ಬೆಳವಣಿಗೆಗಳ ಲೇಟೆಸ್ಟ್ ಮಾಹಿತಿ; ಕಿಲ್ಲರ್‌ ಬಿಎಂಟಿಸಿಗೆ ಇಬ್ಬರು ಬಲಿ

karnataka live news karnataka today news live vistara news 29 oct
Prabhakar R

ಮೀನು ಹಿಡಿಯಲು ಹೋಗಿ ಇಬ್ಬರು ಬಾಲಕರ ಸಾವು

ಮೀನು ಹಿಡಿಯಲು ಹೋಗಿ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ನಗರದ ಹೊರವಲಯದ ಬನ್ನೇರುಘಟ್ಟ ರಸ್ತೆ ಬಳಿ ನಡೆದಿದೆ. ಶುಕ್ರವಾರ ಸಂಜೆ ಬಾಲಕರು ನಾಪತ್ತೆಯಾಗಿದ್ದರು. ನಿರ್ಮಾಣ ಹಂತದ ಕಟ್ಟಡದಲ್ಲಿರುವ ನೀರಿನ ತೊಟ್ಟಿಯಲ್ಲಿ ಮೀನು ಹಿಡಿಯಲು ಹೋಗಿದ್ದಾಗ ಬಾಲಕರು ನೀರಿನಲ್ಲಿ (Boys Drown) ಮುಳುಗಿದ್ದಾರೆ.

Boys Drown: ಮೀನು ಹಿಡಿಯಲು ಹೋಗಿ ಇಬ್ಬರು ಬಾಲಕರ ಸಾವು
Prabhakar R

ಎಸ್. ಧೀರೇಂದ್ರ ರಚನೆಯ ʼಹವ್ಯಾಸಿರಂಗದ ಮುತ್ತು ರತ್ನಗಳುʼ ಕೃತಿ ಲೋಕಾರ್ಪಣೆ

ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ಬಿಪಿ ವಾಡಿಯಾ ಹಾಲ್ ಭಾನುವಾರ ಅಪರೂಪದ ಸಮಾರಂಭಕ್ಕೆ ಸಾಕ್ಷಿಯಾಯಿತು. ನಟ, ನಿವೃತ್ತ ಬ್ಯಾಂಕರ್ ಎಸ್. ಧೀರೇಂದ್ರ ಅವರ ಹವ್ಯಾಸಿರಂಗದ ಮುತ್ತು ರತ್ನಗಳು-40 ಕನ್ನಡ ಕಲಾವಿದರ ರಂಗ ಸಂಕಥನ ಕೃತಿಯನ್ನು (Book Release) ಹಿರಿಯ ನಟ ‘ಪ್ರಣಯ ರಾಜ’ ಶ್ರೀನಾಥ್ ಅವರು ಲೋಕಾರ್ಪಣೆ ಮಾಡಿದರು.

Book Release: ಎಸ್. ಧೀರೇಂದ್ರ ರಚನೆಯ ʼಹವ್ಯಾಸಿರಂಗದ ಮುತ್ತು ರತ್ನಗಳುʼ ಕೃತಿ ಲೋಕಾರ್ಪಣೆ

Prabhakar R

ರಾಜಧಾನಿಯ 243 ರೂಫ್‌ ಟಾಪ್‌ ಬಾರ್, ರೆಸ್ಟೋರೆಂಟ್‌ಗಳಲ್ಲಿ ಸೇಫ್ಟಿ ರೂಲ್ಸ್‌ ಬ್ರೇಕ್‌!

ಕೋರಮಂಗಲದ ಮಡ್‌ಪೈಪ್‌ ಕೆಫೆ ಅಗ್ನಿ ಅವಘಡದ ಬಳಿಕ ಎಚ್ಚೆತ್ತುಕೊಂಡ ಬಿಬಿಎಂಪಿ ಹಾಗೂ ಅಗ್ನಿಶಾಮಕ ಇಲಾಖೆ, ನಗರದಲ್ಲಿನ ಪಬ್‌, ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸುರಕ್ಷತಾ ಕ್ರಮಗಳನ್ನು ತಪಾಸಣೆ ಮಾಡುತ್ತಿವೆ. ಈ ನಡುವೆ ರಾಜಧಾನಿಯಲ್ಲಿ 243 ಕೆಫೆ, ಬಾರ್, ರೆಸ್ಟೋರೆಂಟ್‌ಗಳಲ್ಲಿ ಸುರಕ್ಷತಾ ಮಾನದಂಡ ಮತ್ತು ಪರವಾನಗಿ ನಿಯಮಗಳನ್ನು (Safety Rules) ಉಲ್ಲಂಘಿಸಿರುವುದು ಕಂಡುಬಂದಿದೆ.

Safety Rules: ರಾಜಧಾನಿಯ 243 ರೂಫ್‌ ಟಾಪ್‌ ಬಾರ್, ರೆಸ್ಟೋರೆಂಟ್‌ಗಳಲ್ಲಿ ಸೇಫ್ಟಿ ರೂಲ್ಸ್‌ ಬ್ರೇಕ್‌!
Deepa S

ಉದ್ಯಮಿಗೆ ಮಚ್ಚು ಬೀಸಿದ ಭೂಗಳ್ಳರು

ಬೆಂಗಳೂರಿನಲ್ಲಿ ಮಣ್ಣಿಗೆ ಬಂಗಾರವನ್ನೂ ಮೀರಿದ ಬೆಲೆ ಇದೆ. ಹೀಗಾಗಿಯೇ ಭೂಗಳ್ಳರ ಹಾವಳಿಯೂ ಹೆಚ್ಚಾಗಿದೆ. ಯಾರದ್ದೋ ಭೂಮಿಗೆ ಇನ್ಯಾರೋ ವಾರಸುದಾರರಾಗುತ್ತಾರೆ. ಅದನ್ನು ಪ್ರಶ್ನೆ ಮಾಡಿದರೆ ಕೊನೆಗೆ ಮಚ್ಚಿನೇಟು ಬೀಳುತ್ತೆ. ಇಂತಹದ್ದೆ ಒಂದು ಘಟನೆ ಬೆಂಗಳೂರಿನ ಹೊರವಲಯದಲ್ಲಿ ನಡೆದಿದೆ. ಇತ್ತ ರಕ್ಷಣೆ ನೀಡಬೇಕಾದ ಪೊಲೀಸರು ಭೂಗಳ್ಳರ ಪರ ನಿಂತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

https://vistaranews.com/karnataka/bengaluru/assault-case-land-dispute-land-grabbers-attack-businessman/493297.html

Deepa S

ಬೆಂಗಳೂರಿನ ಹಲವೆಡೆ ತಂಪೆರೆದ ವರುಣ; ಇನ್ನೆರಡು ದಿನ ಭಾರಿ ಮಳೆ!

ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಸಿಟಿ ಮಂದಿಗೆ ವರುಣ ಕೃಪೆ ತೋರಿದ್ದಾನೆ. ಬೆಂಗಳೂರಿನ ಹಲವೆಡೆ ಭಾನುವಾರ ಸಂಜೆ ಸಾಧಾರಣ ಮಳೆಯಾಗಿದೆ. ಅ.30, 31ರಂದು ದಕ್ಷಿಣ ಒಳನಾಡು, ಕರಾವಳಿಯಲ್ಲಿ ಮಳೆಯಾಗುವ (Rain News) ಸಾಧ್ಯತೆ ಇದೆ.

https://vistaranews.com/weather/karnataka-weather-heavy-rains-lash-several-parts-of-bengaluru-heavy-rain-for-two-more-days/493262.html

Exit mobile version