ಉತ್ತರ ಕರ್ನಾಟಕವನ್ನು ಮಳೆಗಾಲದಲ್ಲಿ ಇನ್ನಷ್ಟು ಚಂದಗಾಣಿಸುವಲ್ಲಿ, ಕೃಷ್ಣೆ, ಭೀಮ, ತುಂಗಭದ್ರ, ಘಟಪ್ರಭ, ಮಲಪ್ರಭ ನದಿಗಳ ಕಾಣಿಕೆಯೂ ಇದೆ. ಹಾಗಾಗಿ ತಡವೇಕೆ, ಈ ಮಳೆಗಾಲದಲ್ಲಿ ಒಮ್ಮೆ ಉತ್ತರ ಕರ್ನಾಟಕದೆಡೆಗೆ ನಿಮ್ಮ ಕಾರು ತಿರುಗಿಸಿ!
ವಿಧಾನಸೌಧದ ಆ ಕೊಠಡಿ ಸಂಖ್ಯೆ 329. ಆ ಕೊಠಡಿ ಪಡೆದು ಆ ನಂತರ ಬೇರೆ ಕೊಠಡಿಗೆ ಸಚಿವ ವೆಂಕಟೇಶ್ ಬದಲಾವಣೆ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಈ ಕೊಠಡಿ ಪ್ರವೇಶಿಸಲು ಸಚಿವರು ಹಿಂದೇಟು ಹಾಕಿದ್ದು ಯಾಕೆ?
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಮಳೆಯಾಗದೇ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಬರಗಾಲದ ಆತಂಕವೂ ಮೂಡಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ವರುಣನ ಆಗಮನಕ್ಕೆ ಪ್ರಾರ್ಥಿಸಿ ಶಾಸ್ತ್ರೋಕ್ತವಾಗಿ ಕತ್ತೆಗಳಿಗೆ ಮದುವೆ ಮಾಡಿಸಲಾಯಿತು.
ಪ್ರಾಣಿಯೂ ಅಲ್ಲದೆ, ಪಕ್ಷಿಯೂ ಅಲ್ಲದ ಬಾವಲಿಗಳಂತೆ ತ್ರಿಶಂಕು ಬದುಕು ಸಾಗಿಸುತ್ತಿರುವ ಗುತ್ತಿಗೆ ಕಾರ್ಮಿಕ ವರ್ಗಕ್ಕೆ ಸೇರಿದ ಅಸಂಖ್ಯಾತರಿದ್ದಾರೆ. ಇವರಿಗೊಂದು ಶಾಶ್ವತ, ಸ್ಥಿರವಾದ ಬದುಕನ್ನು ರೂಪಿಸುವ ಬದ್ಧತೆ ಆಳುವವರಿಗೆ ಬರಬೇಕು.
ಒಂದೇ ದಿನದಲ್ಲಿ ನಗರದಿಂದ ಹೊರಹೋಗಿ, ಮನಸ್ಸನ್ನು ರಿಲ್ಯಾಕ್ಸ್ ಮಾಡಿಸಿಕೊಂಡು ಮಳೆಯಲ್ಲಿ ಭರಪೂರ ಮಿಂದೆದ್ದು ಬರಬಹುದಾದಂತಹ ಜಾಗಗಳು ಇಲ್ಲಿವೆ.
ಯಾವುದೋ ಒಂದು ಗುಂಪನ್ನು ಮೆಚ್ಚಿಸಲು ದಿನಬೆಳಗಾದರೆ ಪಠ್ಯಪುಸ್ತಕ ಪರಿಷ್ಕರಣೆಯ ಮಾತನ್ನು ಸರ್ಕಾರದ ಭಾಗವಾಗಿರುವವರು ನಿಲ್ಲಿಸುವುದು ಒಳ್ಳೆಯದು. ಪಠ್ಯ ಪುಸ್ತಕ ರಚನೆಯ ಜವಾಬ್ದಾರಿಯನ್ನು ರಾಜಕೀಯ ಹಿತಾಸಕ್ತಿ ಇಲ್ಲದ ಚಿಂತಕರಿಗೆ ಒಪ್ಪಿಸಬೇಕು.
Mahadayi Project: ಮಹದಾಯಿ ನದಿ ನೀರು ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಸರ್ಕಾರವು ಎರಡು ಹೊಸ ಪ್ರಸ್ತಾವನೆಗಳನ್ನು ಸಲ್ಲಿಸಿದೆ. ಇದು ಗೋವಾಕ್ಕೆ ನೀಡಿದ ಸ್ಪಷ್ಟ ಸಂದೇಶ ಎಂದೇ ವಿಶ್ಲೇಷಿಸಲಾಗುತ್ತಿದೆ.
ಪಠ್ಯ ಪುಸ್ತಕ ಎನ್ನುವುದು ವಿದ್ಯಾರ್ಥಿಗಳ ಪಾಲಿಗೆ ಅಮೂಲ್ಯ. ಆದರೆ ಪಠ್ಯ ಪುಸ್ತಕ ಎನ್ನುವುದೀಗ ರಾಜಕೀಯ ಸಿದ್ಧಾಂತದ ಆಟಿಕೆಯಂತಾಗಿದೆ. ಈ ರೀತಿಯ ಪಠ್ಯ ಪುಸ್ತಕ ಪರಿಷ್ಕರಣೆಯ ಮೇಲಾಟ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ದುಷ್ಪರಿಣಾಮ ಬೀರುತ್ತದೆ.
ನೀವು ಈ ಸ್ಥಳಗಳನ್ನು ನೋಡಿರುವಿರಾದರೂ, ಮಳೆಗಾಲದಲ್ಲೊಮ್ಮೆ ಮತ್ತೊಮ್ಮೆ ಹೋಗಿ ನೋಡಿ, ಇದು ಅದೇ ಜಾಗ ಹೌದೋ ಅಲ್ಲವೋ ಎಂಬಷ್ಟು ವ್ಯತ್ಯಾಸ ನೀವು ಗುರುತಿಸುತ್ತೀರಿ. ಮಳೆಯನ್ನು ಇಷ್ಟಪಡುವ ಎಲ್ಲರೂ ಮಳೆಗಾಲದಲ್ಲಿ ಮಲೆನಾಡನ್ನು ನೋಡಬೇಕು.
ಅಜ್ಜಿಯನ್ನು ಕೊಲೆ ಮಾಡಿದ ಮೊಮ್ಮಗ ಹೆಣವನ್ನು ಪ್ಯಾಕ್ ಮಾಡಿ ಕಾರಿನಲ್ಲಿಟ್ಟುಕೊಂಡು ದಿನವಿಡೀ ಓಡಾಡಿದ್ದು, ಪೊಲೀಸ್ ಠಾಣೆಗೂ ಹೋಗಿ ಕಂಪ್ಲೇಂಟ್ ನೀಡಿದ್ದಾನೆ! ಶವ ಸುಡಲು ಕೊರಿಯನ್ ವೆಬ್ ಸೀರಿಸ್ ನೋಡಿ ಪ್ರೇರಣೆ ಪಡೆದಿದ್ದಾನೆ.