Site icon Vistara News

Karnataka Live News : ಸಹಸ್ರಲಿಂಗದಲ್ಲಿ ಈಜಲು ತೆರಳಿದ್ದ ಒಂದೇ ಕುಟುಂಬದ ಐವರು ನಾಪತ್ತೆ

karnataka today news live vistara news 17th dec
Prabhakar R

ಜಗತ್ತಿನ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ ಭಾರತ: ಪ್ರಲ್ಹಾದ್ ಜೋಶಿ

10 ವರ್ಷಗಳ ಹಿಂದೆ ಭಾರತವನ್ನು ಜಗತ್ತಿನ ದುರ್ಬಲ ಆರ್ಥಿಕ ರಾಷ್ಟ್ರ ಎಂದೇ ಕರೆಯಲಾಗುತ್ತಿತ್ತು. ಆದರೆ ಇವತ್ತು ಜಗತ್ತಿನ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತಿಳಿಸಿದರು.

Pralhad Joshi: ಜಗತ್ತಿನ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ ಭಾರತ: ಪ್ರಲ್ಹಾದ್ ಜೋಶಿ
Deepa S

ಅಂದು ತಪ್ಪಿದ್ದ ದುರಂತ; ಇಂದು ನಡೆಯಿತು ಅನಾಹುತ!

ಕಳೆದ ಡಿಸೆಂಬರ್ 8ರಂದು ನೋಡನೋಡುತ್ತಿದ್ದಂತೆ ಏರ್‌ಟೆಲ್‌ ಟವರ್‌ವೊಂದು ಉರುಳಿ ಬಿದ್ದಿತ್ತು. ಅಂದು ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿತ್ತು. ಆದರೆ ಇಂದು ಆ ಟವರ್‌ ಕಂಬವನ್ನು ತೆರವು ಮಾಡಲು ಹೋದ ಯುವಕನ ಬಲಿ ಪಡೆದಿದೆ. ರಸ್ತೆ ಬದಿ ಬಿದ್ದಿದ್ದ ವಿದ್ಯುತ್‌ ತಂತಿ ತಾಗಿ (Electric shock) ಯುವಕನೊಬ್ಬ ಮೃತಪಟ್ಟಿದ್ದಾನೆ.

Electric shock : ಅಂದು ತಪ್ಪಿದ್ದ ದುರಂತ; ಇಂದು ನಡೆಯಿತು ಅನಾಹುತ!
Adarsha Anche

Aghanashini River: ಸಹಸ್ರಲಿಂಗದಲ್ಲಿ ಈಜಲು ತೆರಳಿದ್ದ ಒಂದೇ ಕುಟುಂಬದ ಐವರು ನಾಪತ್ತೆ

ವೀಕೆಂಡ್ ಟ್ರಿಪ್‌ಗೆ ಸಹಸ್ರಲಿಂಗಕ್ಕೆ ಬಂದಿದ್ದ ಒಂದೇ ಕುಟುಂಬದ ಐವರು ಯುವಕರು ಅಘನಾಷಿನಿ ನದಿಯಲ್ಲಿ ಈಜಲು ತೆರಳಿದ್ದರು. ಆದರೆ, ಎಷ್ಟು ಸಮಯವಾದರೂ ಬಾರದೇ ಇದ್ದಾಗ ಅನುಮಾನ ಬಂದಿದೆ. ಎಲ್ಲಿ ನೋಡಿದರೂ ಯುವಕರು ಕಾಣಿಸುತ್ತಿಲ್ಲ. ಹೀಗಾಗಿ ಅವರು ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ.

http://vistaranews.com/karnataka/uttara-kannada/four-family-members-swiming-in-aghanashini-river-gone-missing/534690.html

Deepa S

ಸಿಟಿ ಮಂದಿ ನಿದ್ದೆಗೆಡಿಸಿದ ಅರೆಬೆತ್ತಲೆ ಮುಸುಕುಧಾರಿ ಕಳ್ಳರು!

ಗುರುತು ಸಿಗಬಾರೆಂದು ಮುಸುಕುಧಾರಿ ಕಳ್ಳರು (Theft Case) ಅರೆಬೆತ್ತಲಾಗಿ ಮಾರಕಾಸ್ತ್ರಗಳನ್ನು ಹಿಡಿದು ಬಂದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಚಂದಾಪುರದ ಹೆಡ್ ಮಾಸ್ಟರ್ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ.

Theft Case : ಸಿಟಿ ಮಂದಿ ನಿದ್ದೆಗೆಡಿಸಿದ ಅರೆಬೆತ್ತಲೆ ಮುಸುಕುಧಾರಿ ಕಳ್ಳರು!
Prabhakar R

ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಕೇಸ್‌; ಬೆಳಗಾವಿಗೆ ಮಾನವ ಹಕ್ಕುಗಳ ಆಯೋಗದ ತಂಡ ಭೇಟಿ

ವಂಟಮೂರಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ (Belagavi woman assault case) ಹಿನ್ನೆಲೆಯಲ್ಲಿ ಬೆಳಗಾವಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತಂಡ ಭಾನುವಾರ ಭೇಟಿ ನೀಡಿದೆ. ಮೂವರು ಸದಸ್ಯರು ಇರುವ ತಂಡ ನಗರಕ್ಕೆ ಆಗಮಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದಿದೆ.

ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಕೇಸ್‌; ಬೆಳಗಾವಿಗೆ ಮಾನವ ಹಕ್ಕುಗಳ ಆಯೋಗದ ತಂಡ ಭೇಟಿ
Exit mobile version