ಸಿಡ್ನಿ: ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20 ವಿಶ್ವ ಕಪ್(T20 World Cup) ಸಮರ ಮುಕ್ತಾಯದ ಹಂತಕ್ಕೆ ತಲುಪಿದ್ದು ಬುಧವಾರ(ನವೆಂಬರ್ 9) ನ್ಯೂಜಿಲೆಂಡ್-ಪಾಕಿಸ್ತಾನ, ಗುರುವಾರ(ನವೆಂಬರ್ 10) ಭಾರತ-ಇಂಗ್ಲೆಂಡ್ ತಂಡಗಳು ಉಪಾಂತ್ಯದಲ್ಲಿ ಸೆಣಸಲಿವೆ. ಈ ಪಂದ್ಯಗಳ ಅಂಪೈರ್, ಮ್ಯಾಚ್ ರೆಫ್ರಿಗಳ ಅಂತಿಮ ಪಟ್ಟಿಯನ್ನು ಐಸಿಸಿ ಪ್ರಕಟಿಸಿದೆ. ಆದರೆ ಸೆಮಿಫೈನಲ್ ಪಂದ್ಯಗಳ ಫಲಿತಾಂಶದ ಬಳಿಕ ಫೈನಲ್ ಪಂದ್ಯದ ಅಂಪಾಯರ್ ಯಾದಿ ಪ್ರಕಟಗೊಳ್ಳಲಿದೆ.
ಸಿಡ್ನಿಯಲ್ಲಿ ನಡೆಯುವ ಮೊದಲ ಸೆಮಿಫೈನಲ್ ಪಂದ್ಯವಾದ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಕಾದಾಟಕ್ಕೆ ದಕ್ಷಿಣ ಆಫ್ರಿಕಾದ ಮರೈಸ್ ಎರಾಸ್ಮಸ್ ಮತ್ತು ರಿಚರ್ಡ್ ಇಲ್ಲಿಂಗ್‌ವರ್ತ್ ಫೀಲ್ಡ್ ಅಂಪೈರ್‌ಗಳಾಗಿ ಕರ್ತವ್ಯ ನಿಭಾಯಿಸಲಿದ್ದಾರೆ. ಉಳಿದಂತೆ ಮೂರನೇ ಮತ್ತು ನಾಲ್ಕನೇ ಅಂಪೈರ್‌ಗಳಾಗಿ ರಿಚರ್ಡ್ ಕೆಟ್ಲಬರೋ ಮತ್ತು ಮೈಗಲ್ ಗಾಫ್ ಕಾರ್ಯನಿರ್ವಹಿಸಲಿದ್ದಾರೆ. ಮ್ಯಾಚ್ ರೆಫ್ರಿಯಾಗಿ ಇಂಗ್ಲೆಂಡ್‌ನ ಕ್ರಿಸ್ ಬ್ರಾಡ್ ಕಾಣಿಸಿಕೊಂಡಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವೆ ಅಡಿಲೇಡ್ ಓವಲ್‌ನಲ್ಲಿ ನಡೆಯುವ ದ್ವಿತೀಯ ಸೆಮಿಫೈನಲ್ ಪಂದ್ಯಕ್ಕೆ ಫೀಲ್ಡ್ ಅಂಪೈರ್‌ಗಳಾಗಿ ಶ್ರೀಲಂಕಾದ ಕುಮಾರ ಧರ್ಮಸೇನ ಮತ್ತು ಪಾಲ್ ರೀಫೆಲ್ ಕರ್ತವ್ಯ ನಿಭಾಯಿಸಲಿದ್ದಾರೆ. ಇನ್ನು ಕ್ರಿಸ್ ಗಫಾನಿ(ಥರ್ಡ್ ಅಂಪೈರ್), ರಾಡ್ ಟ್ಯುಕರ್(4ನೇ ಅಂಪೈರ್) ಹಾಗೂ ಮ್ಯಾಚ್ ರೆಫ್ರಿಯಾಗಿ ಆಸ್ಟ್ರೇಲಿಯಾದ ಡೇವಿಡ್ ಬೂನ್ ಕರ್ತವ್ಯ ನಿರ್ವಹಿಸಲಿದ್ದಾರೆ.
ಇದನ್ನೂ ಓದಿ | T20 World Cup | ಡೇವಿಡ್ ಮಲಾನ್‌ಗೆ ಗಾಯ; ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ ?