T20 World Cup | ಡೇವಿಡ್‌ ಮಲಾನ್‌ಗೆ ಗಾಯ; ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ ? - Vistara News

Latest

T20 World Cup | ಡೇವಿಡ್‌ ಮಲಾನ್‌ಗೆ ಗಾಯ; ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ ?

ಸ್ನಾಯು ಸೆಳೆತದ ಗಾಯಕ್ಕೆ ತುತ್ತಾದ ಡೇವಿಡ್‌ ಮಲಾನ್‌ ಭಾರತ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.

VISTARANEWS.COM


on

malan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಿಡ್ನಿ: ಐಸಿಸಿ ಟಿ20 ವಿಶ್ವ ಕಪ್‌ನ ಸೂಪರ್ 12 ಹಂತದ ಪಂದ್ಯಗಳು ಮುಕ್ತಾಯ ಕಂಡು ಸೆಮಿಫೈನಲ್ ಸಮರಕ್ಕೆ ವೇದಿಕೆ ಸಜ್ಜಾಗಿದೆ. ಆದರೆ ಇದಕ್ಕೂ ಮುನ್ನ ಇಂಗ್ಲೆಂಡ್‌ ತಂಡಕ್ಕೆ ಗಾಯಾದ ಸಮಸ್ಯೆ ಎದುರಾಗಿದೆ. ತಂಡದ ಸ್ಟಾರ್‌ ಎಡಗೈ ಆಟಗಾರ ಡೇವಿಡ್‌ ಮಲಾನ್‌ ಸ್ನಾಯು ಸೆಳೆತಕ್ಕೆ ಸಿಲುಕಿದ್ದು ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ ಎನ್ನಲಾಗಿದೆ.

ಶ್ರೀಲಂಕಾ ಎದುರು ಶನಿವಾರ ನಡೆದ ‘ಸೂಪರ್‌ 12’ ಹಂತದ ಕೊನೆಯ ಲೀಗ್‌ ಪಂದ್ಯದಲ್ಲಿ ಮಲಾನ್‌ ಗಾಯಗೊಂಡಿದ್ದರು. ಫೀಲ್ಡಿಂಗ್‌ ವೇಳೆ ಗಾಯಗೊಂಡಿದ್ದ ಅವರು ಇಂಗ್ಲೆಂಡ್‌ನ ಇನಿಂಗ್ಸ್‌ ವೇಳೆ ಬ್ಯಾಟಿಂಗ್‌ ನಡೆಸಲಿಲ್ಲ. ಇದೀಗ ಭಾರತ ವಿರುದ್ಧದ ಸೆಮಿ ಪಂದ್ಯದ ವೇಳೆಗೆ ಮಲಾನ್‌ ಚೇತರಿಸಿಕೊಳ್ಳದಿದ್ದರೆ, ಫಿಲ್‌ ಸಾಲ್ಟ್‌ಗೆ ಅವಕಾಶ ಲಭಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಒಂದೊಮ್ಮೆ ಫಿಲ್‌ ಸಾಲ್ಟ್‌ಗೆ ಅವಕಾಶ ನೀಡಿದರೂ ಮಲಾನ್‌ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬೆನ್‌ ಸ್ಟೋಕ್ಸ್‌ ಆಡಳಿದ್ದಾರೆ ಎಂದು ತಂಡದ ಮೂಲವೊಂದು ಮಾಹಿತಿ ನೀಡಿದೆ.

ಮಲಾನ್‌ ಗಾಯದ ಕುರಿತು ಮಾತನಾಡಿದ ತಂಡದ ಉಪನಾಯಕ ಮೊಯಿನ್‌ ಅಲಿ, “ಮಲಾನ್‌ ಗಾಯದ ಕುರಿತು ಯಾವುದೇ ಅಪ್‌ಡೇಟ್‌ ಲಭ್ಯವಾಗಿಲ್ಲ. ಪಂದ್ಯಕ್ಕೆ ಇನ್ನೂ ಎರಡು ದಿನ ಬಾಕಿ ಉಳಿದಿವೆ. ಆದ್ದರಿಂದ ಅವರು ಭಾರತ ವಿರುದ್ಧ ಆಡುವುದು ಅನುಮಾನ ಎಂದು ಮೊದಲೇ ನಿರ್ಧರಿಸಲು ಸಾಧ್ಯವಿಲ್ಲ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | T20 World Cup | ಅಡಿಲೇಡ್​ ತಲುಪಿದ ರೋಹಿತ್​ ಪಡೆ; ಮಂಗಳವಾರದಿಂದ ಕಠಿಣ ಅಭ್ಯಾಸ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Kanyakumari Tour: ತುಂಬಾ ದುಬಾರಿ ಏನಿಲ್ಲ, ನೀವೂ ಮಾಡಬಹುದು ಕನ್ಯಾಕುಮಾರಿ ಪ್ರವಾಸ

ಪ್ರವಾಸದ ಯೋಜನೆ ಕೆಲವೊಮ್ಮೆ ಜೇಬಿಗೆ ಕತ್ತರಿ ಹಾಕುತ್ತದೆ ಎನ್ನುವ ಭಯವಿರುತ್ತದೆ. ಆದರೆ ಕನ್ಯಾಕುಮಾರಿಗೆ ಪ್ರವಾಸ (Kanyakumari Tour) ಹೊರಡುವ ಯೋಜನೆ ಮಾಡಿದರೆ ಇಲ್ಲಿ ಜೇಬಿಗೆ ಭಾರವಾಗದ ಹಲವು ತಾಣಗಳಿವೆ. ಆದರೆ ಸ್ವಲ್ಪ ಬುದ್ದಿವಂತಿಕೆ ತೋರಬೇಕು ಅಷ್ಟೇ. ಕನ್ಯಾಕುಮಾರಿಯ ಪ್ರಮುಖ ಸ್ಥಳಗಳ ಪರಿಚಯ ಇಲ್ಲಿದೆ.

VISTARANEWS.COM


on

By

Kanyakumari Tour
Koo

ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಕನ್ಯಾಕುಮಾರಿಗೆ ಪ್ರವಾಸ (Kanyakumari Tour) ಹೊರಡುವ ಯೋಚನೆಯಲ್ಲಿದ್ದರೆ ಇಲ್ಲಿನ ಕೆಲವೊಂದು ಸಂಗತಿಗಳನ್ನು ಮಿಸ್ ಮಾಡಿಕೊಳ್ಳದಿರಿ. ಅತ್ಯದ್ಭುತ ನೈಸರ್ಗಿಕ ಸೌಂದರ್ಯ ಮತ್ತು ಆಧ್ಯಾತ್ಮಿಕ ಮಹತ್ವ ಎರಡಕ್ಕೂ ಹೆಸರುವಾಸಿಯಾಗಿರುವ ಕನ್ಯಾಕುಮಾರಿಗೆ ಜೀವನದಲ್ಲೊಮ್ಮೆಯಾದರೂ ಭೇಟಿ ನೀಡಲೇಬೇಕು.


ಕನ್ಯಾಕುಮಾರಿ ನಗರವು ಐಷಾರಾಮಿ ಹಾಟ್‌ಸ್ಪಾಟ್ ಎಂಬ ಖ್ಯಾತಿಯನ್ನು ಪಡೆದಿದ್ದರೂ ಇಲ್ಲಿ ನಿಮ್ಮ ಬಜೆಟ್ ಮೀರದ ಹಾಗೆ ಪ್ರವಾಸ ಮಾಡಲು ಹಲವು ಆಯ್ಕೆಗಳನ್ನೂ ನೀಡುತ್ತದೆ. ಕೆಲವು ಯೋಜನೆ ಮತ್ತು ಸ್ಥಳೀಯರ ಸಲಹೆ ಪಡೆದರೆ ಬಜೆಟ್ ಮೀರದ ಹಾಗೆ ಪ್ರವಾಸವನ್ನೂ ಪೂರ್ಣಗೊಳಿಸಬಹುದು. ಜೀವನದಲ್ಲಿ ಅತ್ಯಂತ ಸುಂದರ ಅನುಭವವನ್ನು ತಮ್ಮದಾಗಿಸಿಕೊಳ್ಳಬಹುದು.

ಸೂರ್ಯೋದಯ – ಸೂರ್ಯಾಸ್ತ

ಕನ್ಯಾಕುಮಾರಿಗೆ ಭೇಟಿ ನೀಡುವ ಅವಕಾಶ ಸಿಕ್ಕಾಗ ಇಲ್ಲಿನ ಸೂರ್ಯೋದಯ, ಸೂರ್ಯಾಸ್ತವನ್ನು ವೀಕ್ಷಿಸುವ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ಅರಬ್ಬಿ ಸಮುದ್ರ (Arabian Sea), ಬಂಗಾಳ ಕೊಲ್ಲಿ (Bay of Bengal) ಮತ್ತು ಹಿಂದೂ ಮಹಾಸಾಗರದ (Indian Ocean) ಭೇಟಿಯ ಸ್ಥಳದಲ್ಲಿ ಅತ್ಯಂತ ಸುಂದರವಾದ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಕಣ್ತುಂಬಿ ಕೊಳ್ಳಬಹದು. ಇದಕ್ಕಾಗಿ ಯಾವುದೇ ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ; ತೀರದ ಪಕ್ಕದಲ್ಲಿ ಕುಳಿತುಕೊಂಡು ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿ ಕೊಳ್ಳಬಹುದು.

ಐಕಾನಿಕ್ ಹೆಗ್ಗುರುತು

ಕನ್ಯಾಕುಮಾರಿಯು ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸವನ್ನು ಪ್ರದರ್ಶಿಸುವ ಅನೇಕ ಪ್ರಸಿದ್ಧ ತಾಣಗಳನ್ನು ಹೊಂದಿದೆ. ಹೆಚ್ಚಿನ ಸ್ಥಳಗಳು ಕಡಿಮೆ ಪ್ರವೇಶ ಶುಲ್ಕವನ್ನು ಹೊಂದಿವೆ ಅಥವಾ ಉಚಿತ ಪ್ರವೇಶವನ್ನು ನೀಡುತ್ತವೆ.
ಹಿಂದೂ ಸಂತ ಸ್ವಾಮಿ ವಿವೇಕಾನಂದರ ಗೌರವಾರ್ಥವಾಗಿ ನಿರ್ಮಿಸಲಾದ ವಿವೇಕಾನಂದ ರಾಕ್ ಮೆಮೋರಿಯಲ್‌ ಗೆ ಹೋಗಲು ದೋಣಿಯಲ್ಲಿ ತೆರಳಬೇಕು. ಈಲ್ಲಿ ಅದ್ಭುತವಾದ ನೋಟಗಳಲ್ಲದೆ, ಧ್ಯಾನ ಮಂದಿರಕ್ಕೂ ಭೇಟಿ ನೀಡಬಹುದು.

ಪ್ರಾಚೀನ ತಮಿಳು ಕವಿ ತಿರುವಳ್ಳುವರ್ ಅವರನ್ನು ಗೌರವಿಸುವ ತಿರುವಳ್ಳುವರ್ ಪ್ರತಿಮೆ ಕನ್ಯಾಕುಮಾರಿ ಕರಾವಳಿಯ ಹೊರವಲಯದಲ್ಲಿದೆ. ಈ ಬೃಹತ್ ರಚನೆಯು ನಿಮ್ಮ ಬಜೆಟ್ ಅನ್ನು ಮೀರಿಸುವುದಿಲ್ಲ. ಅಲ್ಲದೇ ಅತ್ಯಂತ ಸುಂದರ ದೃಶ್ಯಾವಳಿಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ನೀಡುತ್ತದೆ.


ಪ್ರಕೃತಿಯ ನಡುವೆ ಸುಂದರ ಸಮಯ

ಕನ್ಯಾಕುಮಾರಿಯಲ್ಲಿ ಸುಂದರವಾದ ಪ್ರಕೃತಿಕ ತಾಣಗಳಿಗೆ ಕೊರತೆಯಿಲ್ಲ, ಆದ್ದರಿಂದ ಪ್ರಕೃತಿ ಪ್ರಿಯರು ಇಲ್ಲಿ ಉತ್ತಮ ಸಮಯವನ್ನು ಕಳೆಯಬಹುದು. ಈ ಪ್ರದೇಶವು ಸುಂದರವಾದ ಕಡಲತೀರಗಳಿಂದ ಹಿಡಿದು ಸೊಂಪಾದ ಭೂದೃಶ್ಯಗಳವರೆಗೆ ಎಲ್ಲವನ್ನೂ ನೀಡುತ್ತದೆ.

ಕನ್ಯಾಕುಮಾರಿ ಬೀಚ್ ನಲ್ಲಿ ಸೂರ್ಯನ ಸ್ನಾನ ಅಥವಾ ಸಮುದ್ರದಲ್ಲಿ ಈಜಲು ಕೆಲವು ಗಂಟೆಗಳ ಕಾಲ ಕಳೆಯಬಹುದು. ವಿವೇಕಾನಂದ ರಾಕ್ ಸ್ಮಾರಕ ಮತ್ತು ತಿರುವಳ್ಳುವರ್ ಪ್ರತಿಮೆಯನ್ನು ನೋಡುತ್ತಾ ಧ್ಯಾನ ಮಗ್ನರಾಗಿ ಕುಳಿತುಕೊಳ್ಳಬಹುದು. ಕನ್ಯಾಕುಮಾರಿಯಿಂದ ಸುಮಾರು 13 ಕಿಲೋಮೀಟರ್ ದೂರದಲ್ಲಿರುವ ಸುಚಿಂದ್ರಂ ದೇವಸ್ಥಾನದ ಕೊಳ ಪ್ರಶಾಂತ ವಾತಾವರಣದ ಮಧ್ಯ ಇದೆ. ಪುರಾತನ ದೇವಾಲಯಗಳಿಂದ ಆವೃತವಾಗಿದೆ. ಇದು ಸುಮ್ಮನೆ ನಡಿಗೆ, ಧ್ಯಾನಕ್ಕಾಗಿ ಸೂಕ್ತ ಅವಕಾಶವನ್ನು ಕಲ್ಪಿಸುತ್ತದೆ.

ವೈಭವದ ಸಾಂಸ್ಕೃತಿಕ ಪರಂಪರೆ

ಕನ್ಯಾಕುಮಾರಿ ನಗರವು ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯ ಒಳನೋಟವನ್ನು ನೀಡುತ್ತದೆ. ಕನ್ಯಾಕುಮಾರಿ ಅಮ್ಮನ್ ದೇವಸ್ಥಾನಕ್ಕೆ ದೇಶದ ವಿವಿಧ ಭಾಗಗಳಿಂದ ಯಾತ್ರಿಕರನ್ನು ಆಹ್ವಾನಿಸುತ್ತದೆ. ದೇವಾಲಯದ ಎತ್ತರದ ಗೋಪುರ, ಸಂಕೀರ್ಣವಾದ ಕೆತ್ತಿದ ಕಂಬಗಳು ಈ ಪ್ರದೇಶದಲ್ಲಿ ಅನುಸರಿಸುವ ಸಂಪ್ರದಾಯಗಳು, ಆಚರಣೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತದೆ.


ಇದನ್ನೂ ಓದಿ: Porbandar Tour: ಪೋರ್ ಬಂದರಿನಲ್ಲಿ ನೋಡಲೇಬೇಕಾದ ಅದ್ಭುತ ಸ್ಥಳಗಳಿವು

ಸ್ಥಳೀಯ ಖಾದ್ಯ ರುಚಿ

ಬಜೆಟ್ ಸ್ನೇಹಿ ಕರಕುಶಲ ವಸ್ತುಗಳು, ಸಾಂಪ್ರದಾಯಿಕ ಕಲಾಕೃತಿಗಳನ್ನು ಇಲ್ಲಿ ಖರೀದಿ ಮಾಡಬಹುದು, ಜೊತೆಗೆ ಸ್ಥಳೀಯ ತಿನಿಸುಗಳು, ಸಮುದ್ರಾಹಾರ ತಿಂಡಿಗಳು, ಬಾಳೆಹಣ್ಣು ಚಿಪ್ಸ್, ತೆಂಗಿನಕಾಯಿ ಸಿಹಿತಿಂಡಿಗಳು ಕೈಗೆಟಕುವ ದರದಲ್ಲಿ ಲಭ್ಯವಾಗುತ್ತದೆ.

Continue Reading

Lok Sabha Election 2024

Lok Sabha Election 2024: ಘಟಾನುಘಟಿಗಳ ಸ್ಪರ್ಧೆ; ಮೇ 7ರ ಮೂರನೇ ಹಂತದ ಪೈಪೋಟಿಯ ಚಿತ್ರಣ ಇಲ್ಲಿದೆ

ಲೋಕಸಭಾ ಚುನಾವಣೆ 2024ರ 3ನೇ ಹಂತದ ಮತದಾನ ಮೇ 7 ರಂದು ನಡೆಯಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಎಸ್‌ಪಿಯ ಅಖಿಲೇಶ್‌ ಯಾದವ್‌ ಪತ್ನಿ ಡಿಂಪಲ್ ಯಾದವ್, ಮಧ್ಯ ಪ್ರದೇಶ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಎನ್‌ಸಿಪಿ ನಾಯಕ ಶರದ್‌ ಪವಾರ್‌ ಪುತ್ರಿ ಸುಪ್ರಿಯಾ ಸುಳೆ ಸೇರಿದಂತೆ ಹಲವು ಪ್ರಮುಖರ ಅದೃಷ್ಟ ಪರೀಕ್ಷೆ (Lok Sabha Election 2024) ನಡೆಯಲಿದೆ. ಈ ಕುರಿತ ಚಿತ್ರಣ ಇಲ್ಲಿದೆ.

VISTARANEWS.COM


on

By

Lok Sabha Elections-2024
Koo

ಲೋಕಸಭಾ ಚುನಾವಣೆ 2024ರ (Lok Sabha Election 2024) 3ನೇ ಹಂತದ (3rd phase) ಮತದಾನ (voting) ಮೇ 7ರಂದು 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 95 ಸ್ಥಾನಗಳಿಗೆ ನಡೆಯಲಿದೆ. ಈ ಬಾರಿ ಕಣದಲ್ಲಿರುವ ಹಲವು ಪ್ರಮುಖ ನಾಯಕರ ಅದೃಷ್ಟ ಪರೀಕ್ಷೆ ನಡೆಯಲಿದೆ.

ಇದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah), ಬಂಡಾಯ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ( KS Eshwarappa), ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia), ಡಿಂಪಲ್ ಯಾದವ್ (Dimple Yadav), ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಮತ್ತು ಸುಪ್ರಿಯಾ ಸುಳೆ (Supriya Sule) ಸೇರಿದ್ದಾರೆ.


2024 ರ ಲೋಕಸಭಾ ಚುನಾವಣೆಯ 3ನೇ ಹಂತದಲ್ಲಿ ಸ್ಪರ್ಧಿಸುವ ಪ್ರಮುಖ ಪಕ್ಷಗಳಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ), ಸಮಾಜವಾದಿ ಪಕ್ಷ (ಎಸ್‌ಪಿ), ಕಾಂಗ್ರೆಸ್ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಸೇರಿವೆ.

ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು

ಅಮಿತ್ ಶಾ

ಕೇಂದ್ರ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಅವರು ಗುಜರಾತ್‌ನ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಗಾಂಧಿನಗರದಿಂದ ಎರಡನೇ ಬಾರಿಗೆ ಕಣಕ್ಕಿಳಿದಿರುವ ಅಮಿತ್ ಶಾ ಅವರಿಗೆ ಕಾಂಗ್ರೆಸ್‌ನ ಸೋನಾಲ್ ಪಟೇಲ್ ಸ್ಪರ್ಧೆ ನೀಡುತ್ತಿದ್ದಾರೆ. 1989ರಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಅಜೇಯವಾಗಿದೆ. 2019ರ ಚುನಾವಣೆಯಲ್ಲಿ ಅಮಿತ್ ಶಾ ಅವರು 5.55 ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್‌ನ ಸಿ.ಜೆ. ಚಾವ್ಡಾ ಅವರನ್ನು ಸೋಲಿಸಿದ್ದರು.

ಡಿಂಪಲ್ ಯಾದವ್

ಎಸ್‌ಪಿ ಅಭ್ಯರ್ಥಿ ಡಿಂಪಲ್ ಯಾದವ್ ಅವರು 2024ರ ಲೋಕಸಭಾ ಚುನಾವಣೆಗೆ ಉತ್ತರ ಪ್ರದೇಶದ ‘ಮೈನ್‌ಪುರಿ’ಯಿಂದ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರ ಸಮಾಜವಾದಿ ಪಕ್ಷದ ಭದ್ರಕೋಟೆ. ಡಿಂಪಲ್‌ ಯಾದವ್‌ ಅವರು ಎಸ್ಪಿ ವರಿಷ್ಠ ನಾಯಕ ಅಖಿಲೇಶ್‌ ಯಾದವ್‌ ಅವರ ಪತ್ನಿ. 2022ರಲ್ಲಿ ಎಸ್‌ಪಿ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಮರಣದ ಅನಂತರ ಅವರ ಸೊಸೆ ಡಿಂಪಲ್ ಯಾದವ್ ಅವರು ಉಪಚುನಾವಣೆಯಲ್ಲಿ ಇಲ್ಲಿಂದ ಗೆದ್ದಿದ್ದರು. ಡಿಂಪಲ್ ಯಾದವ್ ಅವರು ಮೂರು ಬಾರಿ ಸಂಸದರಾಗಿದ್ದಾರೆ. ಇವರ ವಿರುದ್ಧ ಬಿಜೆಪಿ ಅಭ್ಯರ್ಥಿ ಜೈವೀರ್ ಸಿಂಗ್ ಕಣದಲ್ಲಿ ಇದ್ದಾರೆ.

ಜ್ಯೋತಿರಾದಿತ್ಯ ಸಿಂಧಿಯಾ

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು 2024ರ ಲೋಕಸಭಾ ಚುನಾವಣೆಯ 3ನೇ ಹಂತದಲ್ಲಿ ಮೇ 7ರಂದು ನಡೆಯಲಿರುವ ಮಧ್ಯಪ್ರದೇಶದ ಗುಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್‌ನ ರಾವ್ ಯದ್ವೇಂದ್ರ ಸಿಂಗ್ ಅವರ ವಿರುದ್ಧ ಕಣದಲ್ಲಿ ಇದ್ದಾರೆ. 2019ರ ಚುನಾವಣೆಯಲ್ಲಿ ಬಿಜೆಪಿಯ ಕೃಷ್ಣ ಪಾಲ್ ಸಿಂಗ್ ಅವರು ಕಾಂಗ್ರೆಸ್ ಅಭ್ಯರ್ಥಿ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಸೋಲಿಸಿದ್ದರು. ಆ ಬಳಿಕ ಸಿಂಧಿಯಾ ಬಿಜೆಪಿ ಸೇರಿ ಕೇಂದ್ರದಲ್ಲಿ ಸಚಿವರಾಗಿದ್ದಾರೆ.

ಶಿವರಾಜ್ ಸಿಂಗ್ ಚೌಹಾಣ್

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಬಿಜೆಪಿ ವಿದಿಶಾ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಮಧ್ಯಪ್ರದೇಶದಲ್ಲಿ ಬಹುಕಾಲ ಮುಖ್ಯಮಂತ್ರಿಯಾಗಿದ್ದ ಶಿವರಾಜ್ ಸಿಂಗ್ ಚೌಹಾಣ್ ಅವರು ವಿದಿಶಾ ಕ್ಷೇತ್ರದಿಂದ ಐದು ಬಾರಿ ಸಂಸದರಾಗಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರತಾಪ್ ಭಾನು ಶರ್ಮಾ ವಿರುದ್ಧ ಶಿವರಾಜ್ ಸಿಂಗ್ ಚೌಹಾಣ್ ಸ್ಪರ್ಧಿಸುತ್ತಿದ್ದಾರೆ.

ಸುಪ್ರಿಯಾ ಸುಳೆ

ಎನ್‌ಸಿಪಿ ವರಿಷ್ಠ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಅವರು ಮಹಾರಾಷ್ಟ್ರದ ಬಾರಾಮತಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಪವಾರ್‌ vs ಪವಾರ್‌ ಈ ಬಾರಿಯ ವಿಶೇಷ. ಬಿಜೆಪಿ ನೇತೃತ್ವದ ಎನ್‌ಡಿಎ ಸೇರಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿಯಾಗಿರುವ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಈಗ ಸುಪ್ರಿಯಾ ಸುಳೆ ವಿರುದ್ಧ ಸ್ಪರ್ಧಿಸಿದ್ದಾರೆ. ಹಾಗಾಗಿ ಫಲಿತಾಂಶ ಭಾರಿ ಕುತೂಹಲ ಮೂಡಿಸಿದೆ. ಹಾಲಿ ಸಂಸದೆ ಸುಪ್ರಿಯಾ ಸುಳೆ ಈ ಕ್ಷೇತ್ರದಲ್ಲಿ ಮೂರು ಬಾರಿ ಸ್ಪರ್ಧಿಸಿ ಗೆದ್ದಿದ್ದರು.

ಕರ್ನಾಟಕದಲ್ಲಿ ಬಿಜೆಪಿ ಹಿರಿಯ ನಾಯಕ ಕೆ ಎಸ್‌ ಈಶ್ವರಪ್ಪ ಅವರು ಈ ಬಾರಿ ಬಂಡಾಯ ಅಭ್ಯರ್ಥಿಯಾಗಿ ಶಿವಮೊಗ್ಗದಿಂದ ಕಣಕ್ಕೆ ಇಳಿದಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹಾಲಿಸ ಸಂಸದ ಬಿ ವೈ ರಾಘವೇಂದ್ರ ಸ್ಪರ್ಧಿಸುತ್ತಿದ್ದಾರೆ.

3ನೇ ಹಂತದ ಚುನಾವಣೆ ನಡೆಯಲಿರುವ ಕ್ಷೇತ್ರಗಳು

ಅಸ್ಸಾಂ: ಧುಬ್ರಿ, ಕೊಕ್ರಜಾರ್, ಬರ್ಪೇಟಾ, ಗೌಹಾಟಿ, ಬಿಹಾರದ ಝಂಜರ್ಪುರ್, ಸುಪೌಲ್, ಅರಾರಿಯಾ, ಮಾಧೆಪುರ, ಖಗಾರಿಯಾ

ಛತ್ತೀಸ್‌ಗಢ: ಸರ್ಗುಜಾ, ರಾಯ್‌ಗಢ, ಜಾಂಜ್‌ಗೀರ್-ಚಂಪಾ, ಕೊರ್ಬಾ, ಬಿಲಾಸ್‌ಪುರ್, ದುರ್ಗ್, ರಾಯ್‌ಪುರ್.

ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು

ಗೋವಾ: ಉತ್ತರ ಗೋವಾ, ದಕ್ಷಿಣ ಗೋವಾ, ಗುಜರಾತ್ ನ ಕಚ್ಛ್, ಬನಸ್ಕಾಂತ, ಪಟಾನ್, ಮಹೇಶಾನಾ, ಸಬರ್ಕಾಂತ, ಗಾಂಧಿನಗರ, ಅಹಮದಾಬಾದ್ ಪೂರ್ವ, ಅಹಮದಾಬಾದ್ ಪಶ್ಚಿಮ, ಸುರೇಂದ್ರನಗರ, ರಾಜ್‌ಕೋಟ್, ಪೋರಬಂದರ್, ಜಾಮ್‌ನಗರ, ಜುನಾಗಢ, ಅಮ್ರೇಲಿ, ಭಾವನಗರ, ಆನಂದ್, ಖೇಡಾ, ಪಂಚಮಹಲ್, ದಾಹೋದ್, ವಡೋದರ, ಛೋಟಾ ಉದಯಪುರ, ಭರೂಚ್, ಭರೂಚ್, ನವಸಾರಿ, ವಲ್ಸಾದ್

ಕರ್ನಾಟಕ: ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ

ಮಧ್ಯಪ್ರದೇಶ: ಬೇತುಲ್, ಮೊರೆನಾ, ಭಿಂಡ್, ಗ್ವಾಲಿಯರ್, ಗುಣ, ಸಾಗರ್, ವಿದಿಶಾ, ಭೋಪಾಲ್, ರಾಜ್‌ಗಢ್, ಬೇತುಲ್

ಮಹಾರಾಷ್ಟ್ರ: ಬಾರಾಮತಿ, ರಾಯಗಢ, ಧರಾಶಿವ, ಲಾತೂರ್ (SC), ಸೋಲಾಪುರ (SC), ಮಾಧಾ, ಸಾಂಗ್ಲಿ, ರತ್ನಗಿರಿ-ಸಿಂಧುದುರ್ಗ, ಕೊಲ್ಲಾಪುರ, ಹತ್ಕನಂಗಲೆ

ಉತ್ತರ ಪ್ರದೇಶ: ಸಂಭಾಲ್, ಹತ್ರಾಸ್, ಆಗ್ರಾ (SC), ಫತೇಪುರ್ ಸಿಕ್ರಿ, ಫಿರೋಜಾಬಾದ್, ಮೈನ್‌ಪುರಿ, ಇಟಾಹ್, ಬುಡೌನ್, ಅಯೋನ್ಲಾ, ರಾಯ್‌ ಬರೇಲಿ

ಪಶ್ಚಿಮ ಬಂಗಾಳ: ಮಾಲ್ಡಾ ಉತ್ತರ, ಮಾಲ್ಡಾ ದಕ್ಷಿಣ, ಜಂಗಿಪುರ, ಮುರ್ಷಿದಾಬಾದ್

ಕಣದಲ್ಲಿ 1,351 ಅಭ್ಯರ್ಥಿಗಳು

ಮೇ 7ರಂದು ನಡೆಯಲಿರುವ ಮೂರನೇ ಹಂತದ ಲೋಕಸಭೆ ಚುನಾವಣೆಯಲ್ಲಿ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 1,351 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಚುನಾವಣಾ ಆಯೋಗ ಮಂಗಳವಾರ ತಿಳಿಸಿದೆ.

ಇದನ್ನೂ ಓದಿ: Amethi Unrest: ಕಾಂಗ್ರೆಸ್‌ ಕಚೇರಿ ಮೇಲೆ ಕಿಡಿಗೇಡಿಗಳಿಂದ ಅಟ್ಯಾಕ್‌; ಬಿಜೆಪಿಯ ದುಷ್ಕೃತ್ಯ ಎಂದು ಆರೋಪ

ಅತೀ ಹೆಚ್ಚು ನಾಮಪತ್ರ

ಮೂರನೇ ಹಂತದಲ್ಲಿ ಗುಜರಾತ್ 26 ಸಂಸದೀಯ ಕ್ಷೇತ್ರಗಳಿಂದ ಗರಿಷ್ಠ 658 ನಾಮನಿರ್ದೇಶನಗಳನ್ನು ಹೊಂದಿತ್ತು, ಅನಂತರ ಮಹಾರಾಷ್ಟ್ರವು 11 ಸ್ಥಾನಗಳಿಂದ 519 ನಾಮನಿರ್ದೇಶನಗಳನ್ನು ಹೊಂದಿದೆ. ಮಹಾರಾಷ್ಟ್ರದ ಒಸ್ಮಾನಾಬಾದ್ ಕ್ಷೇತ್ರಕ್ಕೆ ಗರಿಷ್ಠ 77 ನಾಮಪತ್ರಗಳು ಬಂದಿದ್ದು, ಛತ್ತೀಸ್‌ಗಢದ ಬಿಲಾಸ್‌ಪುರ ಕ್ಷೇತ್ರಕ್ಕೆ 68 ನಾಮಪತ್ರಗಳು ಬಂದಿವೆ ಎಂದು ಚುನಾವಣಾ ಸಮಿತಿ ತಿಳಿಸಿದೆ.

Continue Reading

ಪ್ರಮುಖ ಸುದ್ದಿ

IPL 2024 : ಐಪಿಎಲ್ ಸ್ಟೇಡಿಯಮ್​ಗಳ ಗಾತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಆರ್​ ಅಶ್ವಿನ್​

IPL 2024 : ಐಪಿಎಲ್ 2024 ರಲ್ಲಿ ಸನ್​ರೈಸರ್ಸ್​​ ಹೈದರಾಬಾದ್ 277 ಮತ್ತು 287 ರನ್ ಗಳಿಸಿದ್ದರೆ, ಈ ಋತುವಿನಲ್ಲಿ ಹಲವು ತಂಡಗಳು 250 ಸ್ಕೋರ್​ಗಳ ಗಾಡಿ ಮೀರಿಸಿದೆ. ಇಂಪ್ಯಾಕ್ಟ್ ಪ್ಲೇಯರ್ ನಿಯಮವು ತಂಡಗಳಿಗೆ 8 ಬ್ಯಾಟರ್​ಗಳನ್ನು ಆಡುವ ಸ್ವಾತಂತ್ರ್ಯವನ್ನು ನೀಡಿದೆ. ಇದು ದೊಡ್ಡ ಮೊತ್ತಕ್ಕೆ ಸಹಾಯ ಮಾಡುತ್ತದೆ ಎಂಬುದು ಅಶ್ವಿನ್ ವಾದವಾಗಿದೆ.

VISTARANEWS.COM


on

IPL 2024
Koo

ನವದೆಹಲಿ: ಆಧುನಿಕ ಕ್ರಿಕೆಟ್​​ನಲ್ಲಿ ಪವರ್ ಹಿಟ್ಟಿಂಗ್ ಬ್ಯಾಟಿಂಗ್​ ಪ್ರವೃತ್ತಿಯು ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಗಳ ಗಾತ್ರದ ಪ್ರಾಮುಖ್ಯತೆಯನ್ನು ಕುಗ್ಗಿಸುತ್ತದೆ ಎಂದು ರಾಜಸ್ಥಾನ್ ರಾಯಲ್ಸ್ (Rajastan Royals) ಪರ ಆಡುವ ಅನುಭವಿ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಹೇಳಿದ್ದಾರೆ. ಇದು ಆಟವನ್ನು ಹೆಚ್ಚು ಏಕಪಕ್ಷೀಯವಾಗಿಸಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಹಾಲಿ ಐಪಿಎಲ್​ನಲ್ಲಿ (IPL 2024) ಬೃಹತ್​​ ಮೊತ್ತಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅವರು ಈ ಮಾತನ್ನು ಉಲ್ಲೇಖಿಸಿದ್ದಾರೆ.

ಐಪಿಎಲ್ 2024 ರಲ್ಲಿ ಸನ್​ರೈಸರ್ಸ್​​ ಹೈದರಾಬಾದ್ 277 ಮತ್ತು 287 ರನ್ ಗಳಿಸಿದ್ದರೆ, ಈ ಋತುವಿನಲ್ಲಿ ಹಲವು ತಂಡಗಳು 250 ಸ್ಕೋರ್​ಗಳ ಗಾಡಿ ಮೀರಿಸಿದೆ. ಇಂಪ್ಯಾಕ್ಟ್ ಪ್ಲೇಯರ್ ನಿಯಮವು ತಂಡಗಳಿಗೆ 8 ಬ್ಯಾಟರ್​ಗಳನ್ನು ಆಡುವ ಸ್ವಾತಂತ್ರ್ಯವನ್ನು ನೀಡಿದೆ. ಇದು ದೊಡ್ಡ ಮೊತ್ತಕ್ಕೆ ಸಹಾಯ ಮಾಡುತ್ತದೆ ಎಂಬುದು ಅಶ್ವಿನ್ ವಾದವಾಗಿದೆ.

ಹಿಂದಿನ ದಿನಗಳಲ್ಲಿ ನಿರ್ಮಿಸಲಾದ ಕ್ರೀಡಾಂಗಣಗಳು ಆಧುನಿಕ ದಿನಗಳಲ್ಲಿ ಪ್ರಸ್ತುತವಲ್ಲ. ಆಗ ಬಳಸಲಾಗುತ್ತಿದ್ದ ಬ್ಯಾಟ್ ಗಳನ್ನು ಈಗ ಉಪಯೋಗಿಸುತ್ತಿಲ್ಲ. ಪ್ರಾಯೋಜಕರ ಎಲ್ಇಡಿ ಬೋರ್ಡ್​​ಗಳನ್ನು ಬಳಸುವುದರಿಂದ, ಬೌಂಡರಿ ಲೈನ್​ 10 ಗಜಗಳಷ್ಟು ಗಾತ್ರ ಚಿಕ್ಕದಾಗಿದೆ. ಹೀಗಾಗಿ ಬೌಲರ್​ಗಳು ದಂಡಿಸಿಕೊಳ್ಳುತ್ತಿದ್ದಾರೆ. ಅವರಿಗೆ ಮಾನಸಿಕ ಉತ್ತೇಜನದ ಅಗತ್ಯವಿದೆ ಎಂದು ಆರ್​ಆರ್​ ಪ್ರಚಾರ ಕಾರ್ಯಕ್ರಮದಲ್ಲಿ ಅಶ್ವಿನ್ ಹೇಳಿದರು.

ಪ್ರತಿಭಾವಂತ ಬೌಲರ್ ತನ್ನನ್ನು ತಾನು ಸ್ಥಾಪಿಸಿಕೊಳ್ಳುತ್ತಾನೆ. ತನ್ನ ಆವಿಷ್ಕಾರಗಳೊಂದಿಗೆ ಮೈದಾನದ ಉಳಿದ ಭಾಗಗಳಿಂದ ತನ್ನನ್ನು ಪ್ರತ್ಯೇಕಿಸಿಕೊಳ್ಳುತ್ತಾನೆ ಎಂದು ಅಶ್ವಿನ್ ಹೇಳಿದ್ದಾರೆ. ಇದೇ ವೇಳೆ ಅವರು ಚೆಂಡನ್ನು ಹೊಡೆಯುವ ಬ್ಯಾಟರ್​ಗಳ ಸಾಮರ್ಥ್ಯದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್​​ ಬೌಲಿಂಗ್ ದಾಳಿಯು ಇತರ ಕೆಲವು ತಂಡಗಳಂತೆ ತೊಂದರೆ ಅನುಭವಿಸಿಲ್ಲ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: Champions Trophy : ಚಾಂಪಿಯನ್ಸ್​ ಟ್ರೋಫಿ ಮೂಲಕ ಐಪಿಎಲ್​ಗೆ ತೊಂದರೆ ಕೊಡಲು ಪಾಕಿಸ್ತಾನ ಸಂಚು

ಬೌಲರ್​ಗಳು ರನ್ ಬಿಟ್ಟುಕೊಟ್ಟಿರುವ ಸರಾಸರಿ ರನ್​ ನೋಡಿದರೆ ಅಚ್ಚರಿಯಾಗುತ್ತದೆ. ಅದರಲ್ಲಿ ನಾವು (ರಾಜಸ್ಥಾನ್​ ಬೌಲರ್​ಗಳು) ಕಡಿಮೆ ರನ್ ನೀಡಿದ್ದೇವೆ. ಜೈಪುರದಲ್ಲಿ ನಡೆದ ಒಂದು ಪಂದ್ಯದಲ್ಲಿ ನಾವು 180 ರನ್ ಗಳನ್ನೂ ರಕ್ಷಿಸಿದ್ದೇವೆ. ಆದಾಗ್ಯೂ ದಿನದ ಕೊನೆಯಲ್ಲಿ, ಪ್ರೇಕ್ಷಕರು ಬೌಂಡರಿ ಮತ್ತು ಸಿಕ್ಸರ್ ಗಳನ್ನು ವೀಕ್ಷಿಸಲು ಬರುತ್ತಾರೆ ಎಂಬುದು ಸತ್ಯ. ಆದರೆ, ಬೌಲರ್​ಗಳ ದಂಡನೆ ನಿರಂತರ ಎಂದು ನುಡಿದಿದ್ದಾರೆ.

ಜೈಪುರದ ಮೈದಾನದ ಬೌಂಡರಿ ಲೈನ್​ ದೊಡ್ಡದಾಗಿದೆ. ಧ್ರುವ್ ಜುರೆಲ್ “ಇದು ತುಂಬಾ ದೊಡ್ಡದಾಗಿದೆ” ಎಂದು ಹೇಳಿದ್ದರು. ಅದರೆ, ನಾನು ಅದಾದರೂ ಇರಲಿ ಎಂದು ಹೇಳಿದೆ. ಈ ಕ್ರೀಡಾಂಗಣ ಸುತ್ತಲು ಬೈಸಿಕಲ್ ಬೇಕಾಗುತ್ತದೆ ಎಂದು ತಿಳಿದುಕೊಂಡೆ. ಅದರೆ, ಕೆಲವು ಕ್ರೀಡಾಂಗಣಗಳು ಚಿಕ್ಕದಾಗಿವೆ. ಚೂಯಿಂಗ್ ಗಮ್ ಜೋರಾಗಿ ಉಗಿದರೆ ಅದು ಬೌಂಡಿ ಲೈನ್​ಗಿಂತ ಆಚೆ ಹೋಗಿ ಬೀಳುತ್ತದೆ ಎಂದು ಹೇಳಿದರು.

Continue Reading

Latest

Champions Trophy : ಚಾಂಪಿಯನ್ಸ್​ ಟ್ರೋಫಿ ಮೂಲಕ ಐಪಿಎಲ್​ಗೆ ತೊಂದರೆ ಕೊಡಲು ಪಾಕಿಸ್ತಾನ ಸಂಚು

Champions Trophy: ಲಾಹೋರ್​ನ ಗಡಾಫಿ ಕ್ರೀಡಾಂಗಣದಲ್ಲಿ ಶನಿವಾರ (ಮೇ 5) ನಡೆದ ಸಾಮಾನ್ಯ ಮಂಡಳಿ ಸಭೆಯ ಸಿದ್ಧತೆಯಲ್ಲಿ ಪಿಸಿಬಿ ಆರು ಪಿಎಸ್ಎಲ್ ಫ್ರಾಂಚೈಸಿ ಮಾಲೀಕರೊಂದಿಗೆ ಸಭೆ ನಡೆಸಿದ ನಂತರ ಈ ಬೆಳವಣಿಗೆ ಬೆಳಕಿಗೆ ಬಂದಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಏಪ್ರಿಲ್ 7 ರಿಂದ ಮೇ 20 ರವರೆಗೆ ನಡೆಯಲಿದೆ.

VISTARANEWS.COM


on

Champions Trophy
Koo

ಬೆಂಗಳೂರು: ಪಾಕಿಸ್ತಾನ ಸೂಪರ್ ಲೀಗ್ (PSL) ನ 2025 ರ ಆವೃತ್ತಿಯನ್ನು ನಡೆಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಏಪ್ರಿಲ್ 7 ರಿಂದ ಮೇ 20 ರವರೆಗೆ ಸಮಯವನ್ನು ನಿಗದಿಪಡಿಸಿದೆ. ಇದರರ್ಥ ಮುಂದಿನ ವರ್ಷದ ಪಿಎಸ್ಎಲ್ ಇಂಡಿಯನ್ ಪ್ರೀಮಿಯರ್ ಲೀಗ್ 2025 (IPL 2025) ಋತುವಿನೊಂದಿಗೆ ಸಂಘರ್ಷ ಹೊಂದುತ್ತದೆ. ಫೆಬ್ರವರಿ-ಮಾರ್ಚ್​​ನಲ್ಲಿ ಪಾಕಿಸ್ತಾನ ಆತಿಥ್ಯ ವಹಿಸಲಿರುವ 2025 ರ ಚಾಂಪಿಯನ್ಸ್ ಟ್ರೋಫಿಯಿಂದಾಗಿ (Champions Trophy) ಪಿಎಸ್ಎಲ್ 2025 ಅನ್ನು ವಿಳಂಬಗೊಳಿಸುವ ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಬಿಸಿಸಿಐಗೆ ತೊಂದರೆ ನೀಡಲು ಪಾಕಿಸ್ತಾನ ಸಂಚು ರೂಪಿಸಿದೆ.

ಚಾಂಪಿಯನ್ಸ್​ ಟ್ರೋಫಿಗೆ ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಇದು ಶತ್ರು ರಾಷ್ಟ್ರವನ್ನು ಕೆರಳಿಸಿದೆ. ಮತ್ತೊಂದು ಬಾರಿ ಆಗಲಿರುವ ಮುಜುಗರವನ್ನು ತಪ್ಪಿಸಿಕೊಳ್ಳುವುದಕ್ಕೆ ಭಾರತ ಮತ್ತು ಬಿಸಿಸಿಐಗೆ ಕಾಟ ಕೊಡಲು ಮುಂದಾಗಿದೆ. ಅರದಂತೆ ಫೆಬ್ರವರಿ ವೇಳೆಯಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಸಿ ಬಳಿಕ ಪಿಎಸ್​ಎಲ್​ ನಡೆಸಲು ಮುಂದಾಗಿದೆ. ಇದರಿಂದ ಭಾರತಕ್ಕೆ ಐಪಿಎಲ್​ ನಡೆಸಲು ತೊಂದರೆ ಆಗಲಿ ಮತ್ತು ವಿದೇಶಿ ಆಟಗಾರರ ಲಭ್ಯತೆ ಕಡಿಮೆಯಾಗಲಿ ಎಂದು ಯೋಜನೆ ರೂಪಿಸಿದೆ.

ಲಾಹೋರ್​ನ ಗಡಾಫಿ ಕ್ರೀಡಾಂಗಣದಲ್ಲಿ ಶನಿವಾರ (ಮೇ 5) ನಡೆದ ಸಾಮಾನ್ಯ ಮಂಡಳಿ ಸಭೆಯ ಸಿದ್ಧತೆಯಲ್ಲಿ ಪಿಸಿಬಿ ಆರು ಪಿಎಸ್ಎಲ್ ಫ್ರಾಂಚೈಸಿ ಮಾಲೀಕರೊಂದಿಗೆ ಸಭೆ ನಡೆಸಿದ ನಂತರ ಈ ಬೆಳವಣಿಗೆ ಬೆಳಕಿಗೆ ಬಂದಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಏಪ್ರಿಲ್ 7 ರಿಂದ ಮೇ 20 ರವರೆಗೆ ನಡೆಯಲಿದೆ. ಕರಾಚಿ, ಲಾಹೋರ್, ಮುಲ್ತಾನ್ ಮತ್ತು ರಾವಲ್ಪಿಂಡಿ ಪಾಕಿಸ್ತಾನದಲ್ಲಿ ಪಂದ್ಯಗಳನ್ನು ಆಯೋಜಿಸಲಿದ್ದು, ಎರಡೂ ತಂಡಗಳು ತವರು ನೆಲದಲ್ಲಿ ಕನಿಷ್ಠ ಐದು ಪಂದ್ಯಗಳನ್ನು ಆಡಲಿವೆ.

“ಪಿಸಿಬಿ ಹೆಚ್ಚುವರಿ ಸ್ಥಳಗಳನ್ನು ಅನ್ವೇಷಿಸುವುದನ್ನು ಮುಂದುವರಿಸುತ್ತದೆ. ನಾಲ್ಕು ಪ್ಲೇಆಫ್​ಗಳನ್ನು ತಟಸ್ಥ ಸ್ಥಳದಲ್ಲಿ ನಡೆಸಲು ಪ್ರಸ್ತಾಪಿಸಲಾಗಿದೆ, “ಎಂದು ಪಿಸಿಬಿ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: IPL 2024 : ಧೋನಿಯನ್ನು ಬೌಲ್ಡ್​ ಮಾಡಿ ಸಂಭ್ರಮಿಸದ ಹರ್ಷಲ್​ ಪಟೇಲ್​; ಕಾರಣ ನೀಡಿದ ಬೌಲರ್​

ವಿದೇಶಿ ಆಟಗಾರರಿಗೆ ಸಮಸ್ಯೆ

2025 ರಲ್ಲಿ ಐಪಿಎಲ್ ಮತ್ತು ಪಿಎಸ್ಎಲ್ ದಿನಾಂಕಗಳ ನಡುವಿನ ಸಂಭಾವ್ಯ ಘರ್ಷಣೆಯು ಅನೇಕ ವಿದೇಶಿ ಆಟಗಾರರನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ. ಏಕೆಂದರೆ ಅವರು ಎರಡು ಲೀಗ್​ಗಳ ನಡುವೆ ಒಂದನ್ನು ಮಾತ್ರ ಆರಿಸಬೇಕಾಗುತ್ತದೆ.

“ಎಂದಿನಂತೆ, ಪಾಕಿಸ್ತಾನ ಸೂಪರ್ ಲೀಗ್ 2025 ಗಾಗಿ ನಾವು ಫ್ರಾಂಚೈಸಿ ಮಾಲೀಕರೊಂದಿಗೆ ಬಹಳ ರೋಮಾಂಚಕಾರಿ ಮತ್ತು ಆಸಕ್ತಿದಾಯಕ ಸಭೆಯನ್ನು ನಡೆಸಿದ್ದೇವೆ. ಫ್ರಾಂಚೈಸಿ ಮಾಲೀಕರು 2025 ರ ಈವೆಂಟ್ ಮತ್ತು ಅದರಾಚೆಗೆ ಪಿಸಿಬಿ ಶಿಫಾರಸು ಮಾಡಿದ ವಿಂಡೋ ಮತ್ತು ಪ್ಲೇಆಫ್ ಸ್ಥಳಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ.

“ಈ ಸಭೆಯಲ್ಲಿ ಪಿಎಸ್ಎಲ್ 2025 ಮತ್ತು ಅದಕ್ಕಿಂತ ಹೆಚ್ಚಿನ ಸೂಕ್ತ ವಿಂಡೋಗೆ ಸಂಬಂಧಿಸಿದಂತೆ ಪಿಸಿಬಿ ಫ್ರಾಂಚೈಸಿ ಮಾಲೀಕರೊಂದಿಗೆ ಹೆಚ್ಚಿನ ಡೇಟಾ ಹಂಚಿಕೊಳ್ಳಲಿದೆ. ಇದರಿಂದ ಅವರು ತಮ್ಮೊಳಗೆ ಚರ್ಚಿಸಬಹುದು, ಹೆಚ್ಚು ಮಾಹಿತಿಯುತ ನಿರ್ಧಾರ ತೆಗೆದುಕೊಳ್ಳಬಹುದು ಮತ್ತು ಸಾಮಾನ್ಯ ಮಂಡಳಿ ಸಭೆಯಲ್ಲಿ ತಮ್ಮ ಆಲೋಚನೆಗಳು ಮತ್ತು ಆಲೋಚನೆಗಳನ್ನು ಹಂಚಿಕೊಳ್ಳಲಾಗಿದೆ ಎಂದು ಎಂದು ಪಿಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲ್ಮಾನ್ ನಸೀರ್ ಹೇಳಿದ್ದಾರೆ.

ಪಾಕಿಸ್ತಾನದ ಅತಿದೊಡ್ಡ ಬ್ರಾಂಡ್​​ ಒಂದರ ಭವಿಷ್ಯಕ್ಕಾಗಿ ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಫ್ರಾಂಚೈಸಿಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ ಎಂದು ಪಿಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲ್ಮಾನ್ ನಸೀರ್ ಹೇಳಿದ್ದಾರೆ.

Continue Reading
Advertisement
Dead Body Found
ಕ್ರೈಂ6 mins ago

Dead Body Found: ಕಾಫಿ ತೋಟದ ಮಧ್ಯೆ ನೇತಾಡುತ್ತಿತ್ತು ವ್ಯಕ್ತಿ ಶವ; ಕೆರೆಯಲ್ಲಿ ತೇಲಿ ಬಂದ ಅಪರಿಚಿತ

Medical Students
ದೇಶ10 mins ago

Medical Students: ಮದುವೆಗೆ ಹೋದವರು ಸಮುದ್ರದಲ್ಲಿ ಮುಳುಗಿ 5 ಮೆಡಿಕಲ್‌ ವಿದ್ಯಾರ್ಥಿಗಳ ಸಾವು!

India's T20 World Cup Jersey
ಕ್ರೀಡೆ18 mins ago

India’s T20 World Cup Jersey: ಟಿ20 ವಿಶ್ವಕಪ್​ಗೆ ಹೊಸ ಜೆರ್ಸಿಯಲ್ಲಿ ಆಡಲಿದೆ ಭಾರತ; ಜೆರ್ಸಿ ಫೋಟೊ ವೈರಲ್​

Job Alert
ಉದ್ಯೋಗ22 mins ago

Job Alert: ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ನ 3,712 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ನಾಳೆಯೇ ಕೊನೆಯ ದಿನ

assault case in bengaluru
ಬೆಂಗಳೂರು2 hours ago

Assault Case : ವಿಕೋಪಕ್ಕೆ ತಿರುಗಿದ ಜಗಳ; ಕಪಾಳಮೋಕ್ಷಕ್ಕೆ ವ್ಯಕ್ತಿ ಬಲಿ

Prajwal Revanna Case site inspection by SIT team in HD Revanna Basavanagudi residence
ಕ್ರೈಂ2 hours ago

Prajwal Revanna Case: ಪ್ರಜ್ವಲ್‌ ಅತ್ಯಾಚಾರ ಕೇಸ್‌; ಎಚ್‌.ಡಿ. ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು: ವಕೀಲರ ಅಸಮಾಧಾನ

No Diet Day 2024
ಆರೋಗ್ಯ2 hours ago

No Diet Day 2024: ಇಂದು ಡಯೆಟ್‌ ರಹಿತ ದಿನ ಆಚರಿಸುವುದೇಕೆ?

Pakistan Cricket
ಕ್ರೀಡೆ2 hours ago

Pakistan Cricket: ಟಿ20 ವಿಶ್ವಕಪ್​ ಗೆದ್ದರೆ ಪಾಕ್​ ಆಟಗಾರರಿಗೆ ಸಿಗಲಿದೆ ಭಾರೀ ಬಹುಮಾನ ಮೊತ್ತ

Gold Rate Today
ಕರ್ನಾಟಕ2 hours ago

Gold Rate Today: 22 ಕ್ಯಾರಟ್‌, 24 ಕ್ಯಾರಟ್‌ ಚಿನ್ನದ ಬೆಲೆ ಇಂದು ಹೀಗಿವೆ; ತುಸುವೇ ಏರಿಕೆ

Puttakkana makkalu sahana dead
ಕಿರುತೆರೆ2 hours ago

Puttakkana Makkalu: ಸಹನಾಳ ಸಾವಿನ ಸುದ್ದಿ ಕೇಳಿ ಮುಗಿಲುಮುಟ್ಟಿತು ಪುಟ್ಟಕ್ಕನ ಆಕ್ರಂದನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ12 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ21 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ23 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ23 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ4 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

ಟ್ರೆಂಡಿಂಗ್‌