Site icon Vistara News

ಅಮೀನಗಢ ಬಳಿ ಟ್ಯಾಂಕರ್-‌ ಲಾರಿ ಡಿಕ್ಕಿ, ಚಾಲಕರು ಗಂಭೀರ

accident

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಕಮತಗಿ- ಅಮೀನಗಢ ಎಂಬಲ್ಲಿ ಟ್ಯಾಂಕರ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು, ಚಾಲಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಮತಗಿ ಅಮೀನಗಢ ಮಾರ್ಗಮಧ್ಯೆ ಅಪಘಾತ ಸಂಭವಿಸಿದ್ದು, ಲಾರಿ ರಸ್ತೆ ಬದಿಗೆ ಪಲ್ಟಿಯಾಗಿದೆ. ಇಬ್ಬರು ಚಾಲಕರಿಗೆ ಗಂಭೀರ ಗಾಯಗಳಾಗಿವೆ. ಒಬ್ಬನನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಹಾಗೂ ಇನ್ನೊಬ್ಬನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಿಗ್ಗೆ 5.30ರ ಸುಮಾರಿಗೆ‌ ನಡೆದ ಅಪಘಾತ ನಡೆದಿದೆ. ಟ್ಯಾಂಕರ್ ಹಾಗೂ ಲಾರಿ ಮುಂಭಾಗ ನುಜ್ಜುಗುಜ್ಜಾಗಿವೆ. ಟ್ಯಾಂಕರ್ ಬಳ್ಳಾರಿ ಮೂಲದ್ದಾಗಿದ್ದು, ಲಾರಿ ಬಾಗಲಕೋಟೆ ತಾಲ್ಲೂಕಿನ ತುಳಸಿಗೇರಿ ಗ್ರಾಮದವರಿಗೆ ಸೇರಿದೆ. ಸ್ಥಳಕ್ಕೆ ಅಮೀನಗಢ ಪೊಲೀಸರು ಭೇಟಿ ನೀಡಿದ್ದಾರೆ.

ಇದನ್ನೂ ಓದಿ | Tumkur accident | ಶಿರಾ ಬಳಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ, 9 ಕಾರ್ಮಿಕರ ಸಾವು

Exit mobile version