ಕೊಪ್ಪಳ: ಸಿದ್ದರಾಮಯ್ಯ ಕಾಲದಲ್ಲಿ ಕಮಿಷನ್ 10% ಇತ್ತು, ಈಗ 40% (40% Commission) ಆಗಿದೆ ಎಂದು ಕೊಪ್ಪಳ ಗುತ್ತಿಗೆದಾರರ ಸಂಘದ ಸದಸ್ಯರು ಆರೋಪಿಸಿದ್ದಾರೆ.
ಗುತ್ತಿಗೆದಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಪ್ಪ ಅರಕೇರಿ ಹಾಗೂ ಗುತ್ತಿಗೆದಾರ ಟಿ. ರತ್ನಾಕರ ಜಂಟಿ ಸುದ್ದಿಗೋಷ್ಠಿ ನಡೆಸಿ, ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಅವರು ಮಾಡಿದ 40% ಕಮಿಷನ್ ಆರೋಪದಲ್ಲಿ ಸತ್ಯವಿದ್ದು, ಹೇಳಿಕೆಯನ್ನು ನಾವು ಬೆಂಬಲಿಸುತ್ತೇವೆ ಎಂದಿದ್ದಾರೆ.
ಕಮಿಷನ್ ದಂಧೆ ಕೆಲವು ಭಾಗದಲ್ಲಿ ಕಡಿಮೆ ಇರಬಹುದು, ಹೆಚ್ಚಿರಬಹುದು. ಆದರೆ, ಬಳಿಕ ಅದು ಶೇಕಡಾ 40ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿರುವಂತೆ ಕೊಪ್ಪಳ ಜಿಲ್ಲೆಯಲ್ಲಿಯೂ 40% ಕಮಿಷನ್ ಹೊರತಾಗಿಲ್ಲ. ಇಲ್ಲಿಯೂ ಕೆಲವರು ಒಂದಿಷ್ಟು ಕಡಿಮೆ ತೆಗೆದುಕೊಳ್ಳಬಹುದು ಮತ್ತು ಒಂದಿಷ್ಟು ಕಾಲ ಅವಕಾಶ ಕೊಡಬಹುದು ಅಷ್ಟೇ. ಭ್ರಷ್ಟಾಚಾರ ಸಂಪೂರ್ಣ ನಿಲ್ಲಿಸಲು ಆಗುವುದಿಲ್ಲ, ಆದರೆ ಅದನ್ನು ಕಡಿಮೆ ಮಾಡಬಹುದು ಎಂದರು.
ಇದನ್ನೂ ಓದಿ | ಮೈತ್ರಿ ಸರ್ಕಾರದಲ್ಲೂ ಕಮಿಷನ್ ದಂಧೆ ನಡೆದಿತ್ತು; ಮಾಜಿ ಸಿಎಂ ಎಚ್‌ಡಿಕೆ