Site icon Vistara News

Karnataka Live News : ರಾಜ್ಯದಲ್ಲಿನ ಪ್ರಮುಖ ಬೆಳವಣಿಗೆಗಳ ಲೇಟೆಸ್ಟ್ ಮಾಹಿತಿ; ಕಿಲ್ಲರ್‌ ಬಿಎಂಟಿಸಿಗೆ ಇಬ್ಬರು ಬಲಿ

karnataka live news karnataka today news live vistara news 29 oct
Deepa S

ಅತಿಥಿ ಶಿಕ್ಷಕನ ಪ್ರಾಣ ತೆಗೆದ ಲಾರಿ

ಬೈಕ್‌ಗೆ ಲಾರಿ ಡಿಕ್ಕಿ ಹೊಡೆದ (Road Accident) ಪರಿಣಾಮ ಅತಿಥಿ ಶಿಕ್ಷಕರೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ವಿಜಯನಗರದ ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಲಕನಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಚಿರಂಜೀವಿ ಮಾಳಗಿ (28) ಮೃತ ದುರ್ದೈವಿ.

https://vistaranews.com/karnataka/vijayanagar/road-accident-lorry-collides-with-bike-death-of-guest-teacher/493234.html

Deepa S

ಪೊಲೀಸ್‌ ಮನೆಯಲ್ಲಿ ಕದಿಯುವಾಗಲೇ ಸಿಕ್ಕಿಬಿದ್ದ ಕಳ್ಳರು!

ಮನೆಯೊಂದರಲ್ಲಿ ಯಾರೂ ಇಲ್ಲದನ್ನು ತಿಳಿದ ಕಳ್ಳರು (Theft case) ಬಾಗಿಲಿನ ಬೀಗ ಮುರಿದು ಕೈ ಚಳಕ ತೋರಲು ಹೋಗಿ ಸಿಕ್ಕಿ ಬಿದ್ದಿದ್ದಾರೆ. ಹಾಡಹಗಲೇ ಪೊಲೀಸರ ಮನೆಗೆ ನುಗ್ಗಿ ಚಿನ್ನಾಭರಣವನ್ನೆಲ್ಲ ದೋಚುವಾಗಲೇ ಖತರ್ನಾಕ್‌ ಖದೀಮರು ಪೊಲೀಸರಿಗೆ ಲಾಕ್‌ ಹಾಕಿದ್ದಾರೆ. ತುಮಕೂರು ಜಿಲ್ಲೆ (Tumkur News) ಶಿರಾ ನಗರದ ವಿದ್ಯಾನಗರದಲ್ಲಿ ಘಟನೆ ನಡೆದಿದೆ.

https://vistaranews.com/karnataka/tumakuru/theft-case-thieves-caught-robbing-police-house/493179.html

Deepa S

ಬೈಕ್ ರಿಪೇರಿ ಹಣ ಕೊಡದೆ ಸತಾಯಿಸಿದ್ದಕ್ಕೆ ದೊಣ್ಣೆಯಿಂದ ಹೊಡೆದು ವ್ಯಕ್ತಿ ಕೊಲೆ

ಬೈಕ್ ರಿಪೇರಿ ಮಾಡಿಸಿಕೊಂಡು ಹಣ ಕೊಡದೆ ಸತಾಯಿಸಿದ್ದಲ್ಲದೇ ಧಮ್ಕಿ ಹಾಕಿದ್ದಕ್ಕೆ ಸಿಟ್ಟಿಗೆದ್ದ ನಾಲ್ವರು ವ್ಯಕ್ತಿಯನ್ನು ದೊಣ್ಣೆಯಿಂದ ಹೊಡೆದು (Murder case) ಕೊಂದಿದ್ದಾರೆ. ಗೌರಿಬಿದನೂರು ತಾಲೂಕಿನ ಚನ್ನಬೈರನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

Murder Case : ಬೈಕ್ ರಿಪೇರಿ ಹಣ ಕೊಡದೆ ಸತಾಯಿಸಿದ್ದಕ್ಕೆ ದೊಣ್ಣೆಯಿಂದ ಹೊಡೆದು ವ್ಯಕ್ತಿ ಕೊಲೆ
Deepa S

ಬೈಕ್‌ಗಳ ನಡುವೆ ಡಿಕ್ಕಿ; ಬಿಎಸ್‌ಎಫ್‌ ಉದ್ಯೋಗಿ, ಯೂಟ್ಯೂಬರ್‌ ಸಾವು!

ಎರಡು ಬೈಕ್‌ಗಳ ನಡುವೆ ಡಿಕ್ಕಿಯಾಗಿದ್ದು ಇಬ್ಬರು ಸವಾರರು ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರಿನ ಯಲಹಂಕದಲ್ಲಿ (Road Accident) ನಡೆದಿದೆ.

https://vistaranews.com/karnataka/bengaluru/road-accident-collision-between-bikes-bsf-employee-and-youtuber-dead/493065.html

Deepa S

ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಬಿಎಂಟಿಸಿ ಬಸ್‌!

ಪ್ರತ್ಯೇಕ ಕಡೆಗಳಲ್ಲಿ ಬಿಎಂಟಿಸಿ ಬಸ್‌ಗೆ ಇಬ್ಬರು ಬಲಿಯಾಗಿದ್ದಾರೆ. ರಸ್ತೆ ದಾಟುವಾಗ ಮಹಿಳೆ ಮೇಲೆ ಬಸ್‌ ಹರಿದಿದೆ. ಮತ್ತೊಂದು ಕಡೆ ಬೈಕ್‌ಗೆ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿದ್ದಾರೆ.

Killer BMTC : ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಬಿಎಂಟಿಸಿ ಬಸ್‌!
Exit mobile version