Site icon Vistara News

Karnataka Live News : ಚಿತ್ರಕಲಾ ಪರಿಷತ್ತಿಗೆ 50 ಲಕ್ಷ ರೂ. ಅನುದಾನ ಘೋಷಿಸಿದ ಸಿಎಂ ಸಿದ್ದರಾಮಯ್ಯ

karnataka today news live vistara news 07 jan
Adarsha Anche

Ram Mandir: ರಾಮಮಂದಿರ ಲೋಕಾರ್ಪಣೆ ದಿನ ಮುಜರಾಯಿ ದೇಗುಲಗಳಲ್ಲಿ ವಿಶೇಷ ಪೂಜೆ; ಸರ್ಕಾರದ ಅಧಿಕೃತ ಆದೇಶ

ರಾಜ್ಯದ ಮುಜರಾಯಿ ಇಲಾಖೆ ಅಡಿ ಬರುವ ಎಲ್ಲ ದೇವಸ್ಥಾನಗಳಲ್ಲೂ ವಿಶೇಷ ಪೂಜೆ ನಡೆಯಬೇಕು. ಜ. 22ರ ಮಧ್ಯಾಹ್ನ ಹನ್ನೆರಡು ಗಂಟೆ 29 ನಿಮಿಷ 8 ಸೆಕೆಂಡ್‌ನಿಂದ 12 ಗಂಟೆ 30 ನಿಮಿಷ 32 ಸೆಕೆಂಡ್ ಸಮಯದಲ್ಲಿ ಪೂಜೆ ಸಲ್ಲಿಸಲು ಸೂಚನೆ ನೀಡಲಾಗಿದೆ.

Ram Mandir: ರಾಮಮಂದಿರ ಲೋಕಾರ್ಪಣೆ ದಿನ ಮುಜರಾಯಿ ದೇಗುಲಗಳಲ್ಲಿ ವಿಶೇಷ ಪೂಜೆ; ಸರ್ಕಾರದ ಅಧಿಕೃತ ಆದೇಶ

Deepa S

Karnataka weather : ರಾಜ್ಯದಲ್ಲಿ ಮಳೆಗೆ ಚಳಿಯೂ ಸಾಥ್‌; ಜ.14ರವರೆಗೆ ಈ ಜಿಲ್ಲೆಗೆ ಅಲರ್ಟ್‌

ರಾಜ್ಯದಲ್ಲಿ ಜನವರಿ 8 ರಿಂದ 14ರವರೆಗೆ ಮಳೆಯಾಗುವ (Rain News) ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದ್ದರೆ, ಕರಾವಳಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರದಿಂದ ಕೂಡಿದ (Karnataka weather Forecast) ಮಳೆಯಾಗಲಿದೆ.

Karnataka weather : ರಾಜ್ಯದಲ್ಲಿ ಮಳೆಗೆ ಚಳಿಯೂ ಸಾಥ್‌; ಜ.14ರವರೆಗೆ ಈ ಜಿಲ್ಲೆಗೆ ಅಲರ್ಟ್‌
Deepa S

Moral Policing: ಬೆಳಗಾವಿಯಲ್ಲಿ ನೈತಿಕ ಪೊಲೀಸ್‌ಗಿರಿ; ಅಕ್ಕ-ತಮ್ಮ ಅಂದ್ರೂ ಬಿಡದೆ ಹೊಡೆದರು ಯುವಕರು!

ಅವರಿಬ್ಬರೂ ಸಂಬಂಧದಲ್ಲಿ ಅಕ್ಕ -ತಮ್ಮ. ಕೆಲಸದ ನಿಮಿತ್ತ ಬೆಳಗಾವಿ ನಗರಕ್ಕೆ ಬಂದಿದ್ದರು. ಕೆಲಸ ತಡವಾದ ಕಾರಣಕ್ಕೆ ಕೋಟೆ ಕೆರೆಯ ಪಕ್ಕ ಬಂದು ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಯುವಕರ ಗುಂಪೊಂದು ಏಕಾಏಕಿ ದಾಳಿ ಮಾಡಿ, ಮನಬಂದಂತೆ (Moral Policing) ಥಳಿಸಿದ್ದಾರೆ.

Moral Policing: ಬೆಳಗಾವಿಯಲ್ಲಿ ನೈತಿಕ ಪೊಲೀಸ್‌ಗಿರಿ; ಅಕ್ಕ-ತಮ್ಮ ಅಂದ್ರೂ ಬಿಡದೆ ಹೊಡೆದರು ಯುವಕರು!
Adarsha Anche

Ram Janmabhoomi: ರಾಮಮಂದಿರ ಉದ್ಘಾಟನೆಗೆ ಆಹ್ವಾನ ಬಂದಿಲ್ಲ; ಹೃದಯದಲ್ಲೇ ದೇವರಿದ್ದಾನೆಂದ ಡಿಕೆಶಿ

ಧರ್ಮ, ದೇವರ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ. ಆರ್‌ಎಸ್‌ಎಸ್ ಹಾಗೂ ಬಿಜೆಪಿಯವರು ಮಂತ್ರಾಕ್ಷತೆ ನೀಡುತ್ತಿದ್ದಾರೆ. ಅನ್ನಭಾಗ್ಯ ಅಕ್ಕಿಯಲ್ಲೆ ಮಂತ್ರಾಕ್ಷತೆ ಮಾಡಿ ಹಂಚುತ್ತಿದ್ದಾರೆ. ಅದೇ ನಮಗೆ ಸಂತೋಷ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

Ram Janmabhoomi: ರಾಮಮಂದಿರ ಉದ್ಘಾಟನೆಗೆ ಆಹ್ವಾನ ಬಂದಿಲ್ಲ; ಹೃದಯದಲ್ಲೇ ದೇವರಿದ್ದಾನೆಂದ ಡಿಕೆಶಿ
Adarsha Anche

Upper Krishna Project: ಕಲಬುರಗಿ, ರಾಯಚೂರು, ಬಾಗಲಕೋಟೆ, ಯಾದಗಿರಿಯ ಮೆಣಸಿನಕಾಯಿ ಬೆಳೆಗಳಿಗೆ 2.75 ಟಿಎಂಸಿ ನೀರು: ಡಿ.ಕೆ. ಶಿವಕುಮಾರ್

ಶನಿವಾರ ರಾತ್ರಿ ಕಲಬುರಗಿ, ರಾಯಚೂರು, ಬಾಗಲಕೋಟೆ, ಯಾದಗಿರಿ ಭಾಗದ ಜಿಲ್ಲಾ ಮಂತ್ರಿಗಳು, ಎಲ್ಲ ಪಕ್ಷದ ಶಾಸಕರು, ರೈತ ಮುಖಂಡರ ಜತೆ ಸಭೆ ಮಾಡಲಾಯಿತು. ಈ ಸಭೆಯಲ್ಲಿ ಜನಪ್ರತಿನಿಧಿಗಳು ವಾಸ್ತವ ಪರಿಸ್ಥಿತಿ ವಿವರಿಸಿ, ನೀರು ಬಿಡಲು ಒತ್ತಾಯಿಸಿದ್ದರು. ಹೀಗಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

Upper Krishna Project: ಕಲಬುರಗಿ, ರಾಯಚೂರು, ಬಾಗಲಕೋಟೆ, ಯಾದಗಿರಿಯ ಮೆಣಸಿನಕಾಯಿ ಬೆಳೆಗಳಿಗೆ 2.75 ಟಿಎಂಸಿ ನೀರು: ಡಿ.ಕೆ. ಶಿವಕುಮಾರ್

Exit mobile version