ದಿನವಿಡೀ ಮರೆಯಾಗುವ ಸೂರ್ಯ; ಇನ್ನೆರಡು ದಿನ ಚಳಿ ಜತೆ ಮಳೆ
ಶನಿವಾರದಂದು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿರುವ (Rain News) ವರದಿ ಆಗಿದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣ ಹವೆ (Dry weather) ಇತ್ತು. ವಿಜಯಪುರದಲ್ಲಿ ಕಡಿಮೆ ಉಷ್ಣಾಂಶ 15.5 ಡಿ.ಸೆ ದಾಖಲಾಗಿದೆ. ಇನ್ನು ಭಾನುವಾರ (ಡಿ.17) ಬೆಂಗಳೂರು ಸೇರಿ ಹಲವೆಡೆ ಸೂರ್ಯ ಮರೆಯಾಗಿ ಮೋಡ ಕವಿದ ವಾತಾವರಣ (Karnataka weather Forecast) ಇತ್ತು.
Karnataka Weather : ದಿನವಿಡೀ ಮರೆಯಾಗುವ ಸೂರ್ಯ; ಇನ್ನೆರಡು ದಿನ ಚಳಿ ಜತೆ ಮಳೆ
ಭಾವಿ ಯೋಧರಿಗೆ ನೇಮಕ ಹೆಸರಲ್ಲಿ ವಂಚನೆಯ ಬಾವಿ ತೋಡಿದ ಆಸಾಮಿ!
ದೇಶ ಸೇವೆ ಮಾಡಲು ಯೋಧನಾಗಬೇಕೆಂದು ಗುರಿ ಹೊಂದಿರುವ ಯುವಕರನ್ನೇ ಟಾರ್ಗೆಟ್ ಮಾಡಿ ವಂಚಿಸಿರುವ (Fraud Case) ಘಟನೆ ಬೆಂಗಳೂರಲ್ಲಿ ನಡೆದಿದೆ. ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಂಚನೆ ಪ್ರಕರಣವೊಂದು ದಾಖಲಾಗಿದೆ. ಸೇನಾ ಸೆಲೆಕ್ಷನ್ ರ‍್ಯಾಲಿ ವೇಳೆ ಮಿಲಿಟರಿ ಆಫೀಸರ್ ಡ್ರೆಸ್ ಹಾಕಿ ಬಂದಿದ್ದ ಪ್ರಸನ್ ಜಿನ್ ಘೋಷ್ ಎಂಬಾತ ಅಭ್ಯರ್ಥಿಗಳಿಗೆ ವಂಚಿಸಿ ಸುಲಿಗೆ ಮಾಡಿದ್ದಾನೆ. ಈ ಸಂಬಂಧ ಲೆಫ್ಟಿನೆಂಟ್ ಕರ್ನಲ್ ಹೇಮಂತ್ ತಿವಾರಿ ಅವರು ದೂರು ನೀಡಿದ್ದಾರೆ.
Fraud Case : ಭಾವಿ ಯೋಧರಿಗೆ ನೇಮಕ ಹೆಸರಲ್ಲಿ ವಂಚನೆಯ ಬಾವಿ ತೋಡಿದ ಆಸಾಮಿ!
ಕೆಪಿಎಸ್ಸಿ ಪರೀಕ್ಷಾ ಕೇಂದ್ರಕ್ಕೆ ಮಕ್ಕಳೇ ಸೆಕ್ಯುರಿಟಿ ಆಫೀಸರ್ಸ್!
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಡೆಯುವ ಅಕ್ರಮವನ್ನು ತಡೆಗಟ್ಟಲು ಇಲಾಖೆ ಅದೆಷ್ಟೇ ಕಠಿಣ ಕ್ರಮ ತಂದರೂ ಪ್ರಯೋಜನ ಆಗುತ್ತಿಲ್ಲ. ಸದ್ಯ ಕೆಪಿಎಸ್ಸಿ ಪರೀಕ್ಷಾ ಕೇಂದ್ರದಲ್ಲಿ (KPSC exam) ಅಭ್ಯರ್ಥಿಗಳ ತಪಾಸಣೆಗೆ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ.
KPSC exam : ಕೆಪಿಎಸ್ಸಿ ಪರೀಕ್ಷಾ ಕೇಂದ್ರಕ್ಕೆ ಮಕ್ಕಳೇ ಸೆಕ್ಯುರಿಟಿ ಆಫೀಸರ್ಸ್!
School Teacher: ಹೆಣ್ಣು ಮಕ್ಕಳು ಬಟ್ಟೆ ಬದಲಿಸುವಾಗ ವಿಡಿಯೊ; ಯಲವಳ್ಳಿ ವಸತಿ ಶಾಲೇಲಿ ಮತ್ತೊಂದು ಹೀನ ಕೃತ್ಯ
ಯಲವಳ್ಳಿ ಮೊರಾರ್ಜಿ ದೇಸಾಯಿ ಶಾಲೆಗೆ ಜಿಲ್ಲಾ ನ್ಯಾಯಾಧೀಶರಾದ ಸುನೀಲ್ ಹೊಸಮಣಿ ಹಾಗೂ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಮಕ್ಕಳ ಬಳಿಯೂ ಸಮಸ್ಯೆಯನ್ನು ವಿಚಾರಿಸಿದ್ದಾರೆ. ಪ್ರತಿ ಕೊಠಡಿಗೂ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ ನ್ಯಾಯಾಧೀಶರು ಮಕ್ಕಳಿಂದ ದೂರು ಪಡೆದುಕೊಂಡರು.
ಮೊಬೈಲ್ ಟಾರ್ಚ್ ಆನ್ ಮಾಡಿದ್ದೇ ಸಿಲಿಂಡರ್ ಬ್ಲ್ಯಾಸ್‌ಗೆ ಕಾರಣ; ಹಸುಗೂಸು ಸೇರಿ 7 ಮಂದಿ ಗಂಭೀರ
ಅವರೆಲ್ಲೂ ರಾತ್ರಿ ಊಟದ ಕೆಲಸವನ್ನು ಮುಗಿಸಿ, ಇನ್ನೇನು ನಿದ್ದೆಗೆ ಜಾರುವುದರಲ್ಲಿ ಇದ್ದರು. 9 ತಿಂಗಳ ಮಗುವನ್ನು ಆಟವಾಡಿಸಿ ನಿದ್ರೆ ಮಾಡಿಸಿದ್ದರು. ಲೈಟ್ ಆಫ್ ಮಾಡಿ ತಾವು ಮಲಗಬೇಕು ಎಂದಾಗ ಸಿಲಿಂಡರ್ ಗ್ಯಾಸ್ (Cylinder Blast) ವಾಸನೆ ಮೂಗಿಗೆ ಬಡಿದಿತ್ತು. ಏನು ಆಗಿರಬಹುದೆಂದು ಮೊಬೈಲ್ ಟಾರ್ಚ್ ಆನ್ ಮಾಡಿ ನೋಡಲು ಹೋದಾಗ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ.
ಮೊಬೈಲ್ ಟಾರ್ಚ್ ಆನ್ ಮಾಡಿದ್ದೇ ಸಿಲಿಂಡರ್ ಬ್ಲಾಸ್ಟ್‌ಗೆ ಕಾರಣ; ಹಸುಗೂಸು ಸೇರಿ 7 ಮಂದಿ ಗಂಭೀರ