Site icon Vistara News

Karnataka live news: Loan App torture : ಲೋನ್‌ ಆ್ಯಪ್ ಹಿಂಸೆಗೆ ತತ್ತರಿಸಿ ಎಂಜಿನಿಯರಿಂಗ್‌ ವಿದ್ಯಾರ್ಥಿ ಆತ್ಮಹತ್ಯೆ

Karnataka Live News Updates

ಬೆಂಗಳೂರು: ತ್ವರಿತವಾಗಿ ಮತ್ತು ಯಾವುದೇ ದಾಖಲೆ ಇಲ್ಲದೆ ಲೋನ್‌ ಕೊಡುತ್ತೇವೆ ಎಂದು ನಂಬಿಸಿ ಬಳಿಕ ಚಿತ್ರಹಿಂಸೆ ನೀಡುವ ಲೋನ್‌ ಆ್ಯಪ್‌ಗಳು (Loan App torture) ಮತ್ತೊಮ್ಮೆ ಸೌಂಡ್‌ ಮಾಡಿವೆ. ಇವುಗಳಿಂದ ಲೋನ್‌ ಪಡೆದು, ಚಿತ್ರಹಿಂಸೆಯನ್ನು ಸಹಿಸಲಾರದೆ ಒಬ್ಬ ಪ್ರತಿಭಾನ್ವಿತ ವಿದ್ಯಾರ್ಥಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ (Student ends life). ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ ಆರನೇ ಸೆಮಿಸ್ಟರ್ ಎಂಜಿನಿಯರಿಂಗ್‌ (Engineering student) ಓದುತ್ತಿದ್ದ ತೇಜಸ್ ಎಂಬಾತನೇ ಸಾವಿಗೆ ಶರಣಾದ ವಿದ್ಯಾರ್ಥಿ.

Prabhakar R

ರಸ್ತೆ ಬದಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರ ಸಾವು

ಬೆಂಗಳೂರಿನ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿದ್ದರಿಂದ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಚಂದು (21), ಮೋಹನ್ ಕುಮಾರ್ (21) ಮೃತ ಬೈಕ್ ಸವಾರರು. ಸುಂಕದಕಟ್ಟೆಯ ಕಾಲೇಜು ಬಸ್ ಸ್ಟಾಪ್ ಬಳಿ ಬುಧವಾರ ಅಪಘಾತ ನಡೆದಿದೆ.

Bike Accident: ರಸ್ತೆ ಬದಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರ ಸಾವು

Prabhakar R

ಮೊಳಕಾಲ್ಮೂರಿನಲ್ಲಿ ಕಲುಷಿತ ನೀರು ಸೇವಿಸಿ 33 ಮಂದಿ ಅಸ್ವಸ್ಥ

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ಕಲುಷಿತ ನೀರುಸೇವಿಸಿ 33 ಮಂದಿ ಅಸ್ವಸ್ಥವಾಗಿರುವ ಘಟನೆ ಬುಧವಾರ ನಡೆದಿದೆ. ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಓಬಕ್ಕ ಹಾಗೂ ಚಾಮುಂಡಮ್ಮ ಎಂಬುವವರ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

Contaminated Water: ಮೊಳಕಾಲ್ಮೂರಿನಲ್ಲಿ ಕಲುಷಿತ ನೀರು ಸೇವಿಸಿ 33 ಮಂದಿ ಅಸ್ವಸ್ಥ
Prabhakar R

ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಮುಖ್ಯಮಂತ್ರಿ ಚಂದ್ರು ನೇಮಕ

ರಾಜ್ಯದ ಹಿರಿಯ ರಂಗಭೂಮಿ, ಚಲನಚಿತ್ರ ಕಲಾವಿದ ಹಾಗೂ ಮಾಜಿ ಶಾಸಕ ಮುಖ್ಯಮಂತ್ರಿ ಚಂದ್ರು ಅವರನ್ನು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಇವರೊಂದಿಗೆ ರಾಜ್ಯ ಸಂಘಟನಾ ಕಾರ್ಯದರ್ಶಿಗಳನ್ನಾಗಿ ಬಿ.ಟಿ. ನಾಗಣ್ಣ ಹಾಗೂ ಅರ್ಜುನ್ ಪರಪ್ಪ ಹಲಗಿಗೌಡರ್ ಅವರನ್ನು ನೇಮಿಸಲಾಗಿದೆ. ಪಕ್ಷದ ಈ ಹಿಂದಿನ ರಾಜ್ಯಾಧ್ಯಕ್ಷರಾಗಿದ್ದ ಪೃಥ್ವಿ ರೆಡ್ಡಿ ಅವರನ್ನು ರಾಷ್ಟ್ರೀಯ ಜಂಟಿ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

Aam Aadmi Party: ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಮುಖ್ಯಮಂತ್ರಿ ಚಂದ್ರು ನೇಮಕ
Prabhakar R

ಮೈಸೂರು ರಾಜವಂಶಸ್ಥ ಯದುವೀರ್ ಅಜ್ಜಿ ನಿಧನ

ಮೈಸೂರಿನ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಅಜ್ಜಿ ಉಮಾ ಗೋಪಾಲರಾಜ್ ಅರಸ್ (83) ಅವರು ವಯೋಸಹಜ ಕಾಯಿಲೆಯಿಂದ ನಗರದ ಲಕ್ಷ್ಮಿಪುರಂನ ನಿವಾಸದಲ್ಲಿ ಬುಧವಾರ ನಿಧನರಾದರು. ಇವರು ಯದುವೀರ್ ತಂದೆ ಸ್ವರೂಪ್ ಗೋಪಾಲ್​ ರಾಜೇ ಅರಸ್​ ಅವರ ತಾಯಿಯಾಗಿದ್ದಾರೆ. ಗುರುವಾರ ಅಂತ್ಯಸಂಸ್ಕಾರ ನಡೆಯಲಿದೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಮೈಸೂರು ರಾಜವಂಶಸ್ಥ ಯದುವೀರ್ ಅಜ್ಜಿ ನಿಧನ
Prabhakar R

ಫಣೀಂದ್ರ ಸುಬ್ರಹ್ಮಣ್ಯ ಹತ್ಯೆ ಹಿಂದೆ ಹೆಣ್ಣಿಲ್ಲ, ಹಣವಿಲ್ಲ, ಮತ್ಸರ ಮಾತ್ರ!

ಬೆಂಗಳೂರಿನ ಏರೋನಿಕ್ಸ್ ಮೀಡಿಯಾ ಪ್ರೈವೆಟ್‌ ಲಿಮಿಟೆಡ್‌ ಎಂಬ ಫೈಬರ್‌ನೆಟ್‌ ಕಂಪನಿಯ ಆಡಳಿತ ನಿರ್ದೇಶಕ ಫಣೀಂದ್ರ ಸುಬ್ರಹ್ಮಣ್ಯ ಮತ್ತು ಸಿಇಒ ವಿನು ಕುಮಾರ್‌ ಅವರ ಬರ್ಬರ ಕೊಲೆಯ ನಡೆದಿರುವುದು ಹಣಕ್ಕಾಗಿಯೂ ಅಲ್ಲ, ಹೆಣ್ಣಿಗಾಗಿಯೂ ಅಲ್ಲ, ಬರೀ ಮತ್ಸರಕ್ಕಾಗಿ! ಅದಕ್ಕೆ ಬಳಕೆಯಾದದ್ದು ಸೈಕೋ ರೀತಿಯಲ್ಲಿ ವರ್ತಿಸುತ್ತಿರುವ ಒಬ್ಬ ಜೋಕರ್‌ ಆಗಿದ್ದಾನೆ. ಫೆಲಿಕ್ಸ್‌ ಎಂಬಾತ ಒಬ್ಬ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯನಾಗಿರುವ ಸೈಕೋ ಮಾದರಿಯ ಜೋಕರ್‌ ಆಗಿದ್ದಾನೆ ಎನ್ನುವುದು ಕೊಲೆಯಾದ ಕೆಲವೇ ಗಂಟೆಗಳಲ್ಲಿ ಗೊತ್ತಾಗಿತ್ತು.

Bangalore double murder : ಫಣೀಂದ್ರ ಸುಬ್ರಹ್ಮಣ್ಯ ಹತ್ಯೆ ಹಿಂದೆ ಹೆಣ್ಣಿಲ್ಲ, ಹಣವಿಲ್ಲ, ಮತ್ಸರ ಮಾತ್ರ!
Exit mobile version