ಬೆಂಗಳೂರು: ತ್ವರಿತವಾಗಿ ಮತ್ತು ಯಾವುದೇ ದಾಖಲೆ ಇಲ್ಲದೆ ಲೋನ್ ಕೊಡುತ್ತೇವೆ ಎಂದು ನಂಬಿಸಿ ಬಳಿಕ ಚಿತ್ರಹಿಂಸೆ ನೀಡುವ ಲೋನ್ ಆ್ಯಪ್‌ಗಳು (Loan App torture) ಮತ್ತೊಮ್ಮೆ ಸೌಂಡ್ ಮಾಡಿವೆ. ಇವುಗಳಿಂದ ಲೋನ್ ಪಡೆದು, ಚಿತ್ರಹಿಂಸೆಯನ್ನು ಸಹಿಸಲಾರದೆ ಒಬ್ಬ ಪ್ರತಿಭಾನ್ವಿತ ವಿದ್ಯಾರ್ಥಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ (Student ends life). ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ ಆರನೇ ಸೆಮಿಸ್ಟರ್ ಎಂಜಿನಿಯರಿಂಗ್ (Engineering student) ಓದುತ್ತಿದ್ದ ತೇಜಸ್ ಎಂಬಾತನೇ ಸಾವಿಗೆ ಶರಣಾದ ವಿದ್ಯಾರ್ಥಿ.
Weather Report : ಇಂದಿನಿಂದ ಕರಾವಳಿಯಲ್ಲಿ ಭೋರ್ಗರೆಯುವ ಮಳೆ; ಒಳನಾಡಲ್ಲಿ 50:50!
ಇಂದಿನಿಂದ ಕರಾವಳಿ ಭಾಗದಲ್ಲಿ ಮತ್ತೆ ಭಾರಿ ಮಳೆಯಾಗುವ ಮುನ್ಸೂಚನೆಯನ್ನು (Weather Report) ರಾಜ್ಯ ಹವಾಮಾನ ಇಲಾಖೆ ನೀಡಿದೆ. ಆದರೆ, ಒಳನಾಡು ಜಿಲ್ಲೆಗಳಲ್ಲಿ ಮಿಶ್ರ ವಾತಾವರಣ ಇರಲಿದೆ. ಅಂದರೆ ಕೆಲವು ಜಿಲ್ಲೆಗಳಲ್ಲಿ ಭಾರಿಯಿಂದ ಸಾಧಾರಣ ಮಳೆಯಾದರೆ ಮತ್ತೆ ಕೆಲವು ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ.
Weather Report : ಇಂದಿನಿಂದ ಕರಾವಳಿಯಲ್ಲಿ ಭೋರ್ಗರೆಯುವ ಮಳೆ; ಒಳನಾಡಲ್ಲಿ 50:50!
assembly session 2023: ಟ್ರೋಲ್‌ಗೆ ಡೋಂಟ್ ಕೇರ್ ಈಶ್ವರ್: ಧೈರ್ಯದಿಂದ ಮಾತಾಡೋ ಮಹಾಶೂರ ಎಂದ ಯು.ಟಿ. ಖಾದರ್
ಸದನದಲ್ಲಾಗಲಿ (Assembly Session) ಎಲ್ಲೇ ಆಗಲಿ ಮಾತನಾಡಿದ್ದನ್ನು ಟ್ರೋಲ್ ಮಾಡುವವರಿಗೆ ತಲೆ ಕೆಡಿಸಿಕೊಳ್ಳದೆ ಧೈರ್ಯವಾಗಿ ಮಾತನಾಡಿದ ಎಂದು ಹೊಸದಾಗಿ ಶಾಸಕರಾಗಿರುವ ಪ್ರದೀಪ್ ಈಶ್ವರ್ ಅವರಿಗೆ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.
Assembly Session: ಟ್ರೋಲ್‌ಗೆ ಡೋಂಟ್ ಕೇರ್ ಈಶ್ವರ್: ಧೈರ್ಯದಿಂದ ಮಾತಾಡೋ ಮಹಾಶೂರ ಎಂದ ಯು.ಟಿ. ಖಾದರ್
ಇಂದು ಕಾಂಗ್ರೆಸ್ ನಾಯಕರ ಮೌನ ಪ್ರತಿಭಟನೆ
ಬೆಂಗಳೂರು: ರಾಹುಲ್ ಗಾಂಧಿಯವರ ಅರ್ಜಿ ತಿರಸ್ಕಾರ ಖಂಡಿಸಿ ಇಂದು ಕಾಂಗ್ರೆಸ್ ನಾಯಕರ ಮೌನ ಪ್ರತಿಭಟನೆ ನಡೆಯಲಿದೆ. ಎಐಸಿಸಿ ಕರೆ ಹಿನ್ನೆಲೆಯಲ್ಲಿ ರಾಜಧಾನಿಯ ಫ್ರೀಡಂ ಪಾರ್ಕ್ ಸೇರಿದಂತೆ ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಧರಣಿ ಆಯೋಜನೆ ಮಾಡಲಾಗಿದ್ದು, ಬೆಳಿಗ್ಗೆ 10ರಿಂದ 5 ಸಂಜೆಯವರಿಗೆ ಮೌನ ಪ್ರತಿಭಟನೆ ನಡೆಯಲಿದೆ.
ಮೂರು ವರ್ಷದ ಬಳಿಕ ಶಿವರಾಜ್ ಕುಮಾರ್ ಭರ್ಜರಿ ಜನ್ಮದಿನ
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 61ನೇ ವರ್ಷದ ಜನ್ಮದಿನ ಆಚರಿಸಲು ಅಭಿಮಾನಿಗಳು ಸಜ್ಜಾಗಿದ್ದು, ಮೂರು ವರ್ಷದ ಬಳಿಕ ಶಿವಣ್ಣ ಜನ್ಮದಿನವನ್ನ ಅಭಿಮಾನಿಗಳು ಹಬ್ಬದಂತೆ ಸೆಲೆಬ್ರೇಟ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಶಿವಣ್ಣ ಅವರ ʼಘೋಸ್ಟ್ʼ ಹಾಗೂ ʼಬಿಗ್ ಡ್ಯಾಡಿʼ ಸಿನಿಮಾಗಳ ಟೀಸರ್‌ಗಳು ಇಂದು ಬಿಡುಗಡೆಯಾಗಲಿವೆ.