Site icon Vistara News

Tata Nexon EV : ನಾಲ್ಕು ದಿನದಲ್ಲಿ 4000 ಕಿ. ಮೀ ಪ್ರಯಾಣ, ಟಾಟಾ ನೆಕ್ಸಾನ್​ ಇವಿ ಕಾರಿನ ದಾಖಲೆ

Tata Nexon EV to set the fastest K2K record for an electric vehicle

#image_title

ಬೆಂಗಳೂರು: ತನ್ನ ಜನಪ್ರಿಯ ಎಲೆಕ್ಟ್ರಿಕ್​ ಕಾರು ನೆಕ್ಸಾನ್​ ಇವಿ (Tata Nexon EV) ದೂರ ಪ್ರಯಾಣಕ್ಕೂ ಸೂಕ್ತ ಎಂಬುದನ್ನು ಸಾಬೀತುಪಡಿಸುವ ಉದ್ದೇಶದಿಂದ ಟಾಟಾ ಮೋಟಾರ್ಸ್​ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ (K2K) ಸವಾರಿಯನ್ನು ಆಯೋಜಿಸಿ ದಾಖಲೆ ಮಾಡಿದೆ. ಈ ಪ್ರಯಾಣದಲ್ಲಿ ನೆಕ್ಸಾನ್​ ಇವಿ ಕಾರು ದಿನಕ್ಕೆ 1000 ಕಿ.ಮೀಯಂತೆ ನಾಲ್ಕು ದಿನದಲ್ಲಿ ಕಾಶ್ಮೀರದಿಂದ- ಕನ್ಯಾಕುಮಾರಿವರೆಗಿನ 4000 ಕಿ. ಮೀ ಪ್ರಯಾಣ ಮಾಡಿದೆ. ಇದು ಎಲೆಕ್ಟ್ರಿಕ್​ ಕಾರೊಂದು ಗರಿಷ್ಠ ವೇಗದಲ್ಲಿ ತಲುಪಿದ ದಾಖಲೆ ಎನಿಸಿಕೊಳ್ಳಲಿದೆ.

ಪ್ರಯಾಣದ ನಡುವೆ ಕಾರಿನ ಚಾರ್ಜಿಂಗ್​ ಪ್ರಕ್ರಿಯೆಗಾಗಿ ನಿಲ್ಲಿಸಲಾಗಿದೆ. ವೇಗದ ಚಾರ್ಜಿಂಗ್​ ಸೌಲಭ್ಯವನ್ನು ಕಲ್ಪಿಸುವ ಮೂಲಕ ಗರಿಷ್ಠ ಗುರಿಯನ್ನು ಸಾಧಿಸಲಾಗಿದೆ. ಈ ಯಾನದ ಮೂಲಕ ಟಾಟಾ ಮೋಟಾರ್ಸ್​ ತನ್ನ ದೇಶದ ಉದ್ದಗಲಕ್ಕೂ ಹರಡಿರುವ ಚಾರ್ಜಿಂಗ್​ ಮೂಲ ಸೌಕರ್ಯವನ್ನೂ ಕಾರು ಪ್ರಿಯರಿಗೆ ಪ್ರಸ್ತುತಪಡಿಸಿತು. ಎಲ್ಲ ಕಡೆಯೂ ಜಾರ್ಜಿಂಗ್​ ಸೌಲಭ್ಯ ಇರುವುದು ಹಾಗೂ ಸುಲಭವಾಗಿ ಚಾರ್ಜ್​ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿತು.

ಟಾಟಾ ಮೋಟಾರ್ಸ್​ನ ನೆಕ್ಸಾನ್​ ಇವಿ ಕಾರಿನ ರೇಂಜ್​ ಕೂಡ ಹೆಚ್ಚಿಸಲಾಗಿದೆ. ಒಂದು ಬಾರಿಯ ಪೂರ್ಣ ಚಾರ್ಜ್​ಗೆ ಈಗ 453 ಕಿಲೋ ಮೀಟರ್ ಪ್ರಯಾಣ ಸಾಧ್ಯವಿದೆ. ಹೀಗಾಗಿ ನಾಲ್ಕು ದಿನದಲ್ಲಿ ನೆಕ್ಸಾನ್​ ಇವಿ K2K ಪ್ರಯಾಣ ಮುಗಿಸಿತು. ನೆಕ್ಸಾನ್​ ಇವಿ ಕಾರು ಗಿರಿ, ಕಂದರಗಳ ನಡುವಿನ ರಸ್ತೆಯಲ್ಲಿ ಸಾಗಿದ ಜತೆಗೆ ಅತಿವೇಗದ ಎಕ್ಸ್​​ಪ್ರೆಸ್​ ಹೈವೆನಲ್ಲಿಯೂ ಪ್ರಯಾಣ ಮಾಡಿತು.

ಇದನ್ನೂ ಓದಿ : Tata Nexon EV | ಟಾಟಾದ ನೆಕ್ಸಾನ್​ ಇವಿಯ ಆರಂಭಿಕ ಬೆಲೆ ಇನ್ನಷ್ಟು ಅಗ್ಗ; ಕಿಲೋ ಮೀಟರ್ ರೇಂಜ್​ ಕೂಡ ಏರಿಕೆ

ಈ ಸಾಧನೆ ಕುರಿತು ಪ್ರತಿಕ್ರಿಯಿಸಿದ ಟಾಟಾ ಮೋಟಾರ್ಸ್​ನ ಮಾರಾಟ ವಿಭಾಗದ ಮುಖ್ಯಸ್ಥರಾದ ವಿವೇಕ್ ಶ್ರೀವತ್ಸ, ಹೊಸ ತಾಂತ್ರಿಕತೆಯು ಎಷ್ಟು ಸಾಮರ್ಥ್ಯ ಹೊಂದಿದೆ ಎಂಬುದನ್ನು ಪ್ರಸ್ತುತ ಪಡಿಸುವುದು ಅನಿವಾರ್ಯ. ಈ ಪ್ರಯಾಣದ ಮೂಲಕ ಈಗಾಗಲೇ ನೆಕ್ಸಾನ್​ ಇವಿ ಕಾರನ್ನು ಹೊಂದಿರುವ ಮಾಲೀಕರಿಗೆ, ಕಾರಿನ ನಿಜವಾದ ಸಾಮರ್ಥ್ಯಕ್ಕೆ ಸಾಕ್ಷಿ ಒದಗಿಸಿದಂತಾಗುತ್ತದೆ. ಅದೇ ರೀತಿ ಟಾಟಾ ಮೋಟಾರ್ಸ್ನ ಚಾರ್ಜಿಂಗ್​ ವ್ಯವಸ್ಥೆಯ ಬಗ್ಗೆ ತಿಳಿಸಿದಂತಾಗುತ್ತದೆ ಎಂದು ಹೇಳಿದರು.

Exit mobile version