Site icon Vistara News

Vistara Top 10 News : ಗೃಹಜ್ಯೋತಿಗೆ ಸಿಕ್ಕಿತು ಚಾಲನೆ, ಮೋದಿ ಕೈಗೆ ಸೇರುತ್ತಾ ನೈಸ್‌ ಹಗರಣ ವರದಿ, ಇತರ ಪ್ರಮುಖ ಸುದ್ದಿ

vistata top 10

1.ಗೃಹಜ್ಯೋತಿಗೆ ಚಾಲನೆ: ನಮ್ಮ ಗ್ಯಾರಂಟಿ ದೇಶಾದ್ಯಂತ ಜಾರಿ ಮಾಡಿ ಎಂದು ಮೋದಿಗೆ ಸಿದ್ದು ಸವಾಲು
ಬಿಜೆಪಿಗೆ ತಾಕತ್ತಿದ್ದರೆ ಐದು ಗ್ಯಾರಂಟಿಗಳನ್ನು (Congress guarantee) ಇಡೀ ದೇಶದ ಎಲ್ಲಾ ರಾಜ್ಯಗಳಲ್ಲಿ ಜಾರಿ ಮಾಡುವ ತೀರ್ಮಾನವನ್ನು ಮಾಡಲಿ ಎಂದು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಗೆ (PM Narendra Modi) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಸವಾಲು ಹಾಕಿದರು. ಅವರು ಶನಿವಾರ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಯಾದ ಗೃಹಜ್ಯೋತಿ (Gruha Jyothi) ಯೋಜನೆಗೆ ಕಲಬುರಗಿಯಲ್ಲಿ ಚಾಲನೆ ನೀಡಿ ಮಾತನಾಡಿದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ವರದಿ: ಈ ತಿಂಗಳು ಫ್ರೀ ವಿದ್ಯುತ್‌ ಪಡೆದ 1.42 ಕೋಟಿ ಜನರಲ್ಲಿ ನೀವಿದ್ದಿರಾ?

2. ನಿಲ್ಲದ ಎಚ್‌ಡಿಕೆ ದಾಳಿ; ನಾಯಕರ ಹೆಸರು ಹೇಳಿ ಹೇಳಿ ಅಟ್ಯಾಕ್‌; ಮೋದಿ ಕೈಗೆ ಕೊಡ್ತಾರಾ ನೈಸ್‌ ದಾಖಲೆ?
ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ (HD Kumaraswamy) ಅವರು ಯುರೋಪ್‌ ಪ್ರವಾಸ ಮುಗಿಸಿ ಬಂದ ಮೇಲೆ ಸಿಕ್ಕಾಪಟ್ಟೆ ಆಕ್ಟಿವ್‌ ಆಗಿದ್ದಾರೆ. ಶುಕ್ರವಾರ ವಿದೇಶದಿಂದ ಬಂದು ನೀಡಿದ ಹೇಳಿಕೆಗಳಿಗೆ ಪ್ರತಿಯಾಗಿ ಬಂದ ಕೌಂಟರ್‌ಗಳಿಗೆ ಕೌಂಟರ್‌ ಕೊಡಲೆಂದೇ ಶನಿವಾರ ಪತ್ರಿಕಾಗೋಷ್ಠಿ ಕರೆದಿದ್ದ ಕುಮಾರಸ್ವಾಮಿ ಅವರು, ಪ್ರತಿಯೊಬ್ಬರ ಹೆಸರು ಹೇಳಿ ಹೇಳೀ ಉತ್ತರ ಕೊಟ್ಟರು. ಜೊತೆಗೆ ನೈಸ್‌ ಹಗರಣದ ದಾಖಲೆಯನ್ನು ಮೋದಿ ಕೈಗೆ ಕೊಡುವ ಸಂಕೇತ ನೀಡಿದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ವರದಿ: ಎಲ್ಲರನ್ನೂ Brother ಅನ್ನುವ HDKಗೆ ಡಿಕೆಶಿಯಂಥ ತಮ್ಮ ಯಾವ ಜನ್ಮದಲ್ಲೂ ಬೇಡವಂತೆ!

3. ವಿಸ್ತಾರ ಅಂಕಣ: ಮುಸ್ಲಿಂ ಮಹಿಳೆಯರ ಜತೆ ರಕ್ಷಾ ಬಂಧನ ಹಾಗೂ ಸಂವಿಧಾನದ ಆಶಯ
ಈಗ ಮುಸ್ಲಿಂ ಮಹಿಳೆಯರಲ್ಲಿ (Muslim Women) ಬದಲಾವಣೆಯ ಗಾಳಿ ಬೀಸುತ್ತಿದೆ. ಇಲ್ಲಿವರೆಗಿನ ತಮ್ಮ ಧೋರಣೆಗಳ ಕುರಿತು ಆಲೋಚಿಸುವ ಸರದಿ ಆ ಸಮುದಾಯದ ಮುಖಂಡರು, ಅಂದರೆ ಪುರುಷರದ್ದು. ಮುಸ್ಲಿಂ ಮಹಿಳೆಯರ ಜತೆ ರಕ್ಷಾ ಬಂಧನ ಆಚರಿಸಿಕೊಳ್ಳಿ ಎಂಬ ಮೋದಿ ಮಾತಿನ ಹಿಂದಿನ ವಿಚಾರಗಳನ್ನು ವಿಶ್ಲೇಷಿಸಿದ್ದಾರೆ ವಿಸ್ತಾರ ನ್ಯೂಸ್‌ನ ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ ಅವರು ತಮ್ಮ ವಿಸ್ತಾರ ಅಂಕಣದಲ್ಲಿ. ಪೂರ್ಣ ಲೇಖನಕ್ಕೆ ಈ ಲಿಂಕ್‌ ಕ್ಲಿಕ್‌ ಮಾಡಿ

ಇತರ ಪ್ರಮುಖ ಸುದ್ದಿಗಳು

4. ಐದು ವರ್ಷ ಶಾಸಕರಾಗಿ ಇರ್ತೀವೋ ಇಲ್ವೋ: ಕಾಂಗ್ರೆಸ್‌ ಸರ್ಕಾರದ ಆಯುಸ್ಸಿನ ಬಗ್ಗೆ ಶಾಸಕರಿಗೇ ಆತಂಕ

5. Chandrayaan- 3 : ಇಲ್ಲಿದೆ ಸಂತಸದ ಸುದ್ದಿ; ಚಂದ್ರನ ಕಕ್ಷೆ ಪ್ರವೇಶಿಸಿದ ಚಂದ್ರಯಾನದ ನೌಕೆ

6.Imran Khan: ಭ್ರಷ್ಟಾಚಾರ; ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ 3 ವರ್ಷ ಜೈಲು, ಬಂಧನ

7. ಕಾಶ್ಮೀರದಲ್ಲಿ ಎನ್‌ಕೌಂಟರ್ ವೇಳೆ ಮೂವರು ಯೋಧರು ಹುತಾತ್ಮ;‌ ಉಗ್ರರಿಗಾಗಿ ತೀವ್ರ ಶೋಧ

8.Gyanvapi Survey: ಜ್ಞಾನವಾಪಿ ಮಸೀದಿ ಸಮೀಕ್ಷೆ; ತ್ರಿಶೂಲ ಜತೆಗೆ ದೇಗುಲದ ಅಸ್ತಿತ್ವಕ್ಕೆ ಸಿಕ್ಕ ಕುರುಹುಗಳು ಏನೇನು?

9. Modi Yogi Sisters: ಪಿಎಂ ಮೋದಿ, ಸಿಎಂ ಯೋಗಿ ಸಹೋದರಿಯರ ಭೇಟಿ; ಇವರೆಷ್ಟು ಸಿಂಪಲ್‌ ನೋಡಿ

10. Rashmika Mandanna: ಶಾರುಖ್ ಖಾನ್ ಜತೆ ತೆರೆ ಹಂಚಿಕೊಳ್ತಿದ್ದಾರೆ `ನ್ಯಾಶನಲ್‌ ಕ್ರಶ್‌’ ರಶ್ಮಿಕಾ ಮಂದಣ್ಣ!

Exit mobile version