ಯಾರು ಈ ಛೋಟಾ ರಾಜನ್?
1. ಮುಂಬೈನಲ್ಲಿ ಜನನ
ಮುಂಬೈನ ಚೆಂಬೂರ್ನಲ್ಲಿದ್ದ ದಲಿತ ಕುಟುಂಬದಲ್ಲಿ ರಾಜೇಂದ್ರ ಸದಾಶಿವ ನಿಕಾಲ್ಜೆ ಅಲಿಯಾಸ್ ಛೋಟಾ ರಾಜನ್ 1960ರಲ್ಲಿ ಜನನ.
2. ಬ್ಲ್ಯಾಕ್ ಟಿಕೆಟ್ ಮಾರಾಟ
ತೀರಾ ಚಿಕ್ಕ ವಯಸ್ಸಿನಲ್ಲೇ ಬ್ಲ್ಯಾಕ್ ಟಿಕೆಟ್ ಮಾರಾಟ. ಪೊಲೀಸ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ಮಾಡಿ ಜೈಲುಪಾಲು.
3. ಬಡಾ ರಾಜನ್ ಗ್ಯಾಂಗ್
ಮುಂಬೈನ ಭೂಗತ ದೊರೆ ಬಡಾ ರಾಜನ್ ಕಿವಿ ತಲುಪಿದ ಛೋಟಾ ರಾಜನ್ ಕುಖ್ಯಾತಿ! ಬಡಾ ರಾಜನ್ ಗ್ಯಾಂಗ್ ಸೇರ್ಪಡೆ.
4. ಛೋಟಾ ರಾಜನ್ ಆದದ್ಹೇಗೆ?
ಡಾನ್ 'ಬಡಾ ರಾಜನ್' ಗ್ಯಾಂಗ್ ಸೇರಿದ್ದರಿಂದ ರಾಜೇಂದ್ರ ಸದಾಶೀವ ನಿಕಾಲ್ಜೆ 'ಛೋಟಾ ರಾಜನ್' ಆಗಿ ಕುಖ್ಯಾತನಾದ.
5. ಡಾನ್ ಆದ ಛೋಟಾ
1983ರಲ್ಲಿ ಬಡಾ ರಾಜನ್ ಹತ್ಯೆ. ಗ್ಯಾಂಗ್ ಕಂಟ್ರೋಲ್ ತೆಗೆದುಕೊಂಡ ಛೋಟಾ ರಾಜನ್. ತನ್ನ ಮೆಂಟರ್ ಕೊಲೆಗೆ ಪ್ರತೀಕಾರ ಪ್ರತಿಜ್ಞೆ.
6. ಡಾನ್ ದಾವೂದ್ ಗೆಳೆತನ
ಬಡಾ ರಾಜನ್ ಹತ್ಯೆ ಬಳಿಕ ದಾವೂದ್ ಸಖ್ಯ ಬೆಳೆಸಿದ ಛೋಟಾ. ಡಿ ಕಂಪನಿ ಸಿಂಡಿಕೇಟ್ ಕ್ರೈಮ್ಗಳಲ್ಲಿ ರಾಜನ್ ಸಕ್ರಿಯ ಬಾಗಿ.
7. ಬಾಂಬೆ ಬಾಂಬ್ ಬ್ಲಾಸ್ಟ್
1993 ಬಾಂಬೆ ಸರಣಿ ಬಾಂಬ್ ಸ್ಫೋಟ ಬಳಿಕ ದಾವೂದ್ ಮತ್ತು ಛೋಟಾ ಮಧ್ಯೆ ಬಿರುಕು. ಸ್ಫೋಟದ ಹಿಂದೆ ದಾವೂದ್ ಶಂಕೆ.
8. ರಾಜನ್ ಹತ್ಯೆ ಯತ್ನ
ಬ್ಯಾಂಕಾಕ್ನಲ್ಲಿ 2000ರಲ್ಲಿ ಛೋಟಾ ರಾಜನ್ ಹತ್ಯೆಗೆ ದಾವೂದ್ ಯತ್ನ. ಸ್ವಲ್ಪದರಲ್ಲೇ ಹತ್ಯೆಯಿಂದ ಪಾರಾದ ರಾಜನ್.
9.ಬಾಲಿಯಲ್ಲಿ ಅರೆಸ್ಟ್
2015ರ ಅಕ್ಟೋಬರ್ 20ರಂದು ಇಂಡೋನೇಷ್ಯಾದ ಬಾಲಿ ಅಂತಾರಾಷ್ಟ್ರೀಯ ಏರ್ಪೋರ್ಟ್ನಲ್ಲಿ ಛೋಟಾ ರಾಜನ್ ಅರೆಸ್ಟ್.
10. ಜೀವಾವಧಿ ಶಿಕ್ಷೆ
ಜರ್ನಲಿಸ್ಟ್ ಜೆ ಡೇ ಕೊಲೆ ಪ್ರಕರಣದಲ್ಲಿ ಛೋಟಾ ರಾಜನ್ ಅಪರಾಧ ಸಾಬೀತು. 2018ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್.
71 ಪ್ರಕರಣ
ಕೊಲೆ, ಸುಲಿಗೆ, ಕೊಲೆ ಯತ್ನ ಸೇರಿದಂತೆ ಅನೇಕ ಅಪರಾಧಗಳನ್ನು ಹೊಂದಿರುವ ಒಟ್ಟು 71 ಪ್ರಕರಣಗಳನ್ನು ರಾಜನ್ ಎದುರಿಸುತ್ತಿದ್ದಾನೆ.
For Articles
For Web stories