Edited By: Pragati Bhandari

Edited By: Pragati Bhandari

ವಾತಾವರಣದಲ್ಲಿ ತೇವ ಹೆಚ್ಚುತ್ತಿದ್ದಂತೆ ಆಹಾರ ಕೆಡುವುದೂ ಬೇಗ. ಜಾಗ್ರತೆಯಿರಲಿ!

ಆದಷ್ಟೂ ತಾಜಾ ಆಹಾರವನ್ನೇ ಸೇವಿಸಿ.  ಉಳಿಕೆ ಆಹಾರಗಳನ್ನು ಬಳಸುವಾಗ ಹಬೆ ಹಾಯುವಷ್ಟು ಬಿಸಿ ಮಾಡಿ

ಮಳೆಯಲ್ಲಿ ರಸ್ತೆ ಬದಿ ತಿನಿಸುಗಳ ಆಸೆಯಾದರೂ ಸಂಯಮ ಇರಲಿ!  ಇಂಥ ಆಹಾರಗಳೂ ರೋಗಾಣುಗಳ ಮೂಲ

ಮಳೆ-ಚಳಿ ಎಂದು ನೀರು ಕುಡಿಯದೇ ಇರಬೇಡಿ. ಕಾಯಿಸಿದ ನೀರನ್ನು ಯಥೇಚ್ಛವಾಗಿ ಕುಡಿಯಿರಿ

ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳಿ. ಹೊರಗಿನಿಂದ ಬಂದಾಕ್ಷಣ ಕೈಕಾಲುಗಳನ್ನು ಸೋಪಿನಿಂದ ಶುಚಿ ಮಾಡಿ

ಮೊಸರು, ಮಜ್ಜಿಗೆಯಂಥ ಪ್ರೊಬಯಾಟಿಕ್‌ ಬಳಕೆಯನ್ನು ನಿಲ್ಲಿಸಬೇಡಿ. ಅವು ಜೀರ್ಣಾಂಗಗಳನ್ನು ಸುಸ್ಥಿತಿಯಲ್ಲಿ ಇರಿಸುತ್ತವೆ

ಮಳೆ-ಚಳಿಯ ನೆವಕ್ಕೆ ಅತಿಯಾದ ಮಸಾಲೆ ಮತ್ತು ಕರಿದ ತಿನಿಸುಗಳು ಬೇಡ. ಆಹಾರ ಪೌಷ್ಟಿಕವಾಗಿರಲಿ

ಬೆಳ್ಳುಳ್ಳಿ, ಈರುಳ್ಳಿ,  ಶುಂಠಿ, ಅರಿಶಿನ, ತುಳಸಿ, ಕಹಿಬೇವು ಮುಂತಾದವು ಸ್ವಾಸ್ಥ್ಯವರ್ಧಕಗಳು. ಇವುಗಳನ್ನು ಆಗಾಗ ಬಳಸಿ.