Edited By: Pragati Bhandari

ವೈಯಕ್ತಿಕ ಶುಚಿತ್ವವನ್ನು ಕಾಪಾಡಿಕೊಳ್ಳಿ. ಕೈಗಳಿಂದಲೇ ಹೆಚ್ಚಿನ ಸಮಸ್ಯೆಗಳು ಅಂಟುವುದು

ಸೂಕ್ತ ಆಹಾರ ಮತ್ತು ವ್ಯಾಯಾಮಗಳಿಂದ ಶರೀರದ ರೋಗನಿರೋಧಕ ಶಕ್ತಿಯನ್ನು ಸಕ್ರಿಯವಾಗಿಡಿ

ಒತ್ತಡವನ್ನು ಕಡಿಮೆ ಮಾಡಿ. ದೇಹದಲ್ಲಿ ಕಾರ್ಟಿಸೋಲ್‌ ಮಟ್ಟ ಹೆಚ್ಚಿದರೆ ಆಗುವ ಸಮಸ್ಯೆಗಳು ಓಂದೆರಡೇ ಅಲ್ಲ

ಅಲರ್ಜಿ ಬಡಿದೆಬ್ಬಿಸುವ ಕಾರಣಗಳತ್ತ ಗಮನ ಕೊಡಿ. ಪರಾಗ, ಧೂಳು, ಆಹಾರ ಮುಂತಾದ ಹಲವು ಕಾರಣಗಳಿರಬಹುದು

ನಿಮ್ಮ ಪರಿಸರವನ್ನು ಸ್ವಚ್ಛವಾಗಿಡಿ- ಇದು ಮನೆಯ ಧೂಳಿನಿಂದ ಹಿಡಿದು ಗಲೀಜು ಮೊಬೈಲ್‌ ಕವರ್‌ವರೆಗೂ ಬಂತು

ಅನಾರೋಗ್ಯದಲ್ಲಿರುವವರ ಸಂಪರ್ಕಕ್ಕೆ ಬರಬೇಡಿ.  ಇದರಿಂದ ಸೋಂಕು  ಅಂಟಿ ಅಲರ್ಜಿ ಹೆಚ್ಚುವ ಸಾಧ್ಯತೆ ಇಲ್ಲದಿಲ್ಲ

ಫ್ಲೂದಂಥ ಋತುಮಾನದ ಕಾಯಿಲೆಗಳಿಗೆ ಲಸಿಕೆಯಿದೆ, ತೆಗೆದುಕೊಳ್ಳಿ

ಇಷ್ಟಾಗಿಯೂ ಅಲರ್ಜಿ ನಿಯಂತ್ರಣ ಕಷ್ಟವಾದರೆ, ಔಷಧ ತೆಗೆದುಕೊಳ್ಳುವ  ಬಗ್ಗೆ ವೈದ್ಯರಲ್ಲಿ ಚರ್ಚಿಸಿ