Edited By: Pragati Bhandari

ಘಂಮ್ಮೆನ್ನುವ ಇದರ ಪರಿಮಳ ಮನಸ್ಸಿಗೆ ಆಹ್ಲಾದ ನೀಡಿ, ಅಡುಗೆಯ ರುಚಿ ಹೆಚ್ಚಿಸಿ, ಪಚನವಾಗುವಂತೆ ಮಾಡುತ್ತದೆ

ಇದರ ಯುಜೆನಾಲ್‌ ಎಂಬ ಅಂಶವು ಅಜೀರ್ಣ, ಹೊಟ್ಟೆಯುಬ್ಬರಗಳನ್ನು ನಿವಾರಿಸಿ, ಜೀರ್ಣಾಂಗದ ಆರೋಗ್ಯ ಸುಧಾರಿಸುತ್ತದೆ

 ಪರಂಪರಾಗತ ಮದ್ದಿನಲ್ಲಿ ಜಾಯಿಕಾಯಿ ಎಣ್ಣೆಯನ್ನು ನೋವು ನಿವಾರಕವಾಗಿ ಲೇಪಿಸಲಾಗುತ್ತದೆ.

ಬೆಚ್ಚಗಿನ ಹಾಲಿಗೆ ಚಿಟಿಕೆ ಜಾಯಿಕಾಯಿ ಪುಡಿ ಹಾಕಿ ಕುಡಿಯುವುದರಿಂದ ಕಣ್ತುಂಬಾ ನಿದ್ರೆ ಬರುತ್ತದೆ

ಇದರಲ್ಲಿರುವ ವಿಶೇಷ ಉತ್ಕರ್ಷಣ ನಿರೋಧಕಗಳು ಮೆದುಳಿನ ಆರೋಗ್ಯ ವೃದ್ಧಿಸಿ, ಬುದ್ಧಿಶಕ್ತಿ ಹೆಚ್ಚಿಸುತ್ತವೆ

ದೇಹದಲ್ಲಿ ಇರಬಹುದಾದ ಉರಿಯೂತ ನಿವಾರಣೆಗೆ ಜಾಯಿಕಾಯಿ ಉತ್ತಮ ಔಷಧಿಯಾಗಬಲ್ಲದು

ಹಲ್ಲುನೋವು, ಬಾಯಿಯ ದುರ್ಗಂಧ, ಒಸಡಿನ ಸಮಸ್ಯೆಗಳಿಗೆ ಜಾಯಿಕಾಯಿ ಉಪಶಮನ ನೀಡುತ್ತದೆ 

ರಕ್ತದೊತ್ತಡ ಕಡಿಮೆ ಮಾಡಿ, ರಕ್ತ ಸಂಚಾರ ಹೆಚ್ಚಿಸಿ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.