Site icon Vistara News

Cabinet decision | ಅಲ್ಪಾವಧಿಯ ಕೃಷಿ ಸಾಲಕ್ಕೆ 1.5% ಬಡ್ಡಿ ರಿಯಾಯಿತಿಗೆ ಸಂಪುಟ ಒಪ್ಪಿಗೆ

farm loan

ನವ ದೆಹಲಿ: ಅಲ್ಪಾವಧಿಯ ಕೃಷಿ ಸಾಲದ ವಿತರಣೆಗೆ ನೆರವಾಗಲು ವಾರ್ಷಿಕ ೧.೫% ಬಡ್ಡಿ ರಿಯಾಯಿತಿಗೆ (Interest subvention) ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ (cabinet decision) ಅನುಮೋದಿಸಿದೆ.

ಸಚಿವ ಸಂಪುಟ ಸಭೆಯ ಬಳಿಕ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಅವರು ವಿವರಗಳನ್ನು ನೀಡಿದರು. ಈ ನೆರವನ್ನು ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕ್‌ಗಳು, ಕಿರು ಹಣಕಾಸು ಸಂಸ್ಥೆಗಳು, ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗಳು, ಸಹಕಾರ ಬ್ಯಾಂಕ್‌ಗಳು, ಕಂಪ್ಯೂಟರೀಕೃತ ಪ್ರಾಥಮಿಕ ಕೃಷಿ ಪತ್ತಿನ ಸೊಸೈಟಿಗಳಿಗೆ ನೀಡಲಾಗುವುದು. ಇದರಿಂದ ಅವುಗಳಿಗೆ ೨೦೨೨-೨೩ರಿಂದ ೨೦೨೪-೨೫ರ ತನಕ ರೈತರಿಗೆ ೩ ಲಕ್ಷ ರೂ. ತನಕ ಅಲ್ಪಾವಧಿಯ ಕೃಷಿ ಸಾಲ ವಿತರಿಸಲು ಹಾದಿ ಸುಗಮವಾಗಲಿದೆ.

ಈ ನೆರವಿನ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ ೨೦೨೨-೨೩ರಿಂದ ೨೦೨೪-೨೫ರ ಅವಧಿಯಲ್ಲಿ ಹೆಚ್ಚುವರಿ ೩೪,೮೫೬ ಕೋಟಿ ರೂ. ಹೊರೆಯಾಗಲಿದೆ. ಕೃಷಿ ವಲಯಕ್ಕೆ ಹಣಕಾಸು ನೆರವಿನ ಹರಿವನ್ನು ಇದು ಖಾತರಿಪಡಿಸಲಿದೆ. ಸರ್ಕಾರ ಆತಿಥ್ಯೋದ್ಯಮ ವಲಯಕ್ಕೆ ಇಸಿಜಿಎಲ್‌ಎಸ್‌ ಅಡಿಯಲ್ಲಿ ಸಾಲ ವಿತರಣೆ ಹೆಚ್ಚಿಸಲು ಮಂಜೂರಾತಿಯಲ್ಲಿ ೫೦,೦೦೦ ಕೋಟಿ ರೂ. ಹೆಚ್ಚಿಸಿದೆ. ಇದರೊಂದಿಗೆ ಮಂಜೂರಾತಿಯ ಒಟ್ಟು ಮೌಲ್ಯ ೪.೫ ಲಕ್ಷ ಕೋಟಿ ರೂ.ಗಳಿಂದ ೫ ಲಕ್ಷ ಕೋಟಿ ರೂ.ಗೆ ವೃದ್ಧಿಸಿದೆ.

Exit mobile version