ಬೆಂಗಳೂರು: ತೋಟಗಾರಿಕಾ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆಗಳ ಮೂಲಕ ರೈತರಿಗೆ ನೆರವಾಗುತ್ತಿರುವ, ಮುಂದಿನ ಪೀಳಿಗೆಯಲ್ಲಿ ಕೃಷಿ ಪ್ರೀತಿಯನ್ನು ಹುಟ್ಟಿಸುತ್ತಿರುವ ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (Indian Institute of Horticultural Research-IIHR) ನಡೆಸುವ ವಾರ್ಷಿಕ ರಾಷ್ಟ್ರೀಯ ತೋಟಗಾರಿಕಾ ಮೇಳ (National Horticulture Fair 2024) ಈ ಬಾರಿ ಮಾರ್ಚ್ 5ರಿಂದ 7ರವರೆಗೆ ಮೂರು ದಿನ ನಡೆಯಲಿದೆ (Horticultrure Fair 2024).
ತೋಟಗಾರಿಕೆಯಲ್ಲಿ ಮುಂದಿನ ಪೀಳಿಗೆಯ ತಂತ್ರಜ್ಞಾನಗಳನ್ನು ಬಳಸಿ ಸಹನೀಯ ಅಭಿವೃದ್ಧಿ ನಡೆಸುವುದು ಎಂಬ ಧ್ಯೇಯವಾಕ್ಯದೊಂದಿಗೆ ಈ ಬಾರಿಯ ತೋಟಗಾರಿಕಾ ಮೇಳ ನಡೆಯಲಿದೆ. ಸ್ಮಾರ್ಟ್ ಕೃಷಿ, ನಿಯಂತ್ರಿತ ವಾತಾವರಣದಲ್ಲಿ ಕೃಷಿ ಮಾಡುವುದು, ವಿಸ್ತಾರ ಭೂಮಿಯ ಬದಲು ಎತ್ತರೆತ್ತರಕ್ಕೆ ಕೃಷಿ ಬೆಳವಣಿಗೆ, ಸಂಪನ್ಮೂಲಗಳ ಗರಿಷ್ಠ ಬಳಕೆ, ಫಸಲು ಹೆಚ್ಚಿಸುವಿಕೆ ಸೇರಿದಂತೆ ಹಲವು ವಿಚಾರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವ ನವೀನ ವಿಧಾನಗಳನ್ನು ಇಲ್ಲಿ ಪರಿಚಯಿಸಲಾಗುತ್ತದೆ.
ಈ ಬಾರಿ ಪರಿಚಯಿಸುವ ಪ್ರಮುಖ ತಂತ್ರಜ್ಞಾನ ಆಧರಿತ ತಳಿಗಳು
- ಅರ್ಕ ನಿಹಿರ: ಇದೊಂದು ಬಗೆಯ ಮೆಣಸಿನ ಕಾಯಿ ಆಗಿದ್ದು, ಒಂದು ಹೆಕ್ಟೇರ್ ಪ್ರದೇಶದಲ್ಲಿ 30 ಟನ್ ಹಸಿರು/7.5 ಟನ್ ಒಣ ಮೆಣಸು ಬೆಳೆ ನೀಡುತ್ತದೆ.
- ಅರ್ಕ ಭೃಂಗರಾಜ್: ಒಂದು ಹೆಕ್ಟೇರ್ ಪ್ರದೇಶದಲ್ಲಿ 6ರಿಂದ 6.5 ಟನ್ ಉತ್ತಮ ಗುಣಮಟ್ಟದ ಭೃಂಗರಾಜವನ್ನು ಬೆಳೆಯಬಹುದು.
- ಅರ್ಕ ಎತ್ತರ ಬೆಳೆಯುವ ಬೆಳೆ: ಹನ್ನೊಂದು ಅಂತಸ್ತುಗಳಲ್ಲಿ ಎತ್ತರೆತ್ತರಕ್ಕೆ ಬೆಳೆಯುವ ತಂತ್ರಜ್ಞಾನ. ಇದು ಶೇಕಡಾ 80ರಷ್ಟು ನೀರಿನ ಉಳಿತಾಯ ಮಾಡುತ್ತದೆ. ಕಡಿಮೆ ಜಾಗದಲ್ಲಿ ಹೆಚ್ಚು ಬೆಳೆ ಬೆಳೆಯಬಹುದು.
- ಅರ್ಕ ಈರುಳ್ಳಿ ಪ್ಲ್ಯಾಂಟರ್: ಒಂದು ಗಂಟೆಯಲ್ಲಿ 0.12 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡುವ ಸಾಮರ್ಥ್ಯ ಹೊಂದಿದೆ. ಇದರಿಂದ ಶೇ. 35ರಷ್ಟು ಶ್ರಮ ಶಕ್ತಿ ಕಡಿಮೆಯಾಗುತ್ತದೆ.
- ವಿಟಮಿನ್ ಡಿ ಸಂವರ್ಧನಾ ತಂತ್ರಜ್ಞಾನ: ಕೃತಕ ಅಣಬೆ ಬೇಸಾಯದಲ್ಲಿ ಎಲ್ಲರಿಗೂ ಅಗತ್ಯವಿರುವ ವಿಟಮಿನ್ ಡಿ ಪೋಷಕಾಂಶವನ್ನು ಹೆಚ್ಚಿಸುವ ತಂತ್ರಜ್ಞಾನ. ಇಲ್ಲಿ ಯುವಿ-ಬಿ ಕಿರಣಗಳ ಮೂಲಕ ಅಣಬೆಯಲ್ಲಿ ವಿಟಮಿನ್ ಡಿ ತುಂಬಲಾಗುತ್ತದೆ.
ಇನ್ನೂ ಏನೇನಿರುತ್ತದೆ?
ಬೀಜ ಮತ್ತು ಬಿತ್ತನೆ ಸಾಮಗ್ರಿಗಳು, ನೀರಾವರಿ ವ್ಯವಸ್ಥೆಗಳು, ಐಐಎಚ್‌ಆರ್ ಒದಗಿಸುವ ಸೇವೆಗಳು, ಹಸಿರು ಮನೆ ನಿರ್ಮಾಣ ಮಾಹಿತಿ ಮತ್ತು ಸಲಕರಣೆಗಳು, ಸಸ್ಯ ಪೋಷಕಾಂಶಗಳು, ಕೀಟನಾಶಕಗಳು, ಆಹಾರ ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ತಂತ್ರಗಳು, ಕೃಷಿ ರಫ್ತು ಸೇವೆಗಳ ಮಾಹಿತಿ, ಹಣಕಾಸು ನೆರವು ಸಿಗುವ ಬಗ್ಗೆ ಸ್ಪಷ್ಟ ಜ್ಞಾನ, ಸಾವಯವ ಕೃಷಿ ಮತ್ತು ಮಾರುಕಟ್ಟೆ ಮಾಹಿತಿ ಸೇರಿ ಹಲವು ವಿಚಾರಗಳು ಇಲ್ಲಿ ತೆರೆದುಕೊಳ್ಳಲಿವೆ.
ಇದನ್ನೂ ಓದಿ : Budget 2024: ಕೃಷಿ, ಹೂಡಿಕೆ, ಉದ್ಯೋಗ ಸೃಷ್ಟಿಗೆ ಇದು ಬೆಸ್ಟ್ ಬಜೆಟ್: ಎಚ್.ಡಿ. ಕುಮಾರಸ್ವಾಮಿ
Get ready for NHF – 2024! Visit https://t.co/HvXXqqsZ55 for more details. #nhf2024 #nhfiihr pic.twitter.com/OHN0yuLGSL
— NHF 2024 | 5-7, March 2024 (@nhfiihr) February 3, 2024
ಪ್ರದರ್ಶನ ಮಳಿಗೆಗಳು ಲಭ್ಯವಿವೆ
ತೋಟಗಾರಿಕಾ ಮೇಳ ನಡೆಯುವ ಸಂದರ್ಭದಲ್ಲಿ ಹಲವಾರು ಪ್ರದರ್ಶನ ಮಳಿಗೆಗಳು ಇರುತ್ತವೆ. ನೀವು ಯಾವುದಾದರೂ ವಿಭಾಗದಲ್ಲಿ ತಜ್ಞರಾಗಿದ್ದು, ರೈತರಿಗೆ ನಿಮ್ಮ ತಂತ್ರಜ್ಞಾನವನ್ನು ತೋರಿಸಬೇಕು ಎಂದು ಬಯಸಿದರೆ ಅದಕ್ಕೆ ಅವಕಾಶವಿದೆ. ಇಲ್ಲಿ ಕಡಿಮೆ ಬೆಲೆಯಲ್ಲಿ ಸ್ಟಾಲ್‌ಗಳು ಲಭ್ಯವಿವೆ. ಸ್ಟಾಲ್‌ಗಳ ಮಾಹಿತಿಯನ್ನು ಪಡೆಯಲು ಲಾಗ್ ಇನ್ ಮಾಡಿ :https://nhf2024.in ಅಥವಾ ರಾಷ್ಟ್ರೀಯ ತೋಟಗಾರಿಕಾ ಮೇಳದ ಹೆಲ್ಪ್‌ಲೈನ್ ನಂಬರ್ 9403891704ನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಲು ಇಲ್ಲಿದೆ ಸಂಪರ್ಕ ಸಂಖ್ಯೆ
ತೋಟಗಾರಿಕಾ ಮೇಳ, ಅಲ್ಲಿನ ಸ್ಟಾಲ್‌ಗಳು ಮತ್ತಿತರ ವಿಚಾರಗಳಿಗೆ ಸಂಬಂಧಿಸಿ ಐಐಎಚ್‌ಆರ್‌ನ ಪ್ರಿನ್ಸಿಪಾಲ್ ಸೈಂಟಿಸ್ಟ್ ಮತ್ತು ತೋಟಗಾರಿಕಾ ಮೇಳದ ಸಂಘಟನಾ ಕಾರ್ಯದರ್ಶಿ ಡಾ. ಎಂ.ವಿ. ಧನಂಜಯ ಅವರನ್ನು ಸಂಪರ್ಕಿಸಬಹುದು. ಅವರ ದೂರವಾಣಿ ಸಂಖ್ಯೆ: 080-28446010, ಮೊಬೈಲ್ ಸಂಖ್ಯೆ: 93790 79274
Email : nhf.iihr@icar.gov.in
Website : https://nhf2024.in/and https://iihr.res.in