Krishi Khajane : ಸಮಗ್ರ ಕೃಷಿ ಸ್ವಾವಲಂಬನೆಗೆ ದಾರಿ! Ramaswamy Hulakodu 1 ವರ್ಷ ago ಕೃಷಿಯಲ್ಲಿ ಯಾವುದೇ ಒಂದೇ ಬೆಳೆ ಬೆಳೆಯುವ ಬದಲಾಗಿ ಎರಡು ಅಥವಾ ಅದಕ್ಕಿಂತಲೂ ಹೆಚ್ಚು ಬಳೆಗಳನ್ನು ಒಂದೇ ಜಾಗದಲ್ಲಿ ಏಕಕಾಲದಲ್ಲಿ ಬೆಳೆಯುವುದರ ಜತೆಗೆ ಕೃಷಿಯ ಉಪ ಕಸುಬುಗಳಾದ ಜೇನು, ಕುರಿ, ಕೋಳಿ ಸಾಕಣೆ, ಹೈನುಗಾರಿಕೆ, ಅರಣ್ಯ ಕೃಷಿ ಮುಂತಾದ ಪದ್ಧತಿಗಳನ್ನು ಅಳವಡಿಸಿಕೊಂಡು ಸುಸ್ಥಿರ ರೀತಿಯಲ್ಲಿ ಕೃಷಿ ಮಾಡುವುದನ್ನು ಸಮಗ್ರ ಕೃಷಿ ಎಂದು ಕರೆಯಲಾಗುತ್ತದೆ. ಸಮಗ್ರ ಕೃಷಿ ಮಾಡಿ ವರ್ಷಕ್ಕೆ 40-50 ಲಕ್ಷ ರೂ. ಲಾಭಗಳಿಸುವ ರೈತರು ನಮ್ಮಲ್ಲಿದ್ದಾರೆ. ಸಮಗ್ರ ಕೃಷಿ ಮಾಡುವುದು ಹೇಗೆ? ಮಾಹಿತಿ ನೀಡುವ ವಿಡಿಯೋ ಇಲ್ಲಿದೆ. ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಈಗಾಗಲೇ ಸಮಗ್ರ ಕೃಷಿ ಮಾಡುತ್ತಿರುವ ಕೋಲಾರ ಜಿಲ್ಲೆ ಕೃಷ್ಣಾಪುರ ಗ್ರಾಮದ ಕೆ.ಎಂ. ರಾಜಣ್ಣ ಅವರಿಂದ ಪಡೆಯಬಹುದು. ಅವರ ಮೊಬೈಲ್ ಸಂಖ್ಯೆ: 94484 48210 ಇದನ್ನೂ ಓದಿ : Krishi Khajane : ಕೃಷಿಯಲ್ಲಿ ಕೋಟಿ ನೋಡಲು ದಾಳಿಂಬೆ ಬೆಳೆಯಿರಿ!