Site icon Vistara News

Krishi Khajane : ಕೃಷಿಯಲ್ಲಿ ಕೋಟಿ ನೋಡಲು ದಾಳಿಂಬೆ ಬೆಳೆಯಿರಿ!

pomegranate cultivation Krishi Khajane
ದಾಳಿಂಬೆ ಭಾರತದಲ್ಲಿ ಬೆಳೆಯುವ ಪ್ರಮುಖ ಹಣ್ಣಿನ ಬೆಳೆಗಳಲ್ಲಿ ಒಂದು. ಔಷಧೀಯ ಗುಣಗಳಿಂದಾಗಿ ಈ ಹಣ್ಣಿಗೆ ಸದಾ ಬೇಡಿಕೆ ಇದ್ದೇ ಇರುತ್ತದೆ. ನಮ್ಮ ದೇಶದ ಮಾರುಕಟ್ಟೆಗೆ ಮಾತ್ರವಲ್ಲದೆ, ವಿದೇಶಗಳಿಗೂ ರಫ್ತು ಮಾಡುವ ರೈತರು ನಮ್ಮ ನಡುವೆ ಇದ್ದಾರೆ. ಲಾಭದಾಯಕ ಈ ಹಣ್ಣಿನ ಕೃಷಿಯನ್ನು ಸರಿಯಾಗಿ ತಿಳಿದುಕೊಂಡು ಮಾಡಬೇಕು. ಇಲ್ಲದಿದ್ದರೆ ನಷ್ಟ ಸಂಭವಿಸುವ ಸಾಧ್ಯತೆಗಳೂ ಇರುತ್ತವೆ. ದಾಳಿಂಬೆ ಬೆಳೆದು, ʻಕೃಷಿಯಲ್ಲಿ ಕೋಟಿ ನೋಡ್ಬೇಕಂದ್ರೆ ದಾಳಿಂಬೆ ಬೆಳೆಯಬೇಕು…ʼ ಎನ್ನುವ ರೈತರೂ ನಮ್ಮನಾಡಿನಲ್ಲಿಯೇ ಇದ್ದಾರೆ. ದಾಳಿಂಬೆ ಬೆಳೆಯುವುದು ಹೇಗೆ? ಮಾಹಿತಿ ನೀಡುವ ವಿಡಿಯೋ ಇಲ್ಲಿದೆ. ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಈಗಾಗಲೇ ದಾಳಿಂಬೆ ಬೆಳೆಯುತ್ತಿರುವ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಕೆಚ್ಚೇನಹಳ್ಳಿ ರೈತ ಕೆ ಎಂ ರವಿ ಅವರಿಂದ ಪಡೆಯಬಹುದು. ಅವರ ಮೊಬೈಲ್‌ ಸಂಖ್ಯೆ: 94821 08486

ಇದನ್ನೂ ಓದಿ : Krishi Khajane : ಸೂರ್ಯಕಾಂತಿ ಬೆಳೆದರೆ ಎಂದೂ ಕೈ ಸುಡದು!

Exit mobile version