Krishi Khajane pomegranate cultivation and Harvesting tips and other details in kannada Krishi Khajane : ಕೃಷಿಯಲ್ಲಿ ಕೋಟಿ ನೋಡಲು ದಾಳಿಂಬೆ ಬೆಳೆಯಿರಿ! Vistara News

ಕೃಷಿ

Krishi Khajane : ಕೃಷಿಯಲ್ಲಿ ಕೋಟಿ ನೋಡಲು ದಾಳಿಂಬೆ ಬೆಳೆಯಿರಿ!

Krishi Khajane : ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹಣ್ಣುಗಳಲ್ಲಿ ದಾಳಿಂಬೆ ಪ್ರಮುಖವಾದದು. ಜತೆಗೆ ವಿಟಮಿನ್‌-ಸಿಯನ್ನು ಅಪಾರ ಪ್ರಮಾಣದಲ್ಲಿ ಒದಗಿಸುತ್ತದೆ. ಹಲವಾರು ರೋಗಗಳಿಗೆ ಔಷಧಿಯಾಗಿ ಬಳಕೆಯಾಗುವ, ನಮ್ಮ ದೇಶದಲ್ಲಿ ಸದಾ ಬೇಡಿಕೆಯಲ್ಲಿರುವ ದಾಳಿಂಬೆಯನ್ನು ಬೆಳೆಯುವುದು ಹೇಗೆ? ಲಾಭ-ನಷ್ಟದ ಲೆಕ್ಕಾಚಾರವೇನು ಎಂಬ ಮಾಹಿತಿ ನೀಡುವ ವಿಡಿಯೋ ಇಲ್ಲಿದೆ.

VISTARANEWS.COM


on

pomegranate cultivation Krishi Khajane
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
ದಾಳಿಂಬೆ ಭಾರತದಲ್ಲಿ ಬೆಳೆಯುವ ಪ್ರಮುಖ ಹಣ್ಣಿನ ಬೆಳೆಗಳಲ್ಲಿ ಒಂದು. ಔಷಧೀಯ ಗುಣಗಳಿಂದಾಗಿ ಈ ಹಣ್ಣಿಗೆ ಸದಾ ಬೇಡಿಕೆ ಇದ್ದೇ ಇರುತ್ತದೆ. ನಮ್ಮ ದೇಶದ ಮಾರುಕಟ್ಟೆಗೆ ಮಾತ್ರವಲ್ಲದೆ, ವಿದೇಶಗಳಿಗೂ ರಫ್ತು ಮಾಡುವ ರೈತರು ನಮ್ಮ ನಡುವೆ ಇದ್ದಾರೆ. ಲಾಭದಾಯಕ ಈ ಹಣ್ಣಿನ ಕೃಷಿಯನ್ನು ಸರಿಯಾಗಿ ತಿಳಿದುಕೊಂಡು ಮಾಡಬೇಕು. ಇಲ್ಲದಿದ್ದರೆ ನಷ್ಟ ಸಂಭವಿಸುವ ಸಾಧ್ಯತೆಗಳೂ ಇರುತ್ತವೆ. ದಾಳಿಂಬೆ ಬೆಳೆದು, ʻಕೃಷಿಯಲ್ಲಿ ಕೋಟಿ ನೋಡ್ಬೇಕಂದ್ರೆ ದಾಳಿಂಬೆ ಬೆಳೆಯಬೇಕು…ʼ ಎನ್ನುವ ರೈತರೂ ನಮ್ಮನಾಡಿನಲ್ಲಿಯೇ ಇದ್ದಾರೆ. ದಾಳಿಂಬೆ ಬೆಳೆಯುವುದು ಹೇಗೆ? ಮಾಹಿತಿ ನೀಡುವ ವಿಡಿಯೋ ಇಲ್ಲಿದೆ. ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಈಗಾಗಲೇ ದಾಳಿಂಬೆ ಬೆಳೆಯುತ್ತಿರುವ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಕೆಚ್ಚೇನಹಳ್ಳಿ ರೈತ ಕೆ ಎಂ ರವಿ ಅವರಿಂದ ಪಡೆಯಬಹುದು. ಅವರ ಮೊಬೈಲ್‌ ಸಂಖ್ಯೆ: 94821 08486

ಇದನ್ನೂ ಓದಿ : Krishi Khajane : ಸೂರ್ಯಕಾಂತಿ ಬೆಳೆದರೆ ಎಂದೂ ಕೈ ಸುಡದು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Belagavi Winter Session: ಸದನದಲ್ಲಿ ಎಲೆ ಚುಕ್ಕಿ ರೋಗ ಸದ್ದು; ಗಂಭೀರವಾಗಿ ಪರಿಗಣಿಸಿದ ಸರ್ಕಾರ

Belagavi Winter Session : ಈ ಎಲೆ ಚುಕ್ಕೆ ರೋಗ ರೈತರಿಗೆ ತೊಂದರೆ ಕೊಡುತ್ತಿದೆ. ಇದರಿಂದ ಸಾಕಷ್ಟು ಹಾನಿಯಾಗಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಇದನ್ನು ತೊಡೆದುಹಾಕಲು ಸಾಕಷ್ಟು ಪ್ರಮಾಣದಲ್ಲಿ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಈ ರೋಗದಿಂದ ತೊಂದರೆಗೆ ಒಳಗಾದ ರೈತರಿಗೆ ಈಗಾಗಲೇ ಸರ್ಕಾರದಿಂದ ಪರಿಹಾರ ಕೊಡಲಾಗಿದೆ ಎಂದು ತಿಳಿಸಿದ್ದಾರೆ.

VISTARANEWS.COM


on

Leaf spot disease in Karnataka
Koo

ಬೆಳಗಾವಿ: ಮಲೆನಾಡು, ಕರಾವಳಿ ಹಾಗೂ ಮಧ್ಯ ಕರ್ನಾಟಕ ಭಾಗದ ಕೆಲವು ಕಡೆ ಅಡಿಕೆ ಬೆಳೆಗೆ ಕಾಡುತ್ತಿರುವ ಎಲೆ ಚುಕ್ಕಿ ರೋಗದ (Leaf spot Disease) ವಿಷಯ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ (Belagavi Winter Session) ಪ್ರಸ್ತಾಪವಾಗಿದೆ. ಎಲೆ ಚುಕ್ಕಿ ರೋಗದ ತೀವ್ರತೆ ಬಗ್ಗೆ ಪರಿಷತ್‌ನಲ್ಲಿ ಪರಿಷತ್ ಸದಸ್ಯ ರುದ್ರೇಗೌಡ (Council member Rudregowda) ಅವರು ಪ್ರಸ್ತಾಪಿಸಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ (Agriculture Minister N Chaluvarayaswamy) ಉತ್ತರಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಕೇಳಿದ ಪರಿಷತ್ ಸದಸ್ಯ ರುದ್ರೇಗೌಡ, ಎಲೆ ಚುಕ್ಕಿ ರೋಗದಿಂದ ರೈತರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಸರ್ಕಾರ ರೋಗ ನಿಯಂತ್ರಣ ಮಾಡಲು ಯಾವ ಕ್ರಮ ಕೈಗೊಂಡಿದೆ? ಎಂದು ಪ್ರಶ್ನೆ ಮಾಡಿದ್ದಾರೆ.

ಸರ್ಕಾರದ ಪರವಾಗಿ ಕೃಷಿ ಸಚಿವ ಚಲುವರಾಯಸ್ವಾಮಿ ಉತ್ತರ ನೀಡಿದ್ದು, ಈ ಎಲೆ ಚುಕ್ಕೆ ರೋಗ ರೈತರಿಗೆ ತೊಂದರೆ ಕೊಡುತ್ತಿದೆ. ಇದರಿಂದ ಸಾಕಷ್ಟು ಹಾನಿಯಾಗಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಇದನ್ನು ತೊಡೆದುಹಾಕಲು ಸಾಕಷ್ಟು ಪ್ರಮಾಣದಲ್ಲಿ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಈ ರೋಗದಿಂದ ತೊಂದರೆಗೆ ಒಳಗಾದ ರೈತರಿಗೆ ಈಗಾಗಲೇ ಸರ್ಕಾರದಿಂದ ಪರಿಹಾರ ಕೊಡಲಾಗಿದೆ ಎಂದು ತಿಳಿಸಿದರು.

ಎಲೆ ಚುಕ್ಕಿ ರೋಗವನ್ನು ತಡೆಗಟ್ಟಲು ಸಂಶೋಧನೆ ನಡೆಸಲು ಸರ್ಕಾರ ಮುಂದಾಗಿದ್ದು, ಈ ಸಂಬಂಧ ಸಂಶೋಧನೆಗೆ ಹಣ ಕೂಡ ಬಿಡುಗಡೆ ಮಾಡಲಾಗಿದೆ. ಇದನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದು ಚಲುವರಾಯಸ್ವಾಮಿ ಉತ್ತರಿಸಿದ್ದಾರೆ.

ಸಂಶೋಧನೆಗೆ 43 ಲಕ್ಷ ರೂ. ಬಿಡುಗಡೆ ಮಾಡಿದ್ದ ಸರ್ಕಾರ

ಮಲೆನಾಡು ಭಾಗದಲ್ಲಿ ಅಡಿಕೆಯನ್ನು ಕಾಡುತ್ತಿರುವ ಎಲೆ ಚುಕ್ಕೆ ರೋಗದ ಕುರಿತು ʻವಿಸ್ತಾರ ನ್ಯೂಸ್‌ʼ ನಡೆಸಿದ್ದ ʻಅಡಕತ್ತರಿಯಲ್ಲಿ ಅಡಕೆʼ ಎಂಬ ಅಭಿಯಾನದಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ (Congress Government) ಈ ರೋಗದ ನಿಯಂತ್ರಣಕ್ಕೆ ಅಗತ್ಯವಾಗಿರುವ ಔಷಧವನ್ನು ಕಂಡು ಹಿಡಿಯುವ ಸಂಶೋಧನೆಗೆ ಹಣಕಾಸಿನ ನೆರವನ್ನು ಈಚೆಗೆ ನೀಡಿತ್ತು.

ಮೊದಲ ಹಂತವಾಗಿ ಶಿವಮೊಗ್ಗ ತೋಟಗಾರಿಕಾ ವಿವಿಗೆ (Shimoga Horticulture University) ಸಂಶೋಧನೆಯ ಉದ್ದೇಶಕ್ಕಾಗಿಯೇ 43.61 ಲಕ್ಷ ಅನುದಾನ ಬಿಡುಗಡೆ ಮಾಡಿತ್ತು. ವಿಸ್ತಾರ ನ್ಯೂಸ್‌ನ ವರದಿಯ ಇಂಪ್ಯಾಕ್ಟ್‌ (Vistara News Impact) ಇದಾಗಿತ್ತು.

53,977.04 ಹೆಕ್ಟೇರ್‌ಗೂ ಹೆಚ್ಚು ಪ್ರದೇಶ ಎಲೆ ಚುಕ್ಕಿ ರೋಗ ಬಾಧಿತ

ರಾಜ್ಯದ 7 ಜಿಲ್ಲೆಗಳಲ್ಲಿನ 53,977.04 ಹೆಕ್ಟೇರ್‌ಗೂ ಹೆಚ್ಚಿನ ಅಡಿಕೆ ತೋಟಗಳು ಎಲೆಚುಕ್ಕಿ ರೋಗದಿಂದ ನಾಶವಾಗುವ ಹಂತ ತಲುಪಿವೆ. ಇದರ ನಿಯಂತ್ರಣಕ್ಕೆ ನಿರ್ದಿಷ್ಟವಾದ ಔಷಧ ಇಲ್ಲದಿರುವುದರಿಂದ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಮಲೆನಾಡು ಜಿಲ್ಲೆಗಳಲ್ಲಿ ಈ ರೋಗದ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ಶೇ.74 ಅಡಿಕೆ ತೋಟ ನಾಶವಾಗಿದೆ.

ಈ ರೋಗದ ನಿಯಂತ್ರಣಕ್ಕೆ ಔಷಧಿಯನ್ನು ಕಂಡು ಹಿಡಿಯಬೇಕೆಂಬ ಉದ್ದೇಶದಿಂದ ಶೃಂಗೇರಿ ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರಗಳನ್ನು ತೆರೆಯಲಾಗಿದೆಯಾದರೂ, ಇವುಗಳಿಗೆ ವಿಜ್ಞಾನಿಗಳನ್ನು ನಿಯೋಜಿಸಲಾಗಿರಲಿಲ್ಲ. ಅಲ್ಲದೆ, ಅಗತ್ಯ ಹಣಕಾಸಿನ ನೆರವೂ ನೀಡಲಾಗಿರಲಿಲ್ಲ. ಹೀಗಾಗಿ ಈ ಸಂಶೋಧನಾ ಕೇಂದ್ರಗಳು ಇದ್ದೂ ಇಲ್ಲದಂತಾಗಿದ್ದವು. ಈ ಕುರಿತು ಮಲೆನಾಡು ಪ್ರಾಂತ ಅಡಿಕೆ ಬೆಳೆಗಾರರ ಸಂಘ ಹಲವು ಬಾರಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಿತ್ತು. ಆದರೂ ಪ್ರಯೋಜನವಾಗಿರಲಿಲ್ಲ.

ಭರವಸೆ ನೀಡಿದ್ದ ತೋಟಗಾರಿಕಾ ಸಚಿವ

ಈ ವರ್ಷ ರೋಗ ವ್ಯಾಪಕವಾಗಿ ಹರಡುತ್ತಿರುವುದರಿಂದ ಅಡಿಕೆ ಬೆಳೆಗಾರರು ಆತಂಕಗೊಂಡಿದ್ದರು. ಎಲೆಚುಕ್ಕಿ ರೋಗದಿಂದ ತೋಟ ನಾಶವಾಗಿದ್ದರಿಂದ ಮುಂದೇನು ಮಾಡಬೇಕೆಂದು ತೋಚದೆ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಶೃಂಗೇರಿ ತಾಲೂಕಿನಲ್ಲಿ ಸುಮಾರು 400ಕ್ಕೂ ಹೆಚ್ಚು ಕುಟುಂಬಗಳು ಊರು ತೊರೆದಿದ್ದರು. ಈ ಬಗ್ಗೆ ʻವಿಸ್ತಾರ ನ್ಯೂಸ್‌ʼ ʻಅಡಕತ್ತರಿಯಲ್ಲಿ ಅಡಕೆʼ ಎಂಬ ಅಭಿಯಾನ ನಡೆಸಿ, ಸಮಗ್ರ ವರದಿ ಪ್ರಸಾರ ಮಾಡಿತ್ತು.
ಈ ಅಭಿಯಾನದ ಸಂದರ್ಭದಲ್ಲಿ ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ್ದ ರಾಜ್ಯದ ತೋಟಗಾರಿಕೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್‌ ಎಲೆಚುಕ್ಕೆ ರೋಗದ (Leaf spot Disease) ಮೂಲದ ಬಗ್ಗೆ ಉನ್ನತ ಸಂಶೋಧನೆ ನಡೆಸಲಾಗುವುದು ಮತ್ತು ಬೆಳೆಗಾರರಿಗೆ ಈ ರೋಗ ತಡೆಗೆ ಉಚಿತ ಔಷಧ (Free Medicine) ಒದಗಿಸಲಾಗುವುದು ಎಂದು ಭರವಸೆ ನೀಡಿದ್ದರು.

ಎಲೆ ಚುಕ್ಕೆ ರೋಗ ಮಲೆನಾಡು, ಅರೆ ಮಲೆನಾಡು, ಕಾರವಾರ, ಮಂಗಳೂರು ಭಾಗದಲ್ಲಿ ಜಾಸ್ತಿ ಕಾಣಿಸಿಕೊಂಡಿದೆ. ಇದರ ಬಗ್ಗೆ ಉನ್ನತ ಸಂಶೋಧನೆ ನಡೆಯಬೇಕಾಗಿದೆ. ಹಿಂದಿನ ಸರ್ಕಾರ ಕೂಡಾ ಈ ನಿಟ್ಟಿನಲ್ಲಿ ಸ್ಪಂದಿಸಿದೆ. ನಮ್ಮಲ್ಲೇ ಸಂಶೋಧನೆ ಮಾಡಿ ಸೂಕ್ತವಾದ ಔಷಧ ತಯಾರಿ‌ ಮಾಡಬೇಕು ಎನ್ನುವುದು ನಮ್ಮ ಉದ್ದೇಶ. ಅದಕ್ಕಾಗಿ ಅನುದಾನ ನೀಡುತ್ತೇವೆ ಎಂದು ಸಚಿವ ಮಲ್ಲಿಕಾರ್ಜುನ್‌ ವಿವರಿಸಿದ್ದರು. ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡ ಈ ಬಗ್ಗೆ ಗಮನ ನೀಡುವ ಭರವಸೆ ನೀಡಿದ್ದರು.

ಇದನ್ನೂ ಓದಿ: Illegal Arecanut: ರಾಜ್ಯದಲ್ಲಿ ಅಕ್ರಮ ಅಡಿಕೆ ದಂಧೆ? ಬೆಂಗಳೂರಲ್ಲಿ ಅಂತಾರಾಜ್ಯ ಜಾಲ ಪತ್ತೆ

ಮೊದಲ ಹಂತದ ಹಣ ಬಿಡುಗಡೆ

ವಿಸ್ತಾರದ ಅಭಿಯಾನದ ಫಲವಾಗಿ ಈಗ ಸಂಶೋಧನೆಗೆ 43.61 ಲಕ್ಷ ರೂ. ಬಿಡುಗಡೆ ಮಾಡಲಾಗಿತ್ತು. ನಿರ್ದಿಷ್ಟ ಫಲಾನುಧಾರಿತ ಸಂಶೋಧನೆಗೆ ಹಣ ಬಳಸಲು ಸೂಚನೆ ನೀಡಲಾಗಿದೆ. ಇದು ಮೊದಲ ಹಂತದ ಮೊತ್ತವಾಗಿದ್ದು,, ಅಗತ್ಯ ಬಿದ್ದರೆ ಮತ್ತೆ ನೀಡಲಾಗುತ್ತದೆ ಎಂದ ತೋಟಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳು ʻವಿಸ್ತಾರ ನ್ಯೂಸ್‌ʼಗೆ ತಿಳಿಸಿದ್ದರು. ಇದರಿಂದಾಗಿ ಸ್ಥಗಿತಗೊಂಡಿದ್ದ ಸಂಶೋಧನೆಗೆ ಮತ್ತೆ ಚಾಲನೆ ದೊರೆಯುವ ನಿರೀಕ್ಷೆ ಇದೆ.

ಈ ನಡುವೆ ಈಗ ಅಧಿವೇಶನದಲ್ಲಿಯೂ ಈ ವಿಷಯ ಪ್ರಸ್ತಾಪವಾಗಿದ್ದು, ಎಲೆ ಚುಕ್ಕಿ ರೋಗದ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Continue Reading

ಉಡುಪಿ

Billionaire Farmer : ಕುಂದಾಪುರದ ರಮೇಶ್‌ ನಾಯಕ್‌ ಬಿಲಿಯನೇರ್‌ ರೈತ; ಇವರ ತೋಟ ನೋಡಿದ್ರಾ?

Billionaire farmer: ಕುಂದಾಪುರದ ಪ್ರಗತಿಪರ ರೈತ, ಉದ್ಯಮಿಯೊಬ್ಬರು ಕೇಂದ್ರ ಸರ್ಕಾರದ ಬಿಲಿಯನೇರ್‌ ರೈತ ಪ್ರಶಸ್ತಿ ಪಡೆದಿದ್ದಾರೆ. ಹಾಗಿದ್ದರೆ ಅವರು ಮಾಡಿದ್ದೇನು? ಇಲ್ಲಿದೆ ಮಾಹಿತಿ.

VISTARANEWS.COM


on

Ramesh Nayak Billionaire farmer
Koo

ಉಡುಪಿ: ರೈತ ಅಂದ ಕೂಡಲೇ ಬಡವ, ಸಾಲ ಸುಳಿಗೆ ಸಿಲುಕಿದವರು ಎಂಬೆಲ್ಲಾ ಚಿತ್ರಣಗಳು ಮೂಡುವ ಕಾಲದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರದ ತೆಕ್ಕಟ್ಟೆಯ‌ ವ್ಯಕ್ತಿಯೊಬ್ಬರು ಬಿಲಿಯನೇರ್‌ ರೈತ (Billionaire Farmer) ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೇಂದ್ರ ಸರ್ಕಾರ ಕೊಡುವ ಈ ಪ್ರಶಸ್ತಿಯನ್ನು ಪಡೆದವರು ತೆಕ್ಕಟ್ಟೆಯ ರೈತ ಕಮ್‌ ಉದ್ಯಮಿ ರಮೇಶ್‌ ನಾಯಕ್‌ (Ramesh Nayak). ಡಿಸೆಂಬರ್‌ 7ರಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರೇ ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ರೈಸ್‌ಮಿಲ್ ಉದ್ಯಮದ ಜತೆಗೆ ಕೃಷಿ ಮೌಲ್ಯವರ್ಧನೆ ಹಾಗೂ ಗ್ರಾಮೀಣ ರೈತರಿಗೆ ಬೆನ್ನೆಲುಬಾಗಿ ನಿಂತ ಉದ್ಯಮಿ ರಮೇಶ್ ನಾಯಕ್ ಕೇಂದ್ರ ಸರಕಾರ ಕೊಡಮಾಡುವ ಬಿಲಿಯನೇರ್ ರೈತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ತೆಕ್ಕಟ್ಟೆಯ ರೈಸ್‌ಮಿಲ್ ಉದ್ಯಮಿ ರಮೇಶ್ ನಾಯಕ್ ಅವರು ಕುಂದಾಪುರ ತಾಲೂಕಿನ ಕೆದೂರು ಗ್ರಾಮದಲ್ಲಿ ಸುಮಾರು 13 ಎಕರೆ ಜಾಗದಲ್ಲಿ ಸುಮಾರು 11 ಜಾತಿಯ, ಸುಮಾರು 1,634 ವಿವಿಧ ತಳಿಯ ಹಣ್ಣಿನ ಗಿಡಗಳನ್ನು ನೆಟ್ಟು ಉತ್ತಮ ಫಸಲು ಕಂಡುಕೊಳ್ಳುವ ಮೂಲಕ ನಿಸರ್ಗ ಪ್ರೇಮ ಮೆರೆದು ಜಿಲ್ಲೆಯಲ್ಲಿ ಮಾದರಿಯಾಗಿದ್ದಾರೆ.

ವಾರ್ಷಿಕ ಸುಮಾರು ಕೋಟಿ ರೂ.ಗಳಿಗೂ ಅಧಿಕ ವಹಿವಾಟು ಮಾಡಿರುವ ಹಿನ್ನೆಲೆಯಲ್ಲಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಹೊಸದಿಲ್ಲಿಯಲ್ಲಿ ಡಿ. 7ರಂದು ನಡೆಯುವ ಕಾರ್ಯಕ್ರಮದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

Ramesh Nayak Billionaire farmer

ಯಾರಿವರು ರೈತ ರಮೇಶ್‌ ನಾಯಕ್‌?

ತೆಕ್ಕಟ್ಟೆ ರಮೇಶ್ ನಾಯಕ್, ಮೂಲತಃ ರೈಸ್ ಮಿಲ್ ಉದ್ಯಮಿ, ಇವರು ಹಣ್ಣುಗಳ ಬಗ್ಗೆ ಇರುವ ವಿಶೇಷ ಪ್ರೀತಿಯಿಂದ ವಿವಿಧ ಉಪ ಉಷ್ಣ ವಲಯದಲ್ಲಿ ಎಳೆಯುವ ವಿಶೇಷ ಹಣ್ಣುಗಳ ಬಗ್ಗೆ ಅಧ್ಯಯನ ಮಾಡಿ
ಕೆದೂರು ಗ್ರಾಮದಲ್ಲಿ ಸುಮಾರು 13 ಎಕ್ರೆ ಜಾಗದಲ್ಲಿ ಕಾಮಾಕ್ಷಿ ಫಾರ್ಮ್ಸ ಅನ್ನು 2019ರಲ್ಲಿ ಸ್ಥಾಪಿಸಿದರು. ರಂಬುಟನ್, 5 ವಿಧದ ಹಲಸು, ಮ್ಯಾಂಗೋಸ್ಟೀನ್, ದುರಿಯನ್, ಡ್ರಾಗನ್, ಪ್ಯಾಶನ್ ಹಣ್ಣು ಹೀಗೆ ವಿವಿಧ ಹಣ್ಣುಗಳನ್ನು ಯಾವುದೇ ಹಾನಿಕಾರಕ ರಾಸಾಯನಿಕಗಳನ್ನು ಬಳಸದೆ ಬೆಳೆಯುತ್ತಾರೆ.

ಹಣ್ಣುಗಳನ್ನು ಬೆಳೆಯುವುದು ಅಷ್ಟೇ ಅಲ್ಲದೆ ಹಣ್ಣುಗಳನ್ನು ಸ್ವಚ್ಛಗೊಳಿಸಿ ಕತ್ತರಿಸಿ ಬಾಕ್ಸ್ ಗಳಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡಿ ಕರಾವಳಿ ಕರ್ನಾಟಕದಲ್ಲಿ ಹಣ್ಣುಗಳ ವ್ಯಾಪಾರಕ್ಕೆ ಹೊಸ ಭಾಷ್ಯ ಬರೆದಿದ್ದು ರಮೇಶ್ ನಾಯಕ್ ಅವರ ಕಾಮಾಕ್ಷಿ ಫಾರ್ಮ್ಸ್.

Ramesh Nayak Billionaire farmer

ಹಲಸಿನ ಸೊಳೆ ಹೋಮ್‌ ಡೆಲಿವರಿ ಮಾಡ್ತಾರೆ!

ವಿವಿಧ ತಳಿಯ ಹಲಸಿನ ಹಣ್ಣನ್ನು ಬಾಕ್ಸ್ ಮಾಡಿ ತಳಿಗಳ ಬಗ್ಗೆ ಗ್ರಾಹಕರಿಗೆ ತಿಳಿಸಿ ಉತ್ತಮ ರುಚಿಯ ಶುಚಿಯಾದ ಹಲಸಿನ ಸೊಳೆಗಳ ಬಾಕ್ಸ್ ಅನ್ನು ಹೋಂ ಡೆಲಿವರಿ ಮೂಲಕ ಮನೆ ಮನೆಗೆ ತಲುಪಿಸಿ ಪ್ರಾರಂಭವಾದ ಹಣ್ಣುಗಳ ಬಾಕ್ಸ್ ಮಾರಾಟ ನಂತರದ ದಿನಗಳಲ್ಲಿ ಅನಾನಸ್, ಪಪಾಯ, ಡ್ರಾಗನ್ ಹೀಗೆ ತೋಟದಲ್ಲಿ ಬೆಳೆಯುವ ಎಲ್ಲ ಹಣ್ಣುಗಳಿಗೆ ಅಳವಡಿಸಿ ಅದರಲ್ಲಿ ಯಶ ಕಂಡಿದ್ದಾರೆ. ತೋಟದಿಂದ ಗ್ರಾಹಕರಿಗೆ ಎಂಬ ವಿಚಾರವನ್ನಿಟ್ಟು ಉತ್ತಮ ಗುಣಮಟ್ಟದ ಹಣ್ಣುಗಳನ್ನು ನೇರವಾಗಿ ಗ್ರಾಹರಿಗೆ ತಲುಪಿಸುವಲ್ಲಿ ಹೆಜ್ಜೆಯನ್ನು ಇಟ್ಟಿದ್ದಾರೆ.

ಇದನ್ನೂ ಓದಿ: Agriculture APP : ರೈತರಿಗಾಗಿ AI ಆಧಾರಿತ ಆ್ಯಪ್ ಶೀಘ್ರ; ಕೃಷಿ ಇಲಾಖೆಯಿಂದ ಮಹತ್ವದ ಹೆಜ್ಜೆ

ವಿದೇಶದಿಂದ ಆಮದಾಗುವ ಹಣ್ಣುಗಳನ್ನು ರುಚಿ ಮತ್ತು ಗುಣಮಟ್ಟದಲ್ಲಿ ಯಾವುದೇ ರಾಜಿಯಾಗದೇ ಹಾನಿಕಾರಕ ರಾಸಾಯನಿಕಗಳನ್ನೂ ಬಳಸದೆ ಬೆಳೆದು ಮಾರುಕಟ್ಟೆ ಮಾಡುವಲ್ಲಿ ಕಾಮಾಕ್ಷಿ ಫಾರ್ಮ್ಸ್ ಯಶ ಕಂಡಿದೆ.

Continue Reading

ಕರ್ನಾಟಕ

Illegal Arecanut: ರಾಜ್ಯದಲ್ಲಿ ಅಕ್ರಮ ಅಡಿಕೆ ದಂಧೆ? ಬೆಂಗಳೂರಲ್ಲಿ ಅಂತಾರಾಜ್ಯ ಜಾಲ ಪತ್ತೆ

Illegal Arecanut : ರಾಜ್ಯದಲ್ಲಿ ಅಡಿಕೆ ಅಕ್ರಮ ದಂಧೆಯ ವ್ಯವಸ್ಥಿತ ಜಾಲವೊಂದು ಹುಟ್ಟಿಕೊಂಡಿದೆ ಎಂದು ಗೊತ್ತಾಗಿದೆ. ಅಂತಾರಾಜ್ಯ ಜಾಲ ಇದಾಗಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 11 ಟನ್‌ ಅಕ್ರಮ ಅಡಿಕೆಯನ್ನು ವಶಕ್ಕೆ ಪಡೆದುಕೊಂಡಾಗ ಈ ವಿಷಯ ತಿಳಿದುಬಂದಿದೆ.

VISTARANEWS.COM


on

red arecanut
Koo

ಬೆಂಗಳೂರು: ರಾಜ್ಯದಲ್ಲಿ ಬೆಳೆ ನಷ್ಟ, ಎಲೆ ಚುಕ್ಕೆ ರೋಗ (Leaf spot disease for arecanut), ಬೆಲೆ ಕುಸಿತಗಳಂತಹ ಹೊಡೆತದಿಂದ ಕಂಗಾಲಾಗಿರುವ ಅಡಿಕೆ ಬೆಳಗಾರರಿಗೆ ಈಗ ಮತ್ತೊಂದು ಶಾಕಿಂಗ್‌ ನ್ಯೂಸ್‌. ರಾಜ್ಯದಲ್ಲಿ ಅಡಿಕೆ ಅಕ್ರಮ ದಂಧೆಯ ವ್ಯವಸ್ಥಿತ ಜಾಲವೊಂದು ಹುಟ್ಟಿಕೊಂಡಿದೆ ಎಂದು ಗೊತ್ತಾಗಿದೆ. ಅಂತಾರಾಜ್ಯ ಜಾಲ ಇದಾಗಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bangalore Kempegowda International Airport) 11 ಟನ್‌ ಅಕ್ರಮ ಅಡಿಕೆಯನ್ನು (Illegal Arecanut) ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದಾಗ ಈ ವಿಷಯ ತಿಳಿದುಬಂದಿದೆ.

ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ವಿಜಿಲೆನ್ಸ್ ವಿಭಾಗವು 11,500 ಕೆಜಿ ತೂಕದ 460 ಚೀಲ ಅಡಿಕೆಯನ್ನು (11 ಟನ್) ವಶಪಡಿಸಿಕೊಂಡಿತ್ತು. ಅಗತ್ಯ ಸಾರಿಗೆ ದಾಖಲೆಗಳನ್ನು ನೀಡದ ಹಿನ್ನಲೆಯಲ್ಲಿ ಸರಕು ಮೂಲದ ಬಗ್ಗೆ ಅನುಮಾನಗಳನ್ನು ಹುಟ್ಟು ಹಾಕಿದ್ದು, ಪರಿಶೀಲನೆ ನಡೆಸಿದಾಗ ಅಕ್ರಮ ಬಯಲಿಗೆ ಬಂದಿದೆ. ಹೀಗಾಗಿ ಅಂತಾರಾಜ್ಯಗಳಿಂದ ರಾಜ್ಯದ ಮಾರುಕಟ್ಟೆಯನ್ನು ಅಡಿಕೆ ಅಕ್ರಮವಾಗಿ ಪ್ರವೇಶ ಮಾಡುತ್ತಿದೆ ಎಂಬುದು ಈಗ ಕಳವಳಕಾರಿ ಸಂಗತಿಯಾಗಿದೆ. ಇಂತಹ ಅಕ್ರಮಕ್ಕೆ ಕೂಡಲೇ ಕಡಿವಾಣ ಹಾಕಬೇಕು ಎಂದು ಬೆಳೆಗಾರರು ಆಗ್ರಹಿಸುತ್ತಿದ್ದಾರೆ.

ಭಾರತದಲ್ಲಿ ಅಡಿಕೆ ಬೆಳೆಯುವ ಪ್ರಮುಖ ರಾಜ್ಯ ಕರ್ನಾಟಕವಾಗಿದೆ. ಭೂತಾನ್‌ನಿಂದ ಹಸಿ ಅಡಿಕೆ ಆಮದಿಗೆ ಸರ್ಕಾರ ಒಪ್ಪಿಗೆ ನೀಡಿದ್ದ ಸುದ್ದಿ ಹರಡುತ್ತಿದ್ದಂತೆ ರಾಜ್ಯದಲ್ಲಿ ರಾಶಿ ಕೆಂಪಡಿಕೆಯ ಬೆಲೆಯಲ್ಲಿ ಅಲ್ಪ ಕುಸಿತ ಕಂಡಿತ್ತು. ಇನ್ನು ಭೂತಾನ್, ಮ್ಯಾನ್ಮಾರ್‌ನಿಂದ ಅಕ್ರಮವಾಗಿ ಅಡಿಕೆಯನ್ನು ಭಾರತಕ್ಕೆ ಸಾಗಾಟ ಮಾಡಲಾಗುತ್ತಿದೆ. ಈ ಬಗ್ಗೆ ಕಠಿಣ ಕಾನೂನು ರೂಪಿಸಬೇಕು ಎಂಬ ಆಗ್ರಹಗಳು ಕೇಳಿಬರುತ್ತಿವೆ. ಇಲ್ಲದಿದ್ದರೆ ಅಡಿಕೆ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ಆತಂಕ ಎದುರಾಗಿದೆ.

ಈಶಾನ್ಯ ಪ್ರದೇಶಗಳಿಂದ ಬರುತ್ತಿವೆ ಕಳಪೆ ಗುಣಮಟ್ಟದ ಅಡಿಕೆ

ಈಶಾನ್ಯ ಪ್ರದೇಶಗಳಿಂದ ಕಳಪಡೆ ಗುಣಮಟ್ಟದ ಅಡಿಕೆಗಳು ಬರುತ್ತಿವೆ. ಅಸ್ಸಾಂ ಮತ್ತು ಮಣಿಪುರದಂತಹ ಪ್ರದೇಶಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಗುಣಮಟ್ಟ ಇಲ್ಲದ ಅಡಿಕೆಯು ಮಧ್ಯಪ್ರದೇಶ ಮತ್ತು ಬೆಂಗಳೂರಿಗೆ ಸರಬರಾಜಾಗುತ್ತಿದೆ. ಇದು ನೋಂದಾಯಿತರಲ್ಲದ ಗುಂಪಿಗೆ ಪೂರೈಕೆಯಾಗುತ್ತಿದ್ದು, ಈ ಜಾಲ ವ್ಯಾಪಕವಾಗಿ ವ್ಯಾಪಿಸುತ್ತಿದೆ ಎಂದು ತನಿಖೆ ವೇಳೆ ಗೊತ್ತಾಗಿದೆ.

ಮ್ಯಾನ್ಮಾರ್‌ನಿಂದ ಕಳ್ಳಸಾಗಣೆ?

ಸಂಬಂಧಿತ ರಾಜ್ಯಗಳ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಧಿಕಾರಿಗಳೊಂದಿಗೆ ಸಹಕರಿಸಿ, ನಡೆಸಿದ ವಿಚಾರಣೆಯು ಏರ್‌ವೇ ಬಿಲ್‌ಗಳಲ್ಲಿ ಹೆಸರುಗಳು ಮತ್ತು ಮೊಬೈಲ್ ಸಂಖ್ಯೆಗಳ ಬಳಕೆಯನ್ನು ಬಹಿರಂಗಪಡಿಸಿದೆ, ಮ್ಯಾನ್ಮಾರ್‌ನಿಂದ ಕಳ್ಳಸಾಗಣೆ ಆಗಿರಬಹುದು ಎನ್ನುವ ಸುಳಿವು ನೀಡಿದೆ. ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಡಿಕೆಯ ಬೆಲೆ ಕೆಜಿಗೆ 250 ರಿಂದ 300 ರೂಪಾಯಿ ಎಂದು ಹೇಳಲಾಗಿದೆ. ಹೀಗಾಗಿ ಇದು ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೆ, ಗುಣಮಟ್ಟದ ಅಡಿಕೆ ಮಿಕ್ಸ್‌ ಮಾಡಿದರೆ ಕರ್ನಾಟಕದ ಅಡಿಕೆ ಮೇಲಿನ ವಿಶ್ವಾಸಾರ್ಹತೆಯೂ ಹಾಳಾಗುವ ಭೀತಿ ಎದುರಾಗಿದೆ.

ಇದರ ಸಂಬಂಧ ಮತ್ತೊಂದು ಕಾರ್ಯಾಚರಣೆ ನಡೆಸಿದ್ದು, ಇ-ವೇ ಬಿಲ್ ಅನ್ನು ಮರುಬಳಕೆ ಮಾಡುವ ಅಡಿಕೆ ಸಾಗಿಸುವ ವಾಹನವನ್ನು ವಶಪಡಿಸಿಕೊಳ್ಳಲಾಗಿತ್ತು. ರೈತರ ಸೋಗಿನಲ್ಲಿದ್ದ ಅಕ್ರಮ ವ್ಯಾಪಾರಿಗಳನ್ನು ತೆರಿಗೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಡಿಜಿಟಲ್ ಸಾಕ್ಷ್ಯದ ಮೂಲಕ ತೆರಿಗೆ ವಂಚನೆಯಾಗಿರುವುದನ್ನು ಸಾಬೀತುಪಡಿಸಿ, ವಂಚಕರಿಂದ ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯಡಿಯಲ್ಲಿ 24.26 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ.

ಇದನ್ನೂ ಓದಿ: PSI Exam: ಪಿಎಸ್‌ಐ ಪರೀಕ್ಷೆ ಮುಂದೂಡಿಕೆ, ಜ. 23ಕ್ಕೆ ಫಿಕ್ಸ್‌: ಗೃಹ ಸಚಿವರ ಘೋಷಣೆ

ಪ್ರತ್ಯೇಕ ತಂಡವನ್ನು ರಚಿಸಿ ತನಿಖೆ ಮಾಡಲು ಆಗ್ರಹ

ಇಂತಹ ಅಕ್ರಮದ ವಿರುದ್ಧ ರಾಜ್ಯದಲ್ಲಿ ಸಂಘಟಿತ ಕಾರ್ಯಾಚರಣೆ ನಡೆಯಬೇಕು. ರಾಜ್ಯ ಸರ್ಕಾರ ತನಿಖೆಗೆ ಪ್ರತ್ಯೇಕ ತಂಡವನ್ನು ರಚಿಸಿ ಅಡಿಕೆ ಮಾರುಕಟ್ಟೆಯನ್ನು ಅಕ್ರಮಗಳಿಂದ ಮುಕ್ತ ಮಾಡಬೇಕು. ಅಂತಾರಾಜ್ಯ ಹಾಗೂ ವಿದೇಶಗಳಿಂದ ಬರುವ ಅಕ್ರಮ ಅಡಿಕೆಗೆ ಕಡಿವಾಣ ಹಾಕಬೇಕು. ಬೆಳಗಾರರಿಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡಲು ಕ್ರಮ ವಹಿಸಬೇಕು. ಈ ಮೂಲಕ ಅಡಿಕೆ ಬೆಳೆಗಾರರ ಹಿತ ಕಾಪಾಡಬೇಕು ಎಂದು ಅಡಿಕೆ ಬೆಳೆಗಾರರು ಆಗ್ರಹಿಸಿದ್ದಾರೆ.

Continue Reading

ಕರ್ನಾಟಕ

Ganga Kalyana Scheme : ಉಚಿತ ಬೋರ್‌ವೆಲ್‌ಗೆ ಇನ್ನೂ ಅರ್ಜಿ ಹಾಕಿಲ್ವಾ? ನಾಳೆಯೇ ಕೊನೇ ದಿನ!

Ganga Kalyana Scheme : ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅರ್ಜಿಯನ್ನು ಕರೆದಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಿದ ಅರ್ಹ ರೈತರಿಗೆ ಜಮೀನಿನಲ್ಲಿ ಬೋರ್‌ವೆಲ್‌ ಕೊರೆಸುವುದರ ಜತೆಗೆ ಪಂಪ್‌ಸೆಟ್ ಅಳವಡಿಸಿಕೊಳ್ಳಲು ಸರ್ಕಾರ ಸಹಾಯಧನವನ್ನು ನೀಡುತ್ತಲಿದೆ. ಒಟ್ಟು 1.5 ಲಕ್ಷ ರೂಪಾಯಿಯಿಂದ 3.50 ಲಕ್ಷ ರೂಪಾಯಿಗಳವರೆಗೆ ರೈತರು ಸರ್ಕಾರದಿಂದ ಸಹಾಯಧನವನ್ನು ಪಡೆಯಬಹುದಾಗಿದೆ.

VISTARANEWS.COM


on

Ganga Kalyana Scheme and pumpset
Koo

ಬೆಂಗಳೂರು: ರಾಜ್ಯದಲ್ಲಿ ಮಳೆ ಇಲ್ಲದೆ ಕಂಗೆಟ್ಟಿದ್ದ ರೈತರಿಗೆ ಸರ್ಕಾರದಿಂದ ಶುಭ ಸುದ್ದಿಯೊಂದು ಹೊರಬಿದ್ದಿದೆ. ಗಂಗಾ ಕಲ್ಯಾಣ ಯೋಜನೆಯ (Ganga Kalyana Scheme) ಅಡಿಯಲ್ಲಿ ರೈತರಿಗೆ ಉಚಿತ ಬೋರ್‌ವೆಲ್‌ (Free borewell) ಕೊರೆಸಲು ಸಹಾಯಧನ (subsidy) ನೀಡುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಮೊದಲೇ ಮಳೆ ಇಲ್ಲದೆ ನೀರಾವರಿ ಸಮಸ್ಯೆಯನ್ನು ಎದುರಿಸುತ್ತಿರುವ ಪರಿಶಿಷ್ಟ ಜಾತಿಯ ಅರ್ಹ ರೈತರಿಗೆ ಈ ಯೋಜನೆಯ ಫಲ ದೊರೆಯಲಿದೆ. ಆದರೆ, ಇದಕ್ಕೆ ಅರ್ಜಿ ಸಲ್ಲಿಸಲು ಇನ್ನು ಎರಡು ದಿನ ಮಾತ್ರವೇ ಬಾಕಿ ಇದೆ.

ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅರ್ಜಿಯನ್ನು ಕರೆದಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಿದ ಅರ್ಹ ರೈತರಿಗೆ ಜಮೀನಿನಲ್ಲಿ ಬೋರ್‌ವೆಲ್‌ ಕೊರೆಸುವುದರ ಜತೆಗೆ ಪಂಪ್‌ಸೆಟ್ ಅಳವಡಿಸಿಕೊಳ್ಳಲು ಸರ್ಕಾರ ಸಹಾಯಧನವನ್ನು ನೀಡುತ್ತಲಿದೆ. ಒಟ್ಟು 1.5 ಲಕ್ಷ ರೂಪಾಯಿಯಿಂದ 3.50 ಲಕ್ಷ ರೂಪಾಯಿಗಳವರೆಗೆ ರೈತರು ಸರ್ಕಾರದಿಂದ ಸಹಾಯಧನವನ್ನು ಪಡೆಯಬಹುದಾಗಿದೆ.

Ganga Kalyana Scheme and pumpset

ಇದನ್ನೂ ಓದಿ: Ration Card : ರೇಷನ್‌ ಕಾರ್ಡ್‌ಗೆ ಇ-ಕೆವೈಸಿ ಇಕ್ಕಟ್ಟು; ನಿಮ್ಮಿಂದ ಈ ಎಡವಟ್ಟಾದರೂ ಅನ್ನಭಾಗ್ಯ ಸಿಗಲ್ಲ!

ಸಣ್ಣ – ಅತಿ ಸಣ್ಣ ರೈತರಿಗೆ ಅನುಕೂಲ

ಗಂಗಾ ಕಲ್ಯಾಣ ಯೋಜನೆಯಡಿ ಈಗ ಅರ್ಹ ಸಣ್ಣ ಹಾಗೂ ಅತಿ ಸಣ್ಣ ರೈತರು (ಅಂದರೆ 1.20 ಎಕರೆಯಿಂದ 5 ಎಕರೆ ವರೆಗೆ ಜಮೀನು ಹೊಂದಿರುವವರು) ಬೋರ್‌ವೆಲ್‌ ಕೊರೆಸಿಕೊಂಡಲ್ಲಿ ಮುಂದಿನ ದಿನಗಳಲ್ಲಿ ನೀರಾವರಿ ಸಮಸ್ಯೆ ಅಷ್ಟಾಗಿ ಭಾದಿಸದು. ಇದರಿಂದ ಉತ್ತಮ ಬೆಳೆ ಪಡೆಯಬಹುದಾಗಿದ್ದು, ಆರ್ಥಿಕವಾಗಿಯೂ ಸ್ವಾವಲಂಬನೆ ಸಾಧಿಸಬಹುದು ಎಂಬ ನಿಟ್ಟಿನಲ್ಲಿ ಈ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆ ಅಡಿಯ ವಿವಿಧ ನಿಗಮಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

Ganga kalyana scheme

ಅರ್ಹರು ಯಾರು? ದಾಖಲೆ ಏನು ಬೇಕು?

  • ಪರಿಶಿಷ್ಟ ಜಾತಿ/ ಪಂಗಡದವರಾಗಿರಬೇಕು
  • ಜಾತಿ ಪ್ರಮಾಣಪತ್ರ
  • ಆದಾಯ ಮಿತಿ (ಗ್ರಾಮೀಣ ಪ್ರದೇಶವಾದರೆ 1.5 ಲಕ್ಷ ರೂ., ನಗರ ಪ್ರದೇಶವಾದರೆ 2 ಲಕ್ಷ ರೂ.)
  • ಕನಿಷ್ಠ 21 ವರ್ಷ ವಯೋಮಿತಿ
  • ಸಣ್ಣ ಹಿಡುವಳಿದಾರರ ಪ್ರಮಾಣಪತ್ರ
  • ಇತ್ತೀಚಿನ ಪಹಣಿ
  • ಆದಾಯ ಪ್ರಮಾಣ ಪತ್ರ
  • ಕುಟುಂಬದ ಪಡಿತರ ಚೀಟಿ
  • ಬ್ಯಾಂಕ್ ಪಾಸ್ ಬುಕ್
  • ಆಧಾರ್ ಕಾರ್ಡ್

ನ. 29 ಕೊನೇ ದಿನ

ಅರ್ಹ ಫಲಾನುಭವಿಗಳು ಈ ಯೋಜನೆ ಅಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ನವೆಂಬರ್ 29 ಕೊನೇ ದಿನವಾಗಿದೆ. ಗ್ರಾಮ ಒನ್, ಬೆಂಗಳೂರು ಒನ್, ಅಟಲ್ ಜನಸ್ನೇಹಿ ಸೇವಾ ಕೇಂದ್ರ ಇಲ್ಲವೇ ಸೇವಾಸಿಂಧು ಪೋರ್ಟಲ್‌ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: HSRP Number Plate : ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಇನ್ನೂ ಹಾಕಿಸಿಲ್ವಾ, ಟೆನ್ಶನ್‌ ಬೇಡ! ಯಾಕಂದ್ರೆ..?

ಮಾಹಿತಿ ಬೇಕಿದ್ದರೆ ಸಹಾಯವಾಣಿಗೆ ಕರೆ ಮಾಡಿ

ಈ ಯೋಜನೆ ಬಗ್ಗೆ ಗೊಂದಲಗಳಿದ್ದರೆ, ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದರೆ ಕಲ್ಯಾಣ ಮಿತ್ರ 24×7 ಸಹಾಯವಾಣಿ 9482300400 ಅಥವಾ ಸೋಷಿಯಲ್‌ ಮೀಡಿಯಾ X ಖಾತೆ @SWDGok ಗೆ ಸಂಪರ್ಕ ಮಾಡಬಹುದು.

Continue Reading
Advertisement
cm k chandrashekar rao
ದೇಶ3 mins ago

K Chandrasekhar Rao: ರೇವಂತ್‌ ರೆಡ್ಡಿ ಸಿಎಂ ಆದ ದಿನವೇ ಜಾರಿ ಬಿದ್ದು ಸೊಂಟ ಮುರಿದುಕೊಂಡ ಕೆಸಿಆರ್‌

Jasprit bumarh
ಕ್ರಿಕೆಟ್8 mins ago

Jasprit Bumrah : ಬುಮ್ರಾ ಚಿತ್ರ ಹಾಕಿ ಎಲ್ಲರಿಗೂ ಸಂದೇಶ ರವಾನಿಸಿದ ಮುಂಬಯಿ ಇಂಡಿಯನ್ಸ್​​​

Karthik threw the sandal to vinay Ugly Fight
ಬಿಗ್ ಬಾಸ್24 mins ago

BBK SEASON 10: ಚಪ್ಪಲಿ ಎಸೆದೆ ಕಾರ್ತಿಕ್‌; ನನಗೆ ಮರ್ಯಾದೆ ಇಲ್ವಾ? ಆಚೆ ಹೋಗ್ಬೇಕು ಎಂದ ವಿನಯ್‌!

RBI governor Shaktikanta Das
ದೇಶ48 mins ago

RBI monetary policy: ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆಯ ನಿರ್ಧಾರ ಇಂದು; ಬಡ್ಡಿ ದರ ಏರುತ್ತಾ?

Stamp duty
ಕರ್ನಾಟಕ56 mins ago

Assembly Session : ಭೂಮಿ ಬೆಲೆ ಹೆಚ್ಚಿಸಿದ್ದ ಸರ್ಕಾರದಿಂದ ಮುದ್ರಾಂಕ ಶುಲ್ಕವೂ ಹೆಚ್ಚಳ

dengue flue
ಆರೋಗ್ಯ1 hour ago

Dengue Fever: ಸೊಳ್ಳೆಗಳಿಂದ ದೂರವಿರಿ! ಹೆಚ್ಚುತ್ತಿರುವ ಡೆಂಗ್ಯೂ ಜ್ವರ, 15 ಸಾವಿರ ಪ್ರಕರಣ ದಾಖಲು

Vistara Editorial, Government should conduct exam without any lapse
ಕರ್ನಾಟಕ2 hours ago

Cabinet Meeting: ಕೃಷಿಕರಲ್ಲದವರಿಂದ ಕೃಷಿ ಭೂಮಿ ಖರೀದಿಗೆ ಖೊಕ್‌, ವಿಧೇಯಕ ವಾಪಸ್ ಪಡೆಯಲು ಸಂಪುಟ ತೀರ್ಮಾನ

Raja Marga Father and Daughter
ಅಂಕಣ2 hours ago

Raja Marga Column : 13 ವರ್ಷದ ನನ್ನ ಮಗಳು ಒಮ್ಮಿಂದೊಮ್ಮೆಗೆ ಮಂಕಾಗಿದ್ದು ಯಾಕೆ?

Hair Care Tips
ಆರೋಗ್ಯ2 hours ago

Hair Care Tips: ಕೂದಲು ಚೆನ್ನಾಗಿರಬೇಕೆಂದರೆ ಯಾವ ಆಹಾರ ಸೇವಿಸಬೇಕು?

Heavy Rain warning In karnataka
ಉಡುಪಿ3 hours ago

Karnataka Weather : ಬಟ್ಟೆ ತೊಳೆಯೋಕೆ ವೀಕೆಂಡ್‌ವರೆಗೂ ಕಾಯ್ಬೇಡಿ; ಇನ್ನೊಂದು ವಾರ ಭಾರಿ ಮಳೆ!

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Dina Bhavishya
ಪ್ರಮುಖ ಸುದ್ದಿ4 hours ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ15 hours ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ15 hours ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ21 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ1 day ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ2 days ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ2 days ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ2 days ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ2 days ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ2 days ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

ಟ್ರೆಂಡಿಂಗ್‌