Site icon Vistara News

Book Release: ನ.19ರಂದು ಸಾವಣ್ಣ ಪ್ರಕಾಶನದ 14ನೇ ವಾರ್ಷಿಕೋತ್ಸವ, ಪುಸ್ತಕ ಬಿಡುಗಡೆ

sawanna prakashana

ಬೆಂಗಳೂರು: ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಾವಣ್ಣ ಪ್ರಕಾಶನದ 14ನೇ ವರ್ಷದ ವಾರ್ಷಿಕೋತ್ಸವ ಹಾಗೂ 4 ಕೃತಿಗಳ ಪುಸ್ತಕೋತ್ಸವ (Book Release) ಮತ್ತು ಕಥಾಸಂಗಮ ಕಾರ್ಯಕ್ರಮ ನವೆಂಬರ್‌ 19ರಂದು ಭಾನುವಾರ ನಡೆಯಲಿದೆ.

ಕಾರ್ಯಕ್ರಮದಲ್ಲಿ ನಾಲ್ಕು ಕೃತಿಗಳು ಬಿಡುಗಡೆಯಾಗಲಿವೆ. ಜೋಗಿ ಅವರ ಕತೆ ಬರೆಯುವ ಕುರಿತ ʼಕಥೆಗಾರರ ಕೈಪಿಡಿʼ, ಗೋಪಾಲಕೃಷ್ಣ ಕುಂಟಿನಿ ಅವರ ರಾಜಕೀಯ ಕುರಿತ ನೆನಪುಗಳ ಸಂಕಲನ ʼಓನ್ಲಿ ಪಾಲಿಟಿಕ್ಸ್‌ʼ, ಎನ್.ಸಂಧ್ಯಾರಾಣಿ, ಭಾರತಿ ಬಿ.ವಿ., ಪೂರ್ಣಿಮಾ ಮಾಳಗಮನಿ ಅವರ ಪ್ರೇಮಕಥೆಗಳ ಸಂಕಲನ ʼಲವ್‌ ಟುಡೇʼ ಬಿಡುಗಡೆಯಾಗಲಿವೆ.

ಬೆಂಗಳೂರಿನ ಬಸವನಗುಡಿಯ ವಾಡಿಯಾ ಸಭಾಂಗಣ, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ನಲ್ಲಿ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಸಾವಣ್ಣ ಪ್ರಕಾಶನದ ಮಾಲಿಕ ಜಮೀಲ್‌ ಸಾವಣ್ಣ ತಿಳಿಸಿದ್ದಾರೆ.

14 ವರ್ಷಗಳಿಂದ ಉತ್ತಮ ಗುಣಮಟ್ಟದ ಕೃತಿಗಳನ್ನು ಕನ್ನಡಕ್ಕೆ ನೀಡುತ್ತಿರುವ ಸಾವಣ್ಣ ಪ್ರಕಾಶನ, ನೂರಕ್ಕೂ ಅಧಿಕ ಪ್ರಕಟಣೆಗಳನ್ನು ಇದುವರೆಗೆ ನೀಡಿದೆ. ಚಿತ್ರನಟ ರಮೇಶ್‌, ಉಪೇಂದ್ರರ ಕೃತಿಗಳನ್ನೂ ಎಸ್‌ಪಿ ಬಾಲಸುಬ್ರಹ್ಮಣ್ಯಂ ಮುಂತಾದವರ ಸ್ಮೃತಿಕಥನಗಳನ್ನೂ ಪ್ರಕಟಿಸಿದೆ.

ಇದನ್ನೂ ಓದಿ: Sunday Read: ಜೋಗಿ ಹೊಸ ಪುಸ್ತಕ: ಚಿಯರ್ಸ್: ಅಮರ್ ಅಂತೋಣಿ

Exit mobile version