Site icon Vistara News

Jnanpith Award : ಗೋವಾದ ಸಾಹಿತಿ ದಾಮೋದರ್‌ ಮೌಜೊಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ

Jnanpith Award given to Damodar Maujo

#image_title

ಪಣಜಿ: ಗೋವಾದ ಸಾಹಿತಿ ದಾಮೋದರ್‌ ಮೌಜೊ ( Damodar Mauzo) ಅವರಿಗೆ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಯನ್ನು ಪಣಜಿಯಲ್ಲಿ (Jnanpith Award) ಗೋವಾ ರಾಜ್ಯಪಾಲ ಪಿ.ಎಸ್‌ ಶ್ರೀಧರನ್‌ ಪಿಳ್ಳೈ ಪ್ರದಾನ ಮಾಡಿದರು. ಕೊಂಕಣಿ ಸಾಹಿತ್ಯದಲ್ಲಿ ವಿಖ್ಯಾತರಾಗಿರುವ ದಾಮೋದರ್‌ ಅವರಿಗೆ ಜ್ಞಾನಪೀಠದ ಗೌರವ ಲಭಿಸಿದೆ. ರಾಜ್‌ ಭವನದಲ್ಲಿ ನಡೆದ ಸಮಾರಂಭದಲ್ಲಿ ಹೆಸರಾಂತ ಕವಿ ಗುಲ್ಜಾರ್‌ ಭಾಗವಹಿಸಿದ್ದರು.

ದಾಮೋದರ್‌ ಮೌಜೊ ಅವರು ಕೊಂಕಣಿಯಲ್ಲಿ 25 ಪುಸ್ತಕಗಳನ್ನು ರಚಿಸಿದ್ದಾರೆ. ಇಂಗ್ಲಿಷ್‌ನಲ್ಲಿ ಒಂದು ಪುಸ್ತಕ ಬರೆದಿದ್ದಾರೆ. ಅವರ ಹಲವು ಕೃತಿಗಳು ನಾನಾ ಭಾಷೆಗಳಿಗೆ ಅನುವಾದವಾಗಿದೆ. ಕೊಂಕಣಿ ಕೆಲ ಲಕ್ಷ ಮಂದಿ ಮಾತನಾಡುವ ಭಾಷೆಯಾಗಿದ್ದರೂ, ಅದರ ಸಾಹಿತ್ಯ ಶ್ರೀಮಂತಿಕೆ ದೊಡ್ಡದು ಎಂದು ರಾಜ್ಯಪಾಲ ಶ್ರೀಧರನ್‌ ಪಿಳ್ಳೈ ಹೇಳಿದರು.

ಸಾಹಿತಿ ಚಾರ್ಲ್ಸ್‌ ಡಿಕನ್ಸ್‌ ಮತ್ತು ದಾಮೋದರ್‌ ಮೌಜೊ ತಮ್ಮ ಸಾಹಿತ್ಯದಲ್ಲಿ ಅನಾಥ ಮಕ್ಕಳ ಬದುಕು-ಬವಣೆಗಳನ್ನು ಬಿಂಬಿಸಿದ್ದಾರೆ. ಸಮಾಜಕ್ಕೆ ಕನ್ನಡಿ ಹಿಡಿದಿದ್ದಾರೆ ಎಂದು ಪಿಳ್ಳೈ ವಿವರಿಸಿದರು. ಮೌಜೊ ತಮ್ಮ ಕಾರ್ಮೆಲಿನ್ ಕೃತಿಗೆ 1983ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿದ್ದರು.

ಜ್ಞಾನಪೀಠ ಪಡೆಯುತ್ತಿರುವ ಗೋವಾದ ಎರಡನೇ ಸಾಹಿತಿ ಅವರಾಗಿದ್ದಾರೆ. ಈ ಹಿಂದೆ 2008ರಲ್ಲಿ ರವೀಂದ್ರ ಕೇಳ್ಕರ್‌ ಅವರು ಪಡೆದಿದ್ದರು. ದಿಲ್ಲಿಯಲ್ಲಿದ್ದ ಗೋವಾ ಸಿಎಂ ಪ್ರಮೋದ್‌ ಸಾವಂತ್‌ ಅವರು ಆನ್‌ಲೈನ್‌ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: Literary Award: ಲೇಖಕಿ ವೈದೇಹಿಗೆ ನೃಪತುಂಗ ಪ್ರಶಸ್ತಿ, ಬೇಲೂರು ರಘುನಂದನ್‌ ಸೇರಿ ಐವರಿಗೆ ಮಯೂರ ವರ್ಮ ಪ್ರಶಸ್ತಿ ಪ್ರದಾನ

Exit mobile version