ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾಗಿ ನಾಲ್ಕನೇ ಬಾರಿಗೆ ಹಿರಿಯ ಕಾಂಗ್ರೆಸ್ ನಾಯಕ, ಚಿಂತಕ ಡಾ. ಬಿ ಎಲ್ ಶಂಕರ್ ಆಯ್ಕೆಯಾಗಿದ್ದಾರೆ. ಮುಂದಿನ ಮೂರು ವರ್ಷ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುಮಾಡಿರುವ ಚಿತ್ರಕಲಾ ಪರಿಷತ್ತಿನ ಪದಾಧಿಕಾರಿಗಳ ಆಯ್ಕೆಗಾಗಿ ಇಂದು (ಜೂ. ೨೬) ನಡೆದ ಚುನಾವಣೆಯಲ್ಲಿ ಶಂಕರ್ ಮತ್ತೆ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಪ್ರೊ. ಕೆ ಎಸ್ ಅಪ್ಪಾಜಯ್ಯ, ಪ್ರಭಾಕರ್ ಟಿ ಮತ್ತು ಎ. ರಾಮಕೃಷ್ಣಪ್ಪ ಆಯ್ಕೆಯಾದರೆ ಪ್ರಧಾನ ಕಾರ್ಯದರ್ಶಿಯಾಗಿ ಶಶಿಧರ್ ಎಸ್.ಎನ್. ಆಯ್ಕೆಯಾಗಿದ್ದಾರೆ. ಸಹಾಯಕ ಕಾರ್ಯದರ್ಶಿಯಾಗಿ ಟಿ. ಚಂದ್ರಶೇಖರ್, ಬಿ.ಎಲ್ ಶ್ರೀನಿವಾಸ, ಖಜಾಂಚಿಯಾಗಿ ಡಾ. ಲಕ್ಷ್ಮೀಪತಿ ಬಾಬು.ಎನ್ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಟಿ ವಿ ತಾರಕೇಶ್ವರಿ, ಆರ್ ಜಿ ಬಂಡಾರಿ, ಸಿ.ಪಿ. ಉಷಾರಾಣಿ, ವಿನೋಧಾ ಬಿ.ವೈ. ಸುಬ್ರಹ್ಮಣ್ಯ ಕುಕ್ಕೆ, ಅಮ್ರಿತ ವಿಮಲನಾಥನ್ ಎಸ್., ಪಿ. ದಿನೇಶ್ ಮಗರ್ ಮುಂದಿನ ಮೂರು ವರ್ಷ ಕಾರ್ಯನಿರ್ವಹಿಸಲಿದ್ದಾರೆ.
೬೨ ವರ್ಷಗಳ ಹಿಂದೆ (೧೯೬೦) ಸ್ಥಾಪನೆಯಾದ ಈ ಪರಿಷತ್ ೧೮ ಗ್ಯಾಲರಿಗಳನ್ನು ಹೊಂದಿದೆ. ಚಿತ್ರಕಲಾ ಶಾಲೆ, ಕಾಲೇಜನ್ನೂ ಹೊಂದಿರುವ ಈ ಪರಿಷತ್ ಪ್ರತಿವರ್ಷ ನಡೆಸುವ ಚಿತ್ರಸಂತೆ ವಿಶ್ವ ವಿಖ್ಯಾತಿ ಪಡೆದಿದೆ.
ಇದನ್ನೂ ಓದಿ| ನಿಮ್ಮ ಮಕ್ಕಳಿಗೆ ಬೇಸಿಗೆಯಲ್ಲಿ ಹೇಗೆ ಸಹಾಯ ಮಾಡಬೇಕು?: ಇಲ್ಲಿವೆ ಪ್ರಮುಖ ಟಿಪ್ಸ್